ಫತೇಬಾದ್(ಹರಿಯಾಣ): ಹರಿಯಾಣದಲ್ಲಿ ಸಂಜೆ 7ಗಂಟೆಯಿಂದ ಬೆಳಗ್ಗೆ 7ಗಂಟೆಯವರೆಗೆ ಕರ್ಫ್ಯೂ ವಿಧಿಸಲಾಗಿದ್ದು, ಈ ವೇಳೆ ಯಾರು ಮನೆಯಿಂದ ಹೊರಹೋಗದಂತೆ ಅಲ್ಲಿನ ಸರ್ಕಾರ ಆದೇಶ ಹೊರಹಾಕಿದೆ.
ಸರ್ಕಾರದ ಮಾರ್ಗಸೂಚಿ ಗಾಳಿಗೆ ತೂರಿ ಇಬ್ಬರು ಮಧ್ಯರಾತ್ರಿ ಹೊರಗಡೆ ಸುತ್ತಾಡಿದ್ದು, ಈ ವೇಳೆ ಪ್ರಶ್ನೆ ಮಾಡಿರುವ ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಆರೋಪದ ಮೇಲೆ ಅವರನ್ನ ಬಂಧನ ಮಾಡಲಾಗಿದೆ. ಮಹಿಳೆ ಹಾಗೂ ಓರ್ವ ಪುರುಷ ರಾತ್ರಿ ಬೈಕ್ ಮೇಲೆ ಸುತ್ತಾಡಿದ್ದು, ಇದೀಗ ಅವರನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ.
ಹರಿಯಾಣದ ಫತೇಬಾದ್ನ ಬುನಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ರಾತ್ರಿ ಹೊರಗಡೆ ಸುತ್ತಾಡದಂತೆ ಪೊಲೀಸರು ತಿಳಿ ಹೇಳಲು ಹೋದಾಗ ಅವರ ಮೇಲೆ ಹಲ್ಲೆ ನಡೆಸಿದ್ದಾಗಿ ಇನ್ಸ್ಪೆಕ್ಟರ್ ಕಾಶ್ಮೀರ್ ಸಿಂಗ್ ಹೇಳಿದ್ದಾರೆ. ಇದೀಗ ಅವರನ್ನ ಬಂಧನ ಮಾಡಿರುವ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾಗಿ ತಿಳಿಸಿದ್ದಾರೆ.