ಗುಜರಾತ್: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಗುಜರಾತ್ನ ಸೋಮನಾಥ್ ಜಿಲ್ಲೆಯಲ್ಲಿನ ಸೋಮನಾಥ ದೇವಾಲಯಕ್ಕೆ ಇಂದು ಭೇಟಿ ನೀಡಿದ್ದರು.
ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ತಮ್ಮ ಪತ್ನಿಯೊಂದಿಗೆ ಗುಜರಾತ್ಗೆ ಆಗಮಿಸಿದ್ದರು. ದ್ವಾದಶ ಜೋತಿರ್ಲಿಂಗಗಳಲ್ಲಿ ಮೊದಲನೆಯದಾಗಿರುವ ಸೌರಾಷ್ಟ್ರದ ಸೋಮನಾಥ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಸೋಮನಾಥನ ದರ್ಶನ ಪಡೆದರು.