11 ಸೆಕೆಂಡ್‌ಗಳಲ್ಲಿ 100 ಮೀ ಓಡ್ತಾನೆ! ಈತ ಮಧ್ಯಪ್ರದೇಶದ ಉಸೈನ್ ಬೋಲ್ಟ್! - Usain bolt of Madhyapradesh
ರಾಮೇಶ್ವರ್ ಗುರ್ಜರ್ ಎಂಬ ಯುವಕ ಮಧ್ಯಪ್ರದೇಶದ ಉಸೈನ್ ಬೋಲ್ಟ್ ಎಂದೇ ಖ್ಯಾತಿ ಪಡೆದಿದ್ದಾರೆ. ಇವರು 100ಮೀ ಅಂತರವನ್ನು ಕೇವಲ 11 ಸೆಂಕೆಂಡ್ಸ್‌ನಲ್ಲಿ ಗಳಲ್ಲಿ ಕ್ರಮಿಸಬಲ್ಲರು. ಕಾಲಿಗೆ ಸ್ಪೋರ್ಟ್ಸ್ ಶೂ ಧರಿಸದೆ ಬರಿಗಾಲಿನಲ್ಲೇ ಓಡಿ ಈ ಸಾಧನೆ ಮಾಡಿದ್ದಾರೆ!
ಭೋಪಾಲ್ (ಮಧ್ಯಪ್ರದೇಶ): ಮಧ್ಯಪ್ರದೇಶದ ಶಿವಪುರಿ ತಾಲೂಕಿನ ಯುವಕನೊಬ್ಬ ಕೇವಲ 11 ಸೆಕೆಂಡ್‌ಗಳಲ್ಲಿ 100 ಮೀ ಪೂರ್ಣಗೊಳಿಸಿ ಉಸೈನ್ ಬೋಲ್ಟ್ ದಾಖಲೆ ಮುರಿಯುವ ತವಕದಲ್ಲಿದ್ದಾನೆ. ಈತ ಮಧ್ಯ ಪ್ರದೇಶದ ಉಸೈನ್ ಬೋಲ್ಟ್ ಅಂತನೇ ಫೇಮಸ್.
ಈತ ಮಿಂಚಿನ ಓಡುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ. ಇದನ್ನು ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಗಮನಿಸಿ ಖುಷಿ ವ್ಯಕ್ತಪಡಿಸಿದ್ದಾರೆ. ಈತನಿಗೆ ಸೂಕ್ತ ಅವಕಾಶ ನೀಡಿದರೆ ಇಡೀ ದೇಶಕ್ಕೆ ಕೀರ್ತಿ ತರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ.
100, 200, 400ಮೀ ಓಟವನ್ನು ಮಿಂಚಿನ ವೇಗದಲ್ಲಿ ಕ್ರಮಿಸಿ ಸರಣಿ ವರ್ಲ್ಡ್ ರೆಕಾರ್ಡ್ ಮೆರೆದಿರುವವರು ಜಮೈಕಾದ ವಿಶ್ವಪ್ರಸಿದ್ಧ ಅಥ್ಲೀಟ್ ಉಸೈನ್ ಬೋಲ್ಟ್. ಇವರು 100 ಮೀ ಅಂತರವನ್ನು ಕೇವಲ 9.69 ಸೆಕೆಂಡುಗಳಲ್ಲಿ ಓಡಿ ವಿಶ್ವ ದಾಖಲೆ ನಿರ್ಮಿಸಿದ್ದು, ತನ್ನದೇ ದಾಖಲೆಯನ್ನು 9.58 ಸೆಕೆಂಡುಗಳಲ್ಲಿ ಓಡಿ ಜಗತ್ತಿನ ಕೋಟ್ಯಂತರ ಕ್ರೀಡಾಪ್ರೇಮಿಗಳು ಹುಬ್ಬೇರಿಸುವಂತೆ ಮಾಡಿದ್ದರು.
nvbnbvnb
Conclusion: