ETV Bharat / bharat

ವೈಜಾಗ್​ ಅನಿಲ ಸೋರಿಕೆಯಿಂದ ನೀರಿನ ಮೂಲಗಳಿಗೆ ಹಾನಿ ಸಂಭವಿಸಿದೆಯೇ? - ಸ್ಟೈರೀನ್ ಅನಿಲ ಸೋರಿಕೆ

ಗಿಡಗಳ ಮೇಲಿದ್ದ ರಾಸಾಯನಿಕ ಜಲಾಶಯದ ನೀರಿಗೆ ಬಿದ್ದಿದೆ. ಹಾಗಾಗಿ ಜಲಾಶಯದ ನೀರಿನ ಮೇಲೆ ಕಣಗಳಂತಹ ಪದರು ತೇಲುತ್ತಿರುವಂತೆ ಕಾಣುತ್ತಿದೆ ಎಂದು ಸ್ಥಳೀಯರು ಹೇಳಿಕೊಂಡಿದ್ದು, ನೀರಿನಲ್ಲಿದ್ದ ಮೀನುಗಳು ಸತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

Vizag gas leak
ಎಲ್‌ಜಿ ಪಾಲಿಮರ್
author img

By

Published : May 11, 2020, 8:56 PM IST

ವಿಶಾಖಪಟ್ಟಣಂ: ಎಲ್‌ಜಿ ಪಾಲಿಮರ್​ನಿಂದ ಅನಿಲ ಸೋರಿಕೆಯಾದ ಪರಿಣಾಮ ಸುತ್ತಮುತ್ತಲಿನ ಹಳ್ಳಿಗಳ ಪರಿಸರದ ಮೇಲೆ ಅಧ್ಯಯನ ನಡೆಯುತ್ತಿದ್ದು, ಪ್ರಮುಖ ಜಲಾಶಯ ಸೇರಿದಂತೆ ವಿವಿಧ ಜಲಮೂಲಗಳಿಂದ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ಅಧಿಕಾರಿಗಳು ಕಳುಹಿಸಿದ್ದಾರೆ.

ರಾಸಾಯನಿಕ ಸ್ಥಾವರದಿಂದ ಸ್ಟೈರೀನ್ ಅನಿಲ ಸೋರಿಕೆಯಾದ ನಂತರ ಮೇ 7 ರಂದು 12 ಜನರು ಸಾವನ್ನಪ್ಪಿದ್ದರು. ನೂರಾರು ಜನರ ಜೀವನದ ಮೇಲೆ ಈ ಘಟನೆ ಕೆಟ್ಟ ಪರಿಣಾಮ ಬೀರಿತ್ತು. ಘಟನೆ ನಡೆದ ತಕ್ಷಣವೇ ಅಧಿಕಾರಿಗಳು ಬಂದರು ನಗರಕ್ಕೆ ನೀರು ಸರಬರಾಜಾಗುವ ನೀರಿನ ಮೂಲಗಳಲ್ಲಿ ಒಂದಾದ ಮೆಗಾಹ್ರಿಗೆಡ್ಡಾ ಜಲಾಶಯದಿಂದ ಕುಡಿಯುವ ನೀರಿನ ಸರಬರಾಜನ್ನು ನಿಲ್ಲಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಮೇಘದ್ರೀಗೆಡ್ಡಾದಿಂದ ಸರಬರಾಜನ್ನು ತಕ್ಷಣವೇ ನಿಲ್ಲಿಸಲಾಗಿದೆ ಎಂದು ಗ್ರೇಟರ್ ವಿಶಾಖಪಟ್ಟಣಂ ಮಹಾನಗರ ಪಾಲಿಕೆ (ಜಿವಿಎಂಸಿ) ತಿಳಿಸಿದೆ.

ಸರಿಯಾದ ಪರೀಕ್ಷೆಗಳನ್ನು ಆಗುವವರೆಗೆ ಮೇಘದ್ರೀಗೆಡ್ಡಾದಿಂದ ನೀರನ್ನು ತೆಗೆಯಲಾಗುವುದಿಲ್ಲ ಎನ್ನಲಾಗಿತ್ತು. ಆದರೆ ಈ ನೀರು ಕುಡಿಯಲು ಸುರಕ್ಷಿತವಾಗಿದೆ ಎಂದು ಜಿವಿಎಂಸಿ ಆಯುಕ್ತ ಜಿ. ಸೃಜನಾ ಹೇಳಿದರು.

ನಗರದ ಅವಶ್ಯಕತೆಗಳನ್ನು ಪೂರೈಸಲು ಮುದಾಸರ್ಲೋವಾ, ಎಲೆರು ಮತ್ತು ತತಿಪುಡಿ ಜಲಾಶಯಗಳಿಂದ ನೀರನ್ನು ಬಳಸಲಾಗುತ್ತಿದೆ. ಕೆಲವೇ ಕೆಲವು ಪ್ರದೇಶಗಳ ನೀರಿನ ಅಗತ್ಯಗಳನ್ನು ಮೇಘದ್ರೀಗೆಡ್ಡಾ ಪೂರೈಸುತ್ತಿರುವುದರಿಂದ, ಆ ಜಲಾಶಯದ ನೀರು ನಿಲ್ಲಿಸಿದ್ದು ಅಂತಹ ಪರಿಣಾಮವೇನಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ಗಿಡಗಳ ಮೇಲಿದ್ದ ರಾಸಾಯನಿಕ ಜಲಾಶಯದ ನೀರಿಗೆ ಬಿದ್ದಿದೆ. ಹಾಗಾಗಿ ಜಲಾಶಯದ ನೀರಿನ ಮೇಲೆ ಕಣಗಳಂತಹ ಪದರು ತೇಲುತ್ತಿರುವಂತೆ ಕಾಣುತ್ತಿದೆ ಎಂದು ಸ್ಥಳೀಯರು ಹೇಳಿಕೊಂಡಿದ್ದು, ನೀರಿನಲ್ಲಿದ್ದ ಮೀನುಗಳು ಸತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಅನಿಲ ಸೋರಿಕೆಯು ಸ್ಥಾವರವನ್ನು ಸುತ್ತುವರೆದಿರುವ ಐದು ಹಳ್ಳಿಗಳಲ್ಲಿರುವ ಇತರ ಜಲಮೂಲಗಳನ್ನು ಕಲುಷಿತಗೊಳಿಸಿದೆ ಎಂದು ವರದಿಯಾಗಿದೆ. ಎಲ್ಲಾ ಜಲಮೂಲಗಳಿಂದ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಕಳುಹಿಸಲಾಗಿದೆ. ಉಳಿದ ಫಲಿತಾಂಶಗಳು ಬಂದ ನಂತರವೇ ಇದರ ಪರಿಣಾಮ ತಿಳಿಯುತ್ತದೆ ಎಂದು ಜಿವಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.