ಪಾಣಿಪತ್: ರಾಷ್ಟ್ರ ರಾಜಧಾನಿ ದೆಹಲಿಯಿಂದ ಸುಮಾರು 90 ಕಿ.ಮೀ ದೂರದಲ್ಲಿರುವ ಒಂದು ಐತಿಹಾಸಿಕ ನಗರ. ಅನೇಕ ಐತಿಹಾಸಿಕ ಯುದ್ಧಗಳಿಗೆ ಸಾಕ್ಷಿಯಾದ ನಗರಿ ಪಾಣಿಪತ್. ಇಲ್ಲಿ ಬಾಬರ್, ಹುಮಾಯೂನ್ ಮತ್ತು ಇಬ್ರಾಹಿಂ ಲೋಧಿಯಂತಹ ಹೋರಾಟಗಾರರು ನಡೆಸಿದ ಯುದ್ಧಗಳು ಭಾರತದ ಇತಿಹಾಸದ ಪುಟಗಳಲ್ಲಿ ಇಂದಿಗೂ ಜೀವಂತವಾಗಿವೆ. ಈ ಜಿಲ್ಲೆಯು ದೇಶದ ಜವಳಿ ಕೇಂದ್ರವಾಗಿ ಹೊರಹೊಮ್ಮುತ್ತಿದೆ.
ಸ್ವಾತಂತ್ರ್ಯದ ನಂತರ ಪಾಣಿಪತ್‌ನಲ್ಲಿ ಕೈಮಗ್ಗದ ಕೆಲಸ ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿದೆ. ಪಾಣಿಪತ್‌ನಲ್ಲಿ ತಯಾರಿಸಿದ ಕಂಬಳಿಗಳು ಪ್ರಪಂಚದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿವೆ. ಕೈ ಮಗ್ಗ ಉದ್ಯಮವನ್ನು 1987 ರಲ್ಲಿ ಸ್ಥಾಪಿಸಲಾಯಿತು. ಅಂದಿನಿಂದ, ಪಾಣಿಪತ್‌ನಲ್ಲಿ ತಯಾರಾಗುವ ನೂಲನ್ನು ಪ್ರಪಂಚದಾದ್ಯಂತ ರಫ್ತು ಮಾಡಲು ಶುರು ಮಾಡಲಾಯಿತು.
ಪಾಣಿಪತ್ ನೂಲಿಗೆ ಶ್ರೀಲಂಕಾ, ನೇಪಾಳ, ರಷ್ಯಾ, ಅಮೆರಿಕ, ಜರ್ಮನಿ, ಟರ್ಕಿ, ನೆದರ್ಲ್ಯಾಂಡ್ಸ್, ಫಿನ್ಲ್ಯಾಂಡ್, ಫ್ರಾನ್ಸ್, ಬಲ್ಗೇರಿಯಾ, ಬೆಲ್ಜಿಯಂ ಮುಂತಾದ ದೇಶಗಳಲ್ಲಿ ಅತಿ ಹೆಚ್ಚು ಗ್ರಾಹಕರಿದ್ದಾರೆ. ಪಾಣಿಪತ್‌ನಲ್ಲಿ ಸುಮಾರು 400 ನೂಲಿನ ಮಗ್ಗಗಳಿದ್ದು, ನಿತ್ಯ ಸುಮಾರು 20 ಸಾವಿರ ಕೆಜಿಯಷ್ಟು ನೂಲು ತಯಾರಿಸುತ್ತೇವೆ. ಹೆಚ್ಚಾಗಿ ಹತ್ತಿ ಮತ್ತು ಹಲವಾರು ಬಗೆಯ ಪಾಲಿಸ್ಟರ್ ಎಳೆಗಳನ್ನು ಇಲ್ಲಿರುವ ನೂಲಿನ ಮಗ್ಗಗಳಲ್ಲಿ ಉತ್ಪಾದಿಸಲಾಗುತ್ತದೆ.
ಪಾಣಿಪತ್‌ನ ನೂಲುವ ಗಿರಣಿಗಳು ವಿವಿಧ ದೇಶಗಳಿಂದ ಲಕ್ಷಾಂತರ ಟನ್‌ಗಳಷ್ಟು ಬಳಸಿದ ಬಟ್ಟೆಯನ್ನು ಸಂಗ್ರಹಿಸುತ್ತವೆ. ಇವುಗಳನ್ನು ಬಣ್ಣಗಳ ಪ್ರಕಾರ ವಿಂಗಡಿಸಲಾಗುತ್ತದೆ. ನಂತರ ಆ ಬಟ್ಟೆಗಳಿಂದ ಹತ್ತಿಯನ್ನು ತಯಾರಿಸಲಾಗುತ್ತದೆ. ಬಳಿಕ ಅವುಗಳ ಮೂಲಕ ನೂಲು ತಯಾರಿಸಲಾಗುತ್ತದೆ. ಪಾಣಿಪತ್ ಜಿಲ್ಲೆಯು ವಿಶ್ವ ದರ್ಜೆಯಲ್ಲಿ ಹೆಚ್ಚು ಜನಪ್ರಿಯವಾಗಲು ಇದೇ ಕಾರಣ.
ಇಂದು ಇಡೀ ದೇಶದಲ್ಲಿ ನೂಲು ಮರುಬಳಕೆ ಮಾಡುವ ಶೇ 80ರಷ್ಟು ಕೈಗಾರಿಕೆಗಳು ಪಾಣಿಪತ್ನಲ್ಲಿವೆ. ನಿತ್ಯ 500 ಕೋಟಿ ರೂಪಾಯಿಗಳ ವಹಿವಾಟು ಹೊಂದಿವೆ. ಪಾಣಿಪತ್‌ನ ಥ್ರೆಡ್ ಮರುಬಳಕೆ ಉದ್ಯಮವು ಸುಮಾರು 4000 ಜನರಿಗೆ ಉದ್ಯೋಗ ನೀಡಿದೆ. ಈ ಮೂಲಕ ಅಂದು ಯುದ್ಧದಿಂದ ಇತಿಹಾಸ ಪುಟದಲ್ಲಿ ಹೆಸರುವಾಸಿಯಾದ ನಗರ ಈಗ ತನ್ನ ನೂಲಿನ ವೈವಿಧ್ಯತೆಯಿಂದ ಪ್ರಸಿದ್ಧಿ ಪಡೆದಿದೆ.