ಗ್ವಾಲಿಯರ್: ಕೊರೊನಾ ವಿಚಾರವಾಗಿ ಇತ್ತೀಚೆಗೆ ತುಂಬಾ ನಿರ್ಲಕ್ಷ್ಯಗಳು ನಡೆಯುತ್ತಿದ್ದು, ಮಧ್ಯಪ್ರದೇಶದ ಗ್ವಾಲಿಯರ್‌ನ ಆಸ್ಪತ್ರೆಯೊಂದು 940 ಕಾರ್ಮಿಕರ ಹೆಸರನ್ನು ಒಂದೇ ಮೊಬೈಲ್ ಸಂಖ್ಯೆಗೆ ನೋಂದಾಯಿಸಿದೆ.
ಅವರಿಗೆಲ್ಲ ಕೊರೊನಾ ಲಸಿಕೆ ನೀಡಲು ನೋಂದಣಿ ಮಾಡಲಾಗಿದ್ದು, ಆದರೆ ಈ ಗೊಂದಲದಿಂದ ಯಾರಿಗೂ ಲಸಿಕೆ ಹಾಕಲು ಆಗಲಿಲ್ಲ.
ಗ್ವಾಲಿಯರ್‌ನ ಜೈರೋಗ್ಯಾ ಆಸ್ಪತ್ರೆಯು ಸೋಮವಾರ ಸುಮಾರು 940 ಜನರಿಗೆ ಏಳು ಬೂತ್‌ಗಳಲ್ಲಿ, ಕೊರೊನಾ ಲಸಿಕೆ ನೀಡಲು ನಿರ್ಧರಿಸಿತ್ತು.
ಅಲ್ಲಿ ಸುಮಾರು 19,500 ಮುಂಚೂಣಿ ಕಾರ್ಮಿಕರಿಗೆ ಲಸಿಕೆ ನೀಡಬೇಕಾಗಿದ್ದು, ಅವರಲ್ಲಿ ಮುನ್ಸಿಪಲ್ ಕಾರ್ಪೊರೇಷನ್ ನೌಕರರು, ಪೊಲೀಸ್ ಮತ್ತು ಇತರ ಪಡೆ ಸಿಬ್ಬಂದಿ ಸೇರಿದ್ದಾರೆ. ಸೋಮವಾರ ಸುಮಾರು 5,000 ಕಾರ್ಮಿಕರಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು.