ETV Bharat / bharat

ತಾಯಿ, ಮಕ್ಕಳ ಪೋಷಣೆಗೆ ಆದ್ಯತೆ ನೀಡುವಲ್ಲಿ ಎಡವಿತಾ ಸರ್ಕಾರ?

author img

By

Published : Feb 6, 2021, 1:41 PM IST

ಇತ್ತೀಚಿನ ಕೇಂದ್ರ ಬಜೆಟ್‌ ವೇಳೆ ಮಕ್ಕಳ ಕಲ್ಯಾಣಕ್ಕೆ ಮೀಸಲಿಟ್ಟ ಅನುದಾನದ ಪ್ರಮಾಣ ತೀವ್ರವಾಗಿ ಕುಸಿದಿದೆ. ಮಕ್ಕಳ ಸಮಗ್ರ ಅಭಿವೃದ್ಧಿ ಯೋಜನೆಗೆ 5,000 ಕೋಟಿ ರೂ. ಕಡಿತಗೊಳಿಸಲಾಗಿದೆ. ಹಾಗಾಗಿ ಕೇಂದ್ರ ಸರ್ಕಾರದ ಈ ನಡೆಗೆ ಆರೋಗ್ಯ, ಪೌಷ್ಟಿಕತೆ, ಆಹಾರ ಹಕ್ಕುಗಳ ತಜ್ಞರು ಬೇಸರ ವ್ಯಕ್ತಪಡಿಸಿದ್ದಾರೆ.

mother and child nutrition
mother and child nutrition

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್‌ ಎಫ್‌ ಹೆಚ್‌ ಎಸ್ ) ಇತ್ತೀಚೆಗೆ ದೇಶದ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಪೋಷಕಾಂಶದ ಕೊರತೆ ಹೆಚ್ಚಾಗಿದೆ ಎಂದು ಘೋಷಿಸಿದೆ. ಆದರೂ ಸಹ ಇತ್ತೀಚಿನ ಕೇಂದ್ರ ಬಜೆಟ್‌ ವೇಳೆ ಮಕ್ಕಳ ಕಲ್ಯಾಣಕ್ಕೆ ಮೀಸಲಿಟ್ಟ ಅನುದಾನದ ಪ್ರಮಾಣ ತೀವ್ರವಾಗಿ ಕುಸಿದಿದೆ.

ನೀತಿ ಆಯೋಗದ ಶಿಫಾರಸಿಗೆ ಸಕಾರಾತ್ಮಕವಾಗಿ ಕೇಂದ್ರ ಸರ್ಕಾರ ಸ್ಪಂದಿಸಿ, ಪೌಷ್ಟಿಕತೆಗೆ ಹೆಚ್ಚಿನ ಆದ್ಯತೆ ನೀಡಬೇಕಿತ್ತು. ಆದರೆ, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತನ್ನ ಜವಾಬ್ದಾರಿಯಿಂದ ಕೈ ತೊಳೆದುಕೊಂಡಿದೆ. ಪೋಷಣೆ ಅಭಿಯಾನವನ್ನು ಮುಂದಿನ ಹಂತಕ್ಕೆ ಪರಿಣಾಮಕಾರಿಯಾಗಿ ಕೊಂಡೊಯ್ಯುವ ಕುರಿತಂತೆ ಸರ್ಕಾರದ ಸಕಾರಾತ್ಮಕ ಭರವಸೆಗಳೆಲ್ಲ ನುಚ್ಚು ನೂರಾಗಿವೆ.

ಹೌದು, ಇತ್ತೀಚಿನ ಕೇಂದ್ರ ಬಜೆಟ್‌ ವೇಳೆ ಮಕ್ಕಳ ಕಲ್ಯಾಣಕ್ಕೆ ಮೀಸಲಿಟ್ಟ ಅನುದಾನದ ಪ್ರಮಾಣ ತೀವ್ರವಾಗಿ ಕುಸಿದಿದೆ. ಮಕ್ಕಳ ಸಮಗ್ರ ಅಭಿವೃದ್ಧಿ ಯೋಜನೆಗೆ 5,000 ಕೋಟಿ ರೂ. ಕಡಿತಗೊಳಿಸಲಾಗಿದೆ. ಒಟ್ಟು ಅನುದಾನದ ಗಾತ್ರವನ್ನು 21,000 ಕೋಟಿ ರೂ.ಗೆ ಇಳಿಸಲಾಗಿದೆ.

