ಚಂಡೀಗಢ: ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳ ಸಂಬಂಧ ಜೈಲು ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ಚಾಸೌಧದ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಬಾಬಾ ಒಣ ಭೂಮಿಯಲ್ಲಿ ಕೃಷಿ ಮಾಡಲು ತನಗೆ ಜಾಮೀನು ಬೇಕೆಂದು ಪೆರೋಲ್ಗಾಗಿ ಅರ್ಜಿ ಸಲ್ಲಿಸಿದ್ದು, ಇದಕ್ಕೆ ರಾಜಕಾರಣಿಗಳು ಬೆಂಬಲ ನೀಡಿರುವುದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
ತನ್ನ ಒಡೆತನದಲ್ಲಿರುವ ಹೊಲಗಳಲ್ಲಿ ಕೃಷಿ ಮಾಡಬೇಕಾಗಿರುವುದಕ್ಕೆ ತನಗೆ ಬಿಡುವುಬೇಕೆಂದು ರಾಮ್ ರಹೀಮ್ ತನ್ನ ವಕೀಲರ ಮೂಲಕ ಅರ್ಜಿ ಸಲ್ಲಿಸಿದ್ದು, 42 ದಿನಗಳ ಕಾಲ ಪೆರೋಲ್ ಬಯಸಿದ್ದಾನೆ.
ತನ್ನ ವಿರುದ್ಧ ಸುದ್ದಿ ಬರೆದ ಪತ್ರಕರ್ತನ ಹತ್ಯೆ ಹಾಗೂ ಇಬ್ಬರ ಮೇಲೆ ಅತ್ಯಾಚಾರ ಪ್ರಕರಣ ಸಂಬಂಧ ರಾಮ್ ರಹೀಮ್ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ. ರಾಮ್ ರಹೀಮ್ ಬಂಧನಕ್ಕೊಳಗಾಗುವ ಮುನ್ನ ಆತನ ಆಶ್ರಮದ ಮುಂದೆ ಗಲಾಟೆ ನಡೆದಿತ್ತು. ಭಕ್ತರು ಹಾಗೂ ಪೊಲೀಸರ ನಡುವಿನ ಘರ್ಷಣೆ ನಂತರ ಸೇನಾ ನೆರವಿನಿಂದ ರಾಮ್ ರಹೀಮ್ನನ್ನು ಬಂಧಿಸಲಾಗಿತ್ತು.