ETV Bharat / bharat

ಹಿರಿಯ ಸಬ್​ಇನ್ಸ್​ಪೆಕ್ಟರ್​ ಗೆ ಹಿಗ್ಗಾ-ಮುಗ್ಗಾ ಥಳಿಸಿದ ಕಾನ್ಸ್​ಟೇಬಲ್​..! ವಿಡಿಯೋ ವೈರಲ್​

author img

By

Published : Apr 22, 2020, 2:21 PM IST

ಕೊಟ್ವಾಲಿ ನಗರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಿರಿಯ ಸಬ್‌ಇನ್ಸ್‌ಪೆಕ್ಟರ್ ಒಬ್ಬರ ಮೇಲೆ ಹೆಡ್ ಕಾನ್ಸ್​​ಟೇಬಲ್ ಲಾಠಿಯಿಂದ ಹಲ್ಲೆ ಮಾಡಿದ್ದು, ಇದೀಗ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Head constable hits senior with baton
ಸಬ್​ಇನ್ಸ್​ಪೆಕ್ಟರ್​ ಗೆ ಹಿಗ್ಗಾ-ಮುಗ್ಗಾ ಥಳಿಸಿದ ಕಾನ್ಸ್​ಟೇಬಲ್

ಸೀತಾಪುರ (ಉತ್ತರ ಪ್ರದೇಶ): ಲಾಕ್‌ಡೌನ್ ಸಮಯದಲ್ಲಿ ಸರಿಯಾಗಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದ ಹಿರಿಯ ಸಬ್​-ಇನ್ಸ್​ಪೆಕ್ಟರ್​ ಮೇಲೆ ಹೆಡ್ ಕಾನ್ಸ್​​ಟೇಬಲ್ ಒಬ್ಬರು ಲಾಠಿಯಿಂದ ಹಲ್ಲೆ ಮಾಡಿದ ಘಟನೆ ಸೀತಾಪುರ ಜಿಲ್ಲೆಯಲ್ಲಿ ನಡೆದಿದೆ.

ಈ ಘಟನೆ ಬಳಿಕ ಕೊಟ್ವಾಲಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್​​ಟೇಬಲ್​ನನ್ನು ಅಮಾನತುಗೊಳಿಸಲಾಗಿದ್ದು, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಕಾನ್‌ಸ್ಟೆಬಲ್ ತನ್ನ ಹಿರಿಯ ಅಧಿಕಾರಿ ಹೊಡೆಯುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಎಲ್.ಆರ್. ಕುಮಾರ್​, ಲಾಕ್‌ಡೌನ್ ಸಮಯದಲ್ಲಿ ಸರಿಯಾದ ತಪಾಸಣೆ ನಡೆಸದ ಕಾರಣ ಹಿರಿಯ ಸಬ್‌ ಇನ್ಸ್‌ಪೆಕ್ಟರ್ ರಮೇಶ್ ಚೌಹಾಣ್, ಹೆಡ್ ಕಾನ್ಸ್​​ಟೇಬಲ್ ರಾಮಶ್ರೇ ಅವರನ್ನು ಗದರಿಸಿದ್ದಾರೆ, ಇದರಿಂದ ಆಕ್ರೋಶಗೊಂಡ ಹೆಡ್ ಕಾನ್‌ಸ್ಟೆಬಲ್ ಲಾಠಿಯಿಂದ ಹಲ್ಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.