ನವದೆಹಲಿ: ಇಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಪ್ರಧಾನಿ ನರೇಂದ್ರ ಮೋದಿಯವರನ್ನು ರಾಷ್ಟ್ರ ರಾಜಧಾನಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.
ಸತತ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವಲ್ಲಿ ಯಶಸ್ವಿಯಾದ ಖಟ್ಟರ್, ನಿನ್ನೆ ದೆಹಲಿಯಲ್ಲಿ ಮೊದಲ ಸಂಪುಟ ಸಭೆ ನಡೆಸಿದ್ದರು. ಅಲ್ಲದೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುರನ್ನು ಭೇಟಿ ಮಾಡಿದ್ದರು.
-
Delhi: Haryana Chief Minister Manohar Lal Khattar called on Prime Minister Narendra Modi, today. pic.twitter.com/2WR0FjRx0q
— ANI (@ANI) October 30, 2019 " class="align-text-top noRightClick twitterSection" data="
">Delhi: Haryana Chief Minister Manohar Lal Khattar called on Prime Minister Narendra Modi, today. pic.twitter.com/2WR0FjRx0q
— ANI (@ANI) October 30, 2019Delhi: Haryana Chief Minister Manohar Lal Khattar called on Prime Minister Narendra Modi, today. pic.twitter.com/2WR0FjRx0q
— ANI (@ANI) October 30, 2019
ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಗಳಿಸುವಲ್ಲಿ ವಿಫಲವಾಗಿದ್ದ ಬಿಜೆಪಿ, ಚುನಾವಣಾ ಫಲಿತಾಂಶದ ಬಳಿಕ ಜೆಜೆಪಿ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದೆ. ಕಳೆದ ಭಾನುವಾರ ಖಟ್ಟರ್ ಹಾಗೂ ದುಶ್ಯಂತ್ ಚೌಟಾಲ, ಕ್ರಮವಾಗಿ ಸಿಎಂ ಹಾಗೂ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಇದೇ ನವೆಂಬರ್ ನಾಲ್ಕನೇ ತಾರೀಕಿನಿಂದ ಹರಿಯಾಣದಲ್ಲಿ ನೂತನ ಸರ್ಕಾರದ ಮೊದಲ ವಿಧಾನ ಸಭಾ ಕಲಾಪ ಆರಂಭಗೊಳ್ಳಲಿದೆ.