ETV Bharat / bharat

SUV ಕಾರು ಕದಿಯುವ ಯತ್ನ: ಯುವತಿ ಮೇಲೆ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳು! - ಎಸ್ಯುವಿ​​ ಕಾರು ಕದಿಯುವ ಯತ್ನ

ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಯುವತಿ ಮೇಲೆ ಗುಂಡಿನ ದಾಳಿ ನಡೆಸಿರುವ ದುಷ್ಕರ್ಮಿಗಳು, ವಾಹನ ಕದಿಯುವ ಯತ್ನ ನಡೆಸಿರುವ ಘಟನೆ ನಡೆದಿದೆ.

Gurugram woman shot
Gurugram woman shot
author img

By

Published : Nov 4, 2020, 6:55 PM IST

ಗುರುಗ್ರಾಮ್​: ಎಸ್​ಯುವಿ ಕಾರು ಕದಿಯುವ ಯತ್ನದಲ್ಲಿ 28 ವರ್ಷದ ಯುವತಿಯೊಬ್ಬಳ ಮೇಲೆ ಮೂವರು ದುಷ್ಕರ್ಮಿಗಳು ಗುಂಡು ಹಾರಿಸಿರುವ ಘಟನೆ ನಡೆದಿದ್ದು, ಸದ್ಯ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಮಂಗಳವಾರ ರಾತ್ರಿ 11:15ರ ಸುಮಾರಿಗೆ ಸೆಕ್ಟರ್​​ 65ರ ಬಳಿ ತನ್ನ ಸ್ನೇಹಿತನೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದ್ದು, ಬೈಕ್​ನಲ್ಲಿ ಬಂದ ಮೂವರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಯುವತಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೂವರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್​ 307(ಕೊಲೆ ಯತ್ನ, 25(1-ಬಿ) ಶಸ್ತ್ರಾಸ್ತ್ರ ಕಾಯ್ದೆ ಸೇರಿದಂತೆ ವಿವಿಧ ಪ್ರಕರಣದಡಿ ದೂರು ದಾಖಲು ಮಾಡಿಕೊಳ್ಳಲಾಗಿದೆ.

ಯುವತಿ ಪೂಜಾ ಶರ್ಮಾ ಹಾಗೂ ಸ್ನೇಹಿತ ಸಾಗರ್​ ಮಂಚಂದಾ(29) ಹರಿದ್ವಾರದವರಾಗಿದ್ದು, ಸದ್ಯ ಗುರುಗ್ರಾಮ್​ನ ಸೆಕ್ಟರ್​ 40ರಲ್ಲಿ ವಾಸವಾಗಿದ್ದಾರೆ. ಇಬ್ಬರು ವಿಪ್ರೋದಲ್ಲಿ ಕೆಲಸ ಮಾಡುತ್ತಿದ್ದಾರೆ. ಮಂಗಳವಾರ ರಾತ್ರಿ 8 ಗಂಟೆಗೆ ಊಟ ಮಾಡಿದ ಬಳಿಕ ಕಾರಿನಲ್ಲಿ ದೆಹಲಿ-ಜೈಪುರ ಹೆದ್ದಾರಿಯಲ್ಲಿ ತೆರಳಿದ್ದರು. ಈ ವೇಳೆ ಪೂಜಾ ಕಾರು ಚಾಲನೆ ಮಾಡುತ್ತಿದ್ದರು.

ಈ ವೇಳೆ ಬೈಕ್​ನಲ್ಲಿ ಬಂದ ಮೂವರು ಮುಖವಾಡ ಧರಿಸಿದ್ದರು. ಈ ವೇಳೆ ಅವರು ನಮಗೆ ಬಂದೂಕು ತೋರಿಸಿ, ಕಾರಿನ ಗ್ಲಾಸ್ ಕೆಳಗೆ ಇಳಿಸುವಂತೆ ಸೂಚನೆ ನೀಡಿದರು. ಇದಕ್ಕೆ ಒಪ್ಪದಿದ್ದಾಗ ಗುಂಡು ಹಾರಿಸಿದ್ದಾರೆ ಎಂದು ಸಾಗರ್ ಮಾಹಿತಿ ನೀಡಿದ್ದಾರೆ. ತಡರಾತ್ರಿ ಆಗಿದ್ದ ಕಾರಣ ಇವರ ಗುರುತು ಸಿಕ್ಕಿಲ್ಲ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.