ಹಾಪುರ್(ಉತ್ತರ ಪ್ರದೇಶ): ದೇಶವ್ಯಾಪಿ ಲಾಕ್ಡೌನ್ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಪೊಲೀಸ್ ಪೇದೆಯೊಬ್ಬರು ವಿಡಿಯೋ ಕಾನ್ಫರೆನ್ಸ್ ಮೂಲಕವೇ ವಿವಾಹವಾದ ಘಟನೆ ಉತ್ತರ ಪ್ರದೇಶದ ಹಾಪುರ್ನಲ್ಲಿ ನಡೆದಿದೆ.
ಈ ಹಿಂದೆ ಮದುವೆ ದಿನವನ್ನು ನಿರ್ಧರಿಸಲಾಗಿತ್ತು. ಆದರೆ ಲಾಕ್ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ಮದುವೆಯಾಗಲು ಸಾಧ್ಯವಾಗಲಿಲ್ಲ. ನನ್ನ ತಾಯಿಯ ಆಗೋಗ್ಯ ಸರಿಯಿಲ್ಲ. ಆಕೆ ನನ್ನ ವಿವಾಹವನ್ನು ನೋಡುವ ಬಯಕೆ ಹೊಂದಿದ್ದಾಳೆ. ಹೀಗಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮದುವೆಯಾಗಿದ್ದಾಗಿ ಪೇದೆ ಮೊಹ್ಸಿನ್ ಸೈಫಿ ಹೇಳಿದ್ದಾರೆ.
ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು, ನಾವು ಲಾಕ್ಡೌನ್ ನಿಯಮಗಳನ್ನುಅನುಸರಿಸಬೇಕು. ಹೀಗಾಗಿ ನನ್ನನ್ನು ಹೊರತುಪಡಿಸಿದ್ರೆ ಇನಾಮ್ ಮತ್ತು ಇತರೆ ಇಬ್ಬರು ಸಾಕ್ಷಿಗಳು ಮಾತ್ರ ಒಟ್ಟಾಗಿ ಸೇರಿದ್ದೆವು. ವಧು ಸೇರಿದಂತೆ ಸುಮಾರು 100 ಜನರು ವಿಡಿಯೋ ಕಾನ್ಫರೆನ್ಸ್ ಮೂಲಕ ವಿವಾಹ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು ಎಂದಿದ್ದಾರೆ.