ಹೈದರಾಬಾದ್: ಟೀಂ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಗಾಯಗೊಂಡು ತಂಡದಿಂದ ಹೊರಗುಳಿದು ಬರೋಬ್ಬರಿ 5 ತಿಂಗಳಾಯ್ತು. ಇದೀಗ ಬ್ಲೂ ಬಾಯ್ಸ್ ಸೇರಿಕೊಳ್ಳುವ ತವಕದಲ್ಲಿರುವ ಪಾಂಡ್ಯ ತಮ್ಮ ಸಾಮರ್ಥ್ಯ ಹೊರಹಾಕಿದ್ದಾರೆ.
ಡಿವೈ ಪಾಟೀಲ್ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಈ ಪ್ಲೇಯರ್ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದರು.
-
Here is the video of Hardik Pandya's 2 back to back sixes in #DYPATILT20
— Sujoy (@SujoyBarg07) February 28, 2020 " class="align-text-top noRightClick twitterSection" data="
Here is the link of live stream https://t.co/TN04OKdAAU https://t.co/eGMS4MW1kP pic.twitter.com/laC5n4BmRT
">Here is the video of Hardik Pandya's 2 back to back sixes in #DYPATILT20
— Sujoy (@SujoyBarg07) February 28, 2020
Here is the link of live stream https://t.co/TN04OKdAAU https://t.co/eGMS4MW1kP pic.twitter.com/laC5n4BmRTHere is the video of Hardik Pandya's 2 back to back sixes in #DYPATILT20
— Sujoy (@SujoyBarg07) February 28, 2020
Here is the link of live stream https://t.co/TN04OKdAAU https://t.co/eGMS4MW1kP pic.twitter.com/laC5n4BmRT
ಕಳೆದ ಸೆಪ್ಟಂಬರ್ ತಿಂಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿದ್ದ ಟಿ-20 ಪಂದ್ಯದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಪಾಂಡ್ಯಾ ತದನಂತರ ಗಾಯಗೊಂಡು ತಂಡದಿಂದ ಹೊರಗುಳಿದಿದ್ದರು. ಇದೀಗ ಡಿವೈ ಪಾಟೀಲ್ ಟಿ-20 ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಈ ಪ್ಲೇಯರ್ 25 ಎಸತಗಳಲ್ಲಿ 38ರನ್ಗಳಿಕೆ ಮಾಡಿದ್ರು. ಇದರಲ್ಲಿ ನಾಲ್ಕು ಸಿಕ್ಸರ್ ಸೇರಿಕೊಂಡಿದ್ದವು.
ಇದಾದ ಬಳಿಕ ಬೌಲಿಂಗ್ನಲ್ಲಿ ಕೈಚಳಕ ತೋರಿರುವ ಪಾಂಡ್ಯ 3.4 ಓವರ್ಗಳಲ್ಲಿ 26ರನ್ ನೀಡಿ ಪ್ರಮುಖ ಮೂರು ವಿಕೆಟ್ ಕಬಳಿಸಿದ್ದಾರೆ. ಹೀಗಾಗಿ ಬ್ಯಾಂಕ್ ಆಫ್ ಬರೋಡಾ ವಿರುದ್ಧ ರಿಲಯನ್ಸ್ 1 ವಿರುದ್ಧ 25 ರನ್ಗಳ ಜಯ ಸಾಧಿಸಿದೆ.