ETV Bharat / bharat

32ನೇ ವಸಂತಕ್ಕೆ ಕಾಲಿಟ್ಟ ರಹಾನೆ : ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ - ಐಸಿಸಿ

32ನೇ ವಸಂತಕ್ಕೆ ಕಾಲಿಟ್ಟಿರುವ ಭಾರತದ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆಗೆ ಸಹ​ ಟಗಾರರು ಸೇರಿದಂತೆ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.

Wishes pour in as India's Test vice-captain turns 32
32 ನೇ ವಸಂತಕ್ಕೆ ಕಾಲಿಟ್ಟ ರಹಾನೆ
author img

By

Published : Jun 7, 2020, 12:42 AM IST

ಹೈದರಾಬಾದ್​ : ಭಾರತದ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ 32ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರಿಗೆ ಭಾರತ ಮಾತ್ರವಲ್ಲದೇ ವಿಶ್ವದಾದ್ಯಂತ ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಅಜಿಂಕ್ಯಾ ರಹಾನೆಗೆ ಸಂಬಂಧಿಸಿದ ಚಿತ್ರಗಳು ಮತ್ತು ಅವರ ವಿಶೇಷ ಸಂದರ್ಭಗಳ ಚಿತ್ರಗಳನ್ನು ಪೋಸ್ಟ್​ ಮಾಡುವ ಮೂಲಕ ಶುಭ ಹಾರೈಸಿದೆ.

175 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ರಹಾನೆ, 14 ಶತಕಗಳು ಸೇರಿದಂತೆ 7,540 ರನ್​ಗಳನ್ನು ಕಲೆಹಾಕಿದ್ದಾರೆ, ಮಾತ್ರವಲ್ಲ 145 ಕ್ಯಾಚ್​ಗಳನ್ನು ಪಡೆದಿದ್ದಾರೆ. ಐಸಿಸಿ ಟೆಸ್ಟ್ ಶ್ರೇಯಾಂಕಗಳಲ್ಲಿ ನಂ. 9ನೇ ಸ್ಥಾನದಲ್ಲಿದ್ದಾರೆ.

ಇನ್ನು ಇವರಿಗೆ ಟೀ ಇಂಡಿಯಾದ ನಾಯಕ ವಿರಾಟ್​ ಕೋಹ್ಲಿ, ಸೀಮಿತ ಓವರ್​ಗಳ ತಂಡದ ಉಪನಾಯಕ ರೋಹಿತ್​ ಶರ್ಮಾ, ಆರ್​. ಅಶ್ವಿನ್​, ಟೆಸ್ಟ್​ ಸ್ಪೆಷಲಿಸ್ಟ್​ ಚೆತೇಶ್ವರ ಪೂಜಾರ್​, ಭಾರತ ಟೆಸ್ಟ್ ತಂಡದ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ, ಭಾರತ ಕ್ರಿಕೆಟ್​ ತಂಡದ ಕೋಚ್​ ರವಿಶಾಸ್ತ್ರಿ, ಬಿಸಿಸಿಐ ಸೇರಿದಂತೆ ಹಲವಾರು ದಿಗ್ಗಜ ಆಟಗಾರರು ಹಾಗೂ ಅಭಿಮಾನಿ ಶುಭಶಯ ಕೋರಿದ್ದಾರೆ.

ರಹಾನೆ ಕೊನೆಯ ಬಾರಿಗೆ ನ್ಯೂಜಿಲೆಂಡ್‌ನಲ್ಲಿ ನಡೆದ ಭಾರತದ ಟೆಸ್ಟ್ ಸರಣಿಯಲ್ಲಿ ಆಡಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅವರು ಈ ವರ್ಷ ದೆಹಲಿ ತಂಡದ ಪರವಾಗಿ ಆಡಬೇಕಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.