ETV Bharat / bharat

ಶೌಚಾಲಯದಲ್ಲಿ ಮೊಬೈಲ್​ ಬಳಸ್ತೀರಾ? ಈ ಕಾಯಿಲೆ ಬರಬಹುದು ಹುಷಾರು..

ಅನೇಕ ಮಂದಿಗೆ ಗಂಟೆಗಟ್ಟಲೆ ಶೌಚಾಲಯದಲ್ಲಿ ಕುಳಿತುಕೊಂಡು ಮೊಬೈಲ್​ ವೀಕ್ಷಿಸುವ ಗೀಳಿದೆ. ಇದರಿಂದ ಅವರ ಜೀವನ ದುಸ್ಥಿತಿಗೆ ತಲುಪಬಹುದು ಎಂದು ಸಮೀಕ್ಷೆ ಎಚ್ಚರಿಸಿದೆ.

ಸಾಂದರ್ಭಿಕ ಚಿತ್ರ
author img

By

Published : Oct 5, 2019, 6:09 PM IST

ನವದೆಹಲಿ: ಮೊಬೈಲ್ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್ ಮೇಲೆ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಅವಲಂಬಿತರಾಗಿದ್ದಾರೆ. ಸ್ಮಾರ್ಟ್‌ಪೋನ್​​ ಜನರ ಬದುಕಿನ ಅವಿಭಾಜ್ಯ ಅಂಗವೇ ಆಗಿಹೋಗಿದ್ದು ಅವುಗಳನ್ನು ಬಿಟ್ಟು ಬದುಕದ ಸ್ಥಿತಿಗೆ ಬಂದಿದ್ದಾರೆ. ಇದೇ ವಿಚಾರವಾಗಿ ಇಲ್ಲೊಂದು ಸಮೀಕ್ಷೆ ಎಚ್ಚರಿಕೆಯ ಕರೆಗಂಟೆ ಬಾರಿಸಿದೆ.

ಸಮೀಕ್ಷೆಯ ಪ್ರಕಾರ, ಮೊಬೈಲ್​ ಬಳಕೆದಾರರು ಹೆಚ್ಚಾಗಿ ಶೌಚಾಲಯದಲ್ಲಿರುವಾಗಲೂ ಮೊಬೈಲ್​​ ಬಳಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಈ ವೇಳೆ ತಾಸುಗಟ್ಟಲೆ ಕುಳಿತು ಅವರು ವಿಡಿಯೋ ನೋಡುವುದು, ಚಾಟಿಂಗ್ ಮಾಡುತ್ತಾರೆ. ಇದರಿಂದಾಗಿ ಅವರಿಗೆ ಮೂಲವ್ಯಾಧಿ (ಪೈಲ್ಸ್) ಬರಬಹುದು ಎಂದು ಎಚ್ಚರಿಸಿದೆ.

ಮೊಬೈಲ್​ ಬಳಸುತ್ತಾ ಶೌಚಾಲಯದಲ್ಲಿ ಗಂಟೆಗಳ ಕಾಲ ಕುಳಿತುಕೊಳ್ಳುವುದರಿಂದ ಗುದದ್ವಾರದ ಗುದನಾಳದ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಸಮೀಕ್ಷೆ ನಡೆಸಿರುವ ನೋಯ್ಡಾದ ಜೆಪಿ ಆಸ್ಪತ್ರೆ ವೈದ್ಯ ನವೀನ್​ ಕುಮಾರ್​, ಗಂಟೆಗಳ ಕಾಲ ಕುಳಿತುಕೊಂಡು ಮೊಬೈಲ್​ ಬಳಕೆ ಸರಿಯಲ್ಲ. ಇದು ಅನೇಕ ತೊಂದರೆಗಳಿಗೆ ಎಡೆಮಾಡಿ ಕೊಡುತ್ತದೆ. ನಿದ್ರಾಹೀನತೆಯೂ ಉಂಟಾಗುತ್ತದೆ ಎಂದು ಹೇಳಿದ್ದಾರೆ.

Intro:Body:

ಶೌಚಾಲಯದಲ್ಲಿ ಮೊಬೈಲ್​ ಬಳಸ್ತೀರಾ... ಹೀಗೇನಾದ್ರೂ ಮಾಡ್ತಿದ್ರೆ ಈ ಕಾಯಿಲೆ ಬರಬಹುದು!

ನವದೆಹಲಿ: ಮೊಬೈಲ್ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್ ಮೇಲೆ  ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಅವಲಂಬನೆಯಾಗಿದ್ದಾರೆ. ಸ್ಮಾರ್ಟ್‌ಪೋನ್​​ ಜನರ ಬದುಕಿನ ಅವಿಭಾಜ್ಯ ಅಂಗವೇ ಆಗಿಹೋಗಿದ್ದು ಅವುಗಳನ್ನ ಬಿಟ್ಟು ಬದುಕದ ಸ್ಥಿತಿಗೆ ಬಂದಿದ್ದಾರೆ. 

ಸದ್ಯ ಹೊರಬಿದ್ದಿರುವ ಸಮೀಕ್ಷೆವೊಂದರ ಪ್ರಕಾರ, ಮೊಬೈಲ್​ ಬಳಕೆದಾರರು ಶೌಚಾಲಯದಲ್ಲಿರುವಾಗಲೂ ತಮ್ಮ ಮೊಬೈಲ್​​ ಬಳಕೆ ಮಾಡುತ್ತಿರುವ ವಿಚಾರ ಬಳಕೆಗೆ ಬಂದಿದ್ದು, ಈ ವೇಳೆ ಗಂಟೆಗಳ ಕಾಲ ಒಳಗಡೆ ಕುಳಿತುಕೊಳ್ಳುತ್ತಿದ್ದಾರೆ. ಇದರಿಂದ ಅವರಿಗೆ ಪೈಲ್ಸ್​ ಬರಬಹುದು ಎಂದು ತಿಳಿದು ಬಂದಿದೆ. 

ಮೊಬೈಲ್​ ಬಳಕೆ ಮಾಡುತ್ತಾ ಶೌಚಾಲಯದಲ್ಲಿ ಗಂಟೆಗಳ ಕಾಲ ಕುಳಿತುಕೊಳ್ಳುವುದರಿಂದ ಗುದನಾಳದಲ್ಲಿನ ಗುದದ್ವಾರದ ಮೇಲೆ ಹೆಚ್ಚಿನ ಒತ್ತಡ ಉಂಟಾಗಲಿದ್ದು, ಇದರ ಸಮಸ್ಯೆ ಉಂಟಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 

ಇದರ ಬಗ್ಗೆ ಸಮೀಕ್ಷೆ ನಡೆಸಿರುವ ನೋಯ್ಡಾದ ಜೆಪಿ ಆಸ್ಪತ್ರೆ ವೈದ್ಯ ನವೀನ್​ ಕುಮಾರ್​, ಗಂಟೆಗಳ ಕಾಲ ಕುಳಿತುಕೊಂಡು ಮೊಬೈಲ್​ ಬಳಕೆ ಮಾಡುವುದು ಸರಿಯಲ್ಲ. ಇದು ಅನೇಕ ತೊಂದರೆಗಳಿಗೆ ಎಡೆ ಮಾಡುತ್ತದೆ. ಇದರಿಂದ ನಿದ್ರಾಹೀನತೆ ಸಹ ಉಂಟಾಗುತ್ತದೆ ಎಂದು ಅವರು ಹೇಳಿದ್ದಾರೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.