ಗುರುಗ್ರಾಮ: ಕರ್ತವ್ಯನಿರತ ಟ್ರಾಫಿಕ್ ಪೊಲೀಸ್ ಸೂಚನೆಯನ್ನು ಲೆಕ್ಕಿಸದೆ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ ಕಾರಣಕ್ಕೆ ದಂಪತಿಯನ್ನು ಬಂಧಿಸಿದ ಘಟನೆ ದೆಹಲಿಯ ಗುರುಗ್ರಾಮದಲ್ಲಿ ನಡೆದಿದೆ.
ಸಿಗ್ನಲ್ ಜಂಪ್ ಮಾಡಿದ ಕಾರಣಕ್ಕೆ ಟ್ರಾಫಿಕ್ ಪೊಲೀಸ್ ಕಾರನ್ನು ತಡೆದಿದ್ದರು. ಇದಕ್ಕೆ ಕುಪಿತರಾದ ದಂಪತಿ ಕಾರಿನಿಂದಿಳಿದು ಟ್ರಾಫಿಕ್ ಪೊಲೀಸ್ ಮೇಲೆ ಹಲ್ಲೆ ಮಾಡಿದ್ದಾರೆ. ಈ ಘಟನೆ ಮುಂಜಾನೆ 9.45ರ ವೇಳೆ ಗುರುಗ್ರಾಮದ ವಾಟಿಕಾ ಚೌಕ್ನಲ್ಲಿ ನಡೆದಿದೆ.
ದಂಪತಿ ಸುಶಿಕ್ಷಿತರಾಗಿದ್ದು ಪತ್ನಿ ಸಿಎ ಆಗಿದ್ದರೆ ಪತಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಹಲ್ಲೆಯ ದೃಶ್ಯವನ್ನು ಚಿತ್ರೀಕರಿಸಿದ ಇಬ್ಬರೂ ಪತ್ರಕರ್ತರ ಮೇಲೆಯೂ ಈ ಪತಿ ಮತ್ತು ಪತ್ನಿ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಸದ್ಯ ಘಟನೆ ಸಂಬಂಧ ಇಬ್ಬರನ್ನೂ ವಶಕ್ಕೆ ಪಡೆದುಕೊಳ್ಳಲಾಗಿದೆ.