ETV Bharat / bharat

ಅಮಿತ್​ ಶಾ ಭೇಟಿಯಾದ ಹರಿಯಾಣ ಸಿಎಂ: ರೈತರ ಪ್ರತಿಭಟನೆ ಬಗ್ಗೆ ಚರ್ಚೆ - ಕೃಷಿ ಕಾನೂನು ವಿರುದ್ಧ ರೈತರಿಂದ ಪ್ರತಿಭಟನೆ

ರೈತರು ಪ್ರತಿಭಟನೆ ಮುಂದುವರೆಸಿರುವ ಹಿನ್ನೆಲೆ, ಚರ್ಚೆ ನಡೆಸಲು ಹರಿಯಾಣ ಮುಖ್ಯಮಂತ್ರಿ ಮನೋಹರ್​ ಲಾಲ್​ ಖಟ್ಟರ್​ ಅವರು ಗೃಹ ಸಚಿವ ಅಮಿತಾ ಶಾ ಅವರನ್ನು ಭೇಟಿಯಾಗಿದ್ದರು.

Haryana CM Khattar meets Amit Shah
ಅಮಿತ್​ ಶಾ ಭೇಟಿಯಾದ ಹರಿಯಾಣ ಸಿಎಂ
author img

By

Published : Nov 29, 2020, 9:48 AM IST

ನವದೆಹಲಿ : ಕೇಂದ್ರದ ಕೃಷಿ ತಿದ್ದುಪಡಿ ಕಾನೂನುಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ತೀವ್ರಗೊಳಿಸಿರುವ ಹಿನ್ನೆಲೆ, ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಶನಿವಾರ ಭೇಟಿಯಾಗಿದ್ದಾರೆ.

ಮೂಲಗಳ ಪ್ರಕಾರ, ರೈತರು ಪ್ರತಿಭಟನೆ ಮುಂದುವರೆಸಿರುವ ಹಿನ್ನೆಲೆ ಚರ್ಚೆ ನಡೆಸಲು ಸಿಎಂ ಖಟ್ಟರ್​ ಅವರು ಅಮಿತಾ ಶಾರನ್ನು ಭೇಟಿಯಾಗಿದ್ದಾರೆ ಎಂದು ತಿಳಿದು ಬಂದಿದೆ, ಶಾ ಭೇಟಿ ಬಳಿಕ ಖಟ್ಟರ್ ಹಿಸಾರ್‌ಗೆ ತೆರಳಿದ್ದಾರೆ.

ಇದನ್ನೂ ಓದಿ : ರೈತರ ಎಲ್ಲಾ ಸಮಸ್ಯೆ ಮತ್ತು ಬೇಡಿಕೆಗಳ ಕುರಿತು ಮಾತುಕತೆಗೆ ಕೇಂದ್ರ ಸರ್ಕಾರ ಸಿದ್ಧ: ಅಮಿತ್ ಶಾ

ಕೆಲ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ರೈತರನ್ನು ಪ್ರಚೋದಿಸುತ್ತಿವೆ. ರೈತರ ಪ್ರತಿಭಟನೆ ಕುರಿತು ಮಾತನಾಡಲು, ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಅವರಿಗೆ ಮೂರು ದಿನಗಳಿಂದ ಕರೆ ಮಾಡುತ್ತಿದ್ದರೂ, ಅವರು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಮನೋಹರ್ ಲಾಲ್ ಖಟ್ಟರ್ ಆರೋಪಿಸಿದ್ದಾರೆ.

ದೆಹಲಿ ಚಲೋ ಹಮ್ಮಿಕೊಂಡಿರುವ ರೈತರು, ರಾಜಧಾನಿಯ ಗಡಿಗಳಾದ ಸಿಂಗು ಮತ್ತು ಟಿಕ್ರಿಗಳಲ್ಲಿ ಉಳಿದುಕೊಂಡಿದ್ದಾರೆ. ಹೀಗಾಗಿ ಕೇಂದ್ರ ಗೃಹ ಸಚಿವ ಅಮಿತ್​ಶಾ, ಮಾತುಕತೆ ನಡೆಸಲು ಸರ್ಕಾರ ಸಿದ್ಧವಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ರೈತರು ಬುರಾರಿಯ ನಿರಂಕಾರಿ ಸಮಗಂ ಮೈದಾನದಲ್ಲಿ ಪ್ರತಿಭಟಿಸುವಂತೆ ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.