ಮುಂಬೈ: ವಾಣಿಜ್ಯ ನಗರಿಯಲ್ಲಿ ಮಳೆ ಮತ್ತೊಮ್ಮೆ ಮುಂಬೈ ನಾಗರೀಕರ ತೊಂದರೆ ತಂದೊಡ್ಡಿದೆ. ಮಂಗಳವಾರ ಮುಂಜಾನೆಯಿಂದ ತಡರಾತ್ರಿವರೆಗೆ ಮಾಯನಗರಿಯಲ್ಲಿ ಭಾರಿ ಮಳೆಯಾಗಿದ್ದು, ನಗರದ ಪ್ರಮುಖ ಪ್ರದೇಶಗಳಲ್ಲಿ ನೀರು ಪ್ರವಾಹದಂತೆ ಹರಿಯುತ್ತಿದೆ.
ವ್ಯಾಪಕ ಮಳೆಯಿಂದಾಗಿ ಹಳಿಗಳ ಮೇಲೆ ನೀರು ತುಂಬಿದ್ದರಿಂದ ಮುಂಬೈನ ಸಿಯಾನ್ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ಸಿಲುಕಿಕೊಂಡಿದ್ದರು. ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ಉಪನಗರ ಮುಂಬೈನಲ್ಲಿ ಮಂಗಳವಾರ ಒಂದೇ ದಿನ 23.4 ಮಿ.ಮೀ. ಮಳೆಯಾಗಿದೆ. ಇದು ಸಾಮಾನ್ಯ ಮಳೆಗಿಂತ ಶೇ 129ರಷ್ಟು ಸುರಿದಿದೆ.
-
#WATCH Maharashtra: Passengers were stranded at Sion railway station in Mumbai yesterday due to waterlogging following heavy downpour in the area. pic.twitter.com/cR3h3yCEab
— ANI (@ANI) September 22, 2020 " class="align-text-top noRightClick twitterSection" data="
">#WATCH Maharashtra: Passengers were stranded at Sion railway station in Mumbai yesterday due to waterlogging following heavy downpour in the area. pic.twitter.com/cR3h3yCEab
— ANI (@ANI) September 22, 2020#WATCH Maharashtra: Passengers were stranded at Sion railway station in Mumbai yesterday due to waterlogging following heavy downpour in the area. pic.twitter.com/cR3h3yCEab
— ANI (@ANI) September 22, 2020
ಮುಂಬೈನ ಗೋರೆಗಾಂವ್ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ರಸ್ತೆಗಳ ಮೇಲೆಲ್ಲ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಮುಂಬೈನ ಉಪನಗರಗಳಾದ ಅಂಧೇರಿ, ಜೋಗೇಶ್ವರಿ, ಗೋರೆಗಾಂವ್, ಮಲಾಡ್ ಮತ್ತು ಬೊರಿವಾಲಿಯು ಮಂಗಳವಾರ ಬೆಳಗ್ಗೆಯಿಂದ ಸುಮಾರು 70 ಮಿ.ಮೀ. ಮಳೆಯಾಗಿದೆ ಎಂದು ಐಎಂಡಿ ಮುಂಬೈನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಳೆಯಿಂದಾಗಿ ವಿಲೇ ಪಾರ್ಲೆ ಮತ್ತು ರಾಮ್ ಮಂದಿರ ಪ್ರದೇಶಗಳಲ್ಲಿ ಕೆಲವು ಸ್ಥಳಗಳಲ್ಲಿ ಟ್ರಾಫಿಕ್ ಜಾಮ್ ಆಗಿರುವ ವರದಿಯಾಗಿದೆ. ಬುಧವಾರದಿಂದ ಮಳೆಯ ತೀವ್ರತೆ ಕಡಿಮೆಯಾಗಲಿದೆ ಎಂದರು.