ಗ್ರಾಮ ಮತ್ತು ವಾಸ ಸ್ಥಳದ ಮಟ್ಟದಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯ ಮತ್ತು ಪೋಷಣೆಯ ಜವಾಬ್ದಾರಿಯನ್ನು ಅಂಗನವಾಡಿಗೆ ವಹಿಸಬೇಕಿತ್ತು ಎಂದು ಕೆಲ ಸಮಯದ ಹಿಂದೆ ನೀತಿ ಆಯೋಗದ ಕ್ರಿಯಾ ಯೋಜನೆ ಸೂಚಿಸಿತ್ತು. ಪ್ರತಿ ಕೇಂದ್ರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಅಂಗನವಾಡಿ ಕಾರ್ಯಕರ್ತರನ್ನು ನೇಮಿಸಬೇಕು ಮತ್ತು ಕಾಲಕಾಲಕ್ಕೆ ತರಬೇತಿ ನೀಡುವ ಮೂಲಕ ಅವರ ಕೌಶಲ್ಯ ಹೆಚ್ಚಿಸಬೇಕು ಎಂದು ಕೂಡ ನೀತಿ ಆಯೋಗ ಹೇಳಿಕೆ ನೀಡಿತ್ತು.

ಗರ್ಭಧಾರಣೆಯಾದ 100 ದಿನಗಳಲ್ಲಿ ಮಗುವಿನ ಮೆದುಳಿನ ಶೇ 90 ರಷ್ಟು ಭಾಗ ರೂಪುಗೊಂಡಿರುತ್ತದೆ ಎಂದು ಪತ್ತೆಯಾಗಿದೆ. ಅಗ ಗರ್ಭಿಣಿಗೆ ಪೌಷ್ಟಿಕ ಆಹಾರದ ಅಗತ್ಯವಿರುತ್ತದೆ. ಇಂತಹ ಸಮಯದಲ್ಲಿ ಪೌಷ್ಟಿಕಾಂಶವನ್ನು ಒದಗಿಸಲು ಹೆಚ್ಚು ಖರ್ಚು ಮಾಡುವ ಅಗತ್ಯಕ್ಕೆ ಅನುಗುಣವಾಗಿ ಅನುದಾನ ಇರಬೇಕು. ಆದರೆ ಅನುದಾನವನ್ನು ಹೆಚ್ಚಿಸುವ ಬದಲು ಕೇಂದ್ರ ಸರ್ಕಾರ ಅದನ್ನು ಕಡಿತಗೊಳಿಸಿದೆ. ಇದಕ್ಕೆ ಆರೋಗ್ಯ, ಪೌಷ್ಟಿಕತೆ, ಆಹಾರ ಹಕ್ಕುಗಳ ತಜ್ಞರು ಬೇಸರ ವ್ಯಕ್ತಪಡಿಸಿದ್ದಾರೆ.

ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲ ಮಕ್ಕಳು, ಹದಿಹರೆಯದ ಹುಡುಗಿಯರು, ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಕನಿಷ್ಠ 300 ದಿನಗಳವರೆಗೆ ಪೌಷ್ಟಿಕ ಆಹಾರ ಒದಗಿಸಬೇಕು ಎಂದು ಸುಮಾರು ಮೂರು ದಶಕಗಳ ಹಿಂದೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು. ನಾಲ್ಕೂವರೆ ದಶಕಗಳಿಗೂ ಹೆಚ್ಚು ಕಾಲದಿಂದ ಮಕ್ಕಳ ಸಮಗ್ರ ಅಭಿವೃದ್ಧಿ ಯೋಜನೆ ಚಾಲ್ತಿಯಲ್ಲಿ ಇದೆ. ಲಸಿಕೆ ಮತ್ತು ಆಹಾರ ವಿತರಣೆಗಾಗಿ 17 ಲಕ್ಷ ಅಂಗನವಾಡಿಗಳನ್ನು ಸ್ಥಾಪಿಸುವಂತೆ ಸುಪ್ರೀಂಕೋರ್ಟ್‌ ಸೂಚಿಸಿದ್ದರೂ ಈಗಲೂ ದೇಶಾದ್ಯಂತ ಇರುವ ಕೇಂದ್ರಗಳ ಸಂಖ್ಯೆ ಕೇವಲ 13.77 ಲಕ್ಷ. ಲಭ್ಯವಿರುವ ಮಾಹಿತಿ ಪ್ರಕಾರ ಸುಮಾರು ಕಾಲು ಭಾಗದಷ್ಟು ಅಂಗನವಾಡಿಗಳಲ್ಲಿ ಕುಡಿಯುವ ನೀರಿನ ಸೌಲಭ್ಯ ಇಲ್ಲ ಮತ್ತು ಶೇ 36 ರಷ್ಟು ಕೇಂದ್ರಗಳಿಗೆ ಶೌಚಾಲಯಗಳು ಇಲ್ಲ ಎಂದು ತಿಳಿದು ಬಂದಿದೆ.

