ETV Bharat / bharat

ಕೋವಿಡ್‌ ಪತ್ತೆ ಹಚ್ಚಲು 49 ಖಾಸಗಿ ಲ್ಯಾಬ್‌ಗಳಿಗೆ ಅನುಮತಿ: ಕೇಂದ್ರ ಆರೋಗ್ಯ ಇಲಾಖೆ - ಕೇಂದ್ರ ಆರೋಗ್ಯ ಇಲಾಖೆ

ಮಹಾಮಾರಿ ಕೊರೊನಾ ವಿರುದ್ಧ ಭಾರತ ಹೋರಾಟ ನಡೆಸಿದ್ದು, ಕೇಂದ್ರ ಸರ್ಕಾರ ಲಾಕ್​ಡೌನ್​ ಆದೇಶ ಹೊರಹಾಕಿದೆ. ಇದರ ಮಧ್ಯೆ ಕೇಂದ್ರ ಆರೋಗ್ಯ ಇಲಾಖೆ ಪ್ರತಿದಿನ ಕೋವಿಡ್​-19 ಬಗ್ಗೆ ಮಾಹಿತಿ ನೀಡುತ್ತಿದೆ.

Health Ministry Joint Secretary Lav Aggarwal

author img

By

Published : Mar 31, 2020, 5:55 PM IST

ಮುಂಬೈ: ಈವರೆಗೆ 42,788 ಮಂದಿಯ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ನಮ್ಮಲ್ಲಿ 123 ಲ್ಯಾಬ್‌ಗಳು ಕಾರ್ಯನಿರ್ವಹಿಸುತ್ತಿವೆ. 49 ಖಾಸಗಿ ಲ್ಯಾಬ್‌ಗಳಿಗೆ ಅನುಮತಿ ನೀಡಲಾಗಿದೆ. ನಿನ್ನೆ 399 ರೋಗಿಗಳನ್ನು ಖಾಸಗಿ ಲ್ಯಾಬ್‌ನಲ್ಲಿ ಪರೀಕ್ಷೆ ಮಾಡಲಾಗಿದೆ.

ದೇಶದಲ್ಲಿ ಅಗತ್ಯ ವಸ್ತುಗಳ ಹೆಚ್ಚಳ ಮತ್ತು ಪೂರೈಕೆಗಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ದಕ್ಷಿಣ ಕೊರಿಯಾ, ಟರ್ಕಿ ಹಾಗೂ ವಿಯಾಟ್ನಂ ದೇಶಗಳನ್ನು ಗುರುತಿಸಿದೆ. ಸ್ಥಳೀಯ ಉತ್ಪಾದಕರೊಂದಿಗೆ ಸೇರಿ ಡಿಆರ್‌ಡಿಒ ಕೂಡ ಎನ್‌95 ಮಾಸ್ಕ್‌ಗಳ ಪೂರೈಕೆಯನ್ನು ಹೆಚ್ಚಿಸುತ್ತಿದೆ.

ನಿಜಾಮುದ್ದೀನ್‌ ಪ್ರದೇಶದ ಬಗ್ಗೆ ಗೌರವವಿದೆ. ಈಗಿನ ಪರಿಸ್ಥಿತಿಯಲ್ಲಿ ಯಾರ ತಪ್ಪಿನಿಂದ ಹೀಗಾಗಿದೆ ಎಂದು ಹುಡುಕಲು ಇದು ಸಕಾಲವಲ್ಲ. ಯಾವುದೇ ಪ್ರದೇಶದಲ್ಲಿನ ಜನರ ಆರೋಗ್ಯ ಕಾಪಾಡಿಕೊಳ್ಳಲು ಮೊದಲ ಆದ್ಯತೆ ನೀಡಲಾಗುತ್ತದೆ ಅಂತ ಹೇಳಿದ್ದಾರೆ. ಇಲ್ಲಿಯವರೆಗೆ 42,788 ಸ್ಯಾಂಪಲ್ಸ್​​ ಟೆಸ್ಟ್​ ಮಾಡಲಾಗಿದ್ದು, ನಿನ್ನೆ ಒಂದೇ ದಿನ 4,346 ಮಂದಿಯ ಸ್ಯಾಂಪಲ್​ ಟೆಸ್ಟ್​ ಮಾಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಕೋವಿಡ್‌19ಗೆ ವ್ಯಾಕ್ಸಿನ್‌ ಕಂಡುಹಿಡಿಯುವ ಕಾರ್ಯ ಮುಂದುವರಿದಿದೆ. ಈ ಸಂಬಂಧ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ, ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ, ಜೈವಿಕ ತಂತ್ರಜ್ಞಾನ ವಿಭಾಗಗಳು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಜೊತೆಗೂಡಿ ಕೆಲಸ ಮಾಡುತ್ತಿವೆ ಎಂದು ಐಸಿಎಂಆರ್‌ನ ಹಿರಿಯ ಅಧಿಕಾರಿ ರಾಮನ್‌ ಗಂಗಾಕೇಡ್ಕರ್‌ ತಿಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.