ತಮಿಳುನಾಡು(ಕಲ್ಲಕುರ್ಚಿ): ವಿದ್ಯಾರ್ಥಿಗಳಲ್ಲಿ ಶಿಸ್ತು ಬೆಳೆಸುವ ನಿಟ್ಟಿನಲ್ಲಿ ಮುಖ್ಯ ಶಿಕ್ಷಕರೊಬ್ಬರು ವಿದ್ಯಾರ್ಥಿಗಳಿಗೆ ಉಚಿತ ಕಟಿಂಗ್ ಮಾಡಿಸುವ ಮೂಲಕ ಗಮನ ಸೆಳೆದಿದ್ದಾರೆ.
ಇಲ್ಲಿನ ಕಲ್ಲಕುರ್ಚಿ ಜಿಲ್ಲೆಯ ತಿರುಕೈಲೂರಿನ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ತಲೆಗೂದಲು ತೆಗೆಸಿ, ವಿದ್ಯಾರ್ಥಿಗಳಿಗೆ ಶಿಸ್ತಿನ ಪಾಠ ಹೇಳಿದ್ದಾರೆ.
800ಕ್ಕೂ ಅಧಿಕ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿರುವ ಬಾಲಕರ ಶಾಲೆ ಇದಾಗಿದ್ದು, ಮುಖ್ಯಶಿಕ್ಷಕ ಅರುಲ್ ಜ್ಯೋತಿ ನವಂಬರ್ನಲ್ಲಿ ಇಲ್ಲಿಗೆ ವರ್ಗಾವಣೆಯಾಗಿ ಬಂದಿದ್ದಾರೆ. ಅರುಲ್ ಜ್ಯೋತಿ ವರ್ಗಾವಣೆಯಾಗಿ ಬಂದ ನಂತರ ಹಲವಾರು ಬದಲಾವಣೆಗಳನ್ನು ಶಾಲೆಯಲ್ಲಿ ತರಲಾಗಿದೆ.
ಈ ಶಿಸ್ತುಪಾಲನೆಗೆ ಪಾಲಕರ ಒಪ್ಪಿಗೆಯನ್ನು ಪಡೆಯಲಾಗಿದೆ. ಇದರಿಂದ 120ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಿದೆ. ಸಹಶಿಕ್ಷಕರು, ಪೋಷಕರು ಮುಖ್ಯಶಿಕ್ಷಕರ ಕೆಲಸವನ್ನು ಸ್ವಾಗತಿಸಿದ್ದಾರೆ. ಮುಂದಿನ ದಿನಗಳಲ್ಲಿ 10ನೇ ತರಗತಿ ವಿದ್ಯಾರ್ಥಿಗಳ ಕೇಶ ವಿನ್ಯಾಸವನ್ನು ಶೀಘ್ರದಲ್ಲೇ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.