ಇನ್ನು ಐಸಿಡಿಎಸ್ ವಿಶ್ವದ ಅತಿದೊಡ್ಡ ಪೌಷ್ಟಿಕಾಂಶ ಯೋಜನೆಯಾಗಿದ್ದು, ಕಳೆದ ಕೆಲವು ವರ್ಷಗಳಿಂದ ಎಲ್ಲ ಅಂಗನವಾಡಿಗಳಿಗೆ ಕುಡಿಯುವ ನೀರು ಮತ್ತು ವಿದ್ಯುತ್‌ ಸೌಲಭ್ಯ ಕಲ್ಪಿಸದಿರುವುದರಿಂದ ಯೋಜನೆಗೆ ಧಕ್ಕೆಯಾಗಿದೆ. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇಕಡಾ 68 ರಷ್ಟು ಮಕ್ಕಳ ಮರಣಕ್ಕೆ ಕಾರಣ ಅಪೌಷ್ಠಿಕತೆ. ಹಿಂದಿನ ಲೋಪಗಳಿಂದ ಕಲಿತ ಪಾಠಗಳ ಆಧಾರದ ಮೇಲೆ ಅಪೌಷ್ಟಿಕತೆಯನ್ನು ಸಮಗ್ರವಾಗಿ ಎದುರಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿಕೊಂಡರೂ ದೇಶದಲ್ಲಿ 7 ಲಕ್ಷ ಶಿಶು ಮರಣಗಳು ಕುಪೋಷಣೆಯಿಂದ ಸಂಭವಿಸುತ್ತಿವೆ.

ಕೋವಿಡ್ -19 ಬಿಕ್ಕಟ್ಟಿನ ಕಾರಣಕ್ಕಾಗಿ ಹೆಚ್ಚುವರಿಯಾಗಿ 40 ಲಕ್ಷ ಮಕ್ಕಳು ಅಪೌಷ್ಟಿಕತೆಗೆ ಸಿಲುಕುತ್ತಿದ್ದಾರೆ ಎಂದು ಏಳು ತಿಂಗಳ ಹಿಂದೆ “ ಗ್ಲೋಬಲ್ ಹೆಲ್ತ್ ಸೈನ್ಸ್ ” ನಿಯತಕಾಲಿಕ ತಿಳಿಸಿದೆ. ವಾಸ್ತವ ಸ್ಥಿತಿಗಳನ್ನು ಹಾಗೂ ಗುಣಮಟ್ಟದ ಶಿಫಾರಸುಗಳನ್ನು ನಿರಾಕರಿಸಿರುವುದರಿಂದಾಗಿ ಜಗತ್ತಿನಲ್ಲಿ ಬೆಳವಣಿಗೆ ಕುಂಠಿತಗೊಂಡ ಶೇ 30 ರಷ್ಟು ಮಕ್ಕಳು ಭಾರತದಲ್ಲಿದ್ದಾರೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ವಿಶ್ವದ ಶೇ 50 ರಷ್ಟು ಮಕ್ಕಳ ತಾಣವಾಗಿದೆ ಭಾರತ. ನಮ್ಮ ಮುಂದಿನ ಪೀಳಿಗೆಯನ್ನು ಸದೃಢಗೊಳಿಸದೆ ನಾವು ಶ್ರೇಷ್ಠ ಭಾರತದ ಕನಸನ್ನು ನನಸು ಮಾಡುವುದಾದರೂ ಹೇಗೆ ? ಎಂಬ ಪ್ರಶ್ನೆ ಮೂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.