ETV Bharat / bharat

ನಿಲ್ಲದ ಪಾಕ್​ ಕುತಂತ್ರ: ಕುಪ್ವಾರದಲ್ಲಿ ಸೇನೆ - ಉಗ್ರರ ನಡುವೆ ಗುಂಡಿನ ಕಾಳಗ

ಶ್ರೀನಗರದ ಕುಪ್ವಾರಾ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಸೇನೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.

Gunfight between security forces, militants along LoC in Kupwara
ಕುಪ್ವಾರದಲ್ಲಿ ಸೇನೆ ಮತ್ತು ಉಗ್ರ ನಡುವೆ ಗುಂಡಿನ ಕಾಳಗ
author img

By

Published : Nov 23, 2020, 12:42 PM IST

ಶ್ರೀನಗರ ( ಜಮ್ಮು ಮತ್ತು ಕಾಶ್ಮೀರ ): ಕುಪ್ವಾರಾ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಸೋಮವಾರ ಬೆಳಗ್ಗೆ ಗುಂಡಿನ ಚಕಮಕಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕುಪ್ವಾರಾದ ಮಚಿಲ್ ಸೆಕ್ಟರ್​​ನಲ್ಲಿ ಎಲ್‌ಒಸಿ ಉದ್ದಕ್ಕೂ ನವೆಂಬರ್ 22 ಮತ್ತು 23 ರ ಮಧ್ಯರಾತ್ರಿಯಲ್ಲಿ ಕೆಲವು ಶಂಕಿತರ ಚಲನೆ ಕಂಡು ಬಂದಿದ್ದನ್ನು ಭದ್ರತಾ ಪಡೆ (ಬಿಎಸ್‌ಎಫ್) ಸೈನಿಕರು ಗಮನಿಸಿದ್ದರು. ಸೈನಿಕರು ಅನುಮಾನಾಸ್ಪದ ಓಡಾಡುತ್ತಿದ್ದ ಉಗ್ರರ ಮೇಲೆ ಗುಂಡು ಹಾರಿಸಿದರು. ಈ ವೇಳೆ ಪ್ರತಿ ದಾಳಿ ಕೂಡ ನಡೆಯಿತು ಎಂದು ಬಿಎಸ್ಎಫ್​ನ ಡೆಪ್ಯೂಟಿ ಇನ್ಸ್​​ಪೆಕ್ಟರ್​ ಜನರಲ್ ಆರ್ ಮುತ್ತು ಕೃಷ್ಣನ್ ಈಟಿವಿ ಭಾರತಕ್ಕೆ ದೂರವಾಣಿ ಮೂಲಕ ತಿಳಿಸಿದ್ದಾರೆ.

ಭಾರಿ ಹಿಮಪಾತ ಹಿನ್ನೆಲೆ ಅವರ ಹುಡುಕಾಟ ಸಾಧ್ಯವಾಗಿಲ್ಲ, ಆದರೆ, ಮತ್ತೆ ಉಗ್ರರ ವಿರುದ್ಧ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅವರು ತಿಳಿಸಿದ್ದಾರೆ. ಉಗ್ರರ ವಿರುದ್ಧದ ಈ ಕಾರ್ಯಾಚರಣೆಯಲ್ಲಿ ಸೇನೆ ಮತ್ತು ಬಿಎಸ್‌ಎಫ್ ಜಂಟಿಯಾಗಿ ಭಾಗಿಯಾಗಿವೆ.

ಇದಕ್ಕೂ ಮುನ್ನ ನವೆಂಬರ್ 8 ರಂದು ನಡೆದ ಕಾರ್ಯಾಚರಣೆ ವೇಳೆ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿತ್ತು. ಆದರೆ, ಈ ವೇಳೆ ನಾಲ್ಕು ಸೈನಿಕರು ಮತ್ತು ಬಿಎಸ್ಎಫ್ ಸಿಬ್ಬಂದಿ ಹುತಾತ್ಮರಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.