ಗಜಪತಿ (ಒಡಿಶಾ): ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ತೆಲಂಗಾಣ, ಆಂಧ್ರಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದೆ. ಇದೀಗ ಚಂಡಮಾರುತ ಒಡಿಶಾದತ್ತ ಲಗ್ಗೆ ಇಟ್ಟಿದ್ದು, ಧಾರಾಕಾರ ಮಳೆಯಾಗುತ್ತಿದೆ. ಗಜಪತಿ ಜಿಲ್ಲೆಯಲ್ಲಿ ನೆರೆ ಭೀತಿ ಶುರುವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಜನರನ್ನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ.
ಜಿಲ್ಲೆಯ 12 ಹಳ್ಳಿಗಳಿಂದ ಸುಮಾರು 500 ಕ್ಕೂ ಹೆಚ್ಚು ಜನರನ್ನ ಶಿಫ್ಟ್ ಮಾಡಲಾಗಿದೆ ಎಂದು ತಹಶೀಲ್ದಾರ್ ಸಂತ ಸ್ವರೂಪ್ ಮಿಶ್ರಾ ತಿಳಿಸಿದ್ದಾರೆ. ಮಂಗಳವಾರ ಆಂಧ್ರದ ಕರಾವಳಿಯನ್ನ ದಾಟಿದ ಚಂಡಮಾರುತ ಒಡಿಶಾದ ಗಜಪತಿ, ಗಂಜಾಂ, ರಾಯಗಡ, ಕೊರಪುಟ್, ನಬರಂಗ್ಪುರ ಮತ್ತು ಮಲ್ಕಂಗಿರಿಗೆ ಎಂಟ್ರಿ ಕೊಟ್ಟಿದ್ದು, ಧಾರಾಕಾರ ಮಳೆಯಾಗುತ್ತಿದೆ. ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿದ ಮಿಶ್ರಾ, ಸಂತ್ರಸ್ತರಿಗೆ ನೀಡಲಾಗಿರುವ ಊಟ, ವಸತಿ ವ್ಯವಸ್ಥೆ ಬಗ್ಗೆ ಪರಿಶೀಲಿಸಿದರು.
ಪುರಿ, ಕಂಧಮಾಲ್, ಕಲಹಂಡಿ ಮತ್ತು ಜಗತ್ಸಿಂಗ್ ಪುರ ಸೇರಿದಂತೆ 6 ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ, ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಐಎಂಡಿ ನಿರ್ದೇಶಕ ಹೆಚ್.ಆರ್.ಬಿಸ್ವಾಸ್ ಸೂಚನೆ ನೀಡಿದ್ದಾರೆ.