ನವದೆಹಲಿ: ಕಿರಿಯ ವಯಸ್ಸಿನಲ್ಲೆ 190 ಸೆಂ.ಮೀ ಉದ್ದದಷ್ಟು ಕೂದಲು ಬೆಳೆಸಿ ಗುಜರಾತ್ ಮೂಲದ 17 ವರ್ಷದ ಬಾಲಕಿ ನೀಲಂಶಿ ಪಟೇಲ್ ಗಿನ್ನೆಸ್ ದಾಖಲೆ ಬರೆದಿದ್ದಾಳೆ.
ರಾಪುಂಜೆಲ್ ಎಂದು ಕರೆಯಲ್ಪಡುವ ನೀಲಂಶಿ ಈ ಮೊದಲು 2018 ರ ನವೆಂಬರ್ 21 ರಂದು 170 ಸೆಂಟಿಮೀಟರ್ ಉದ್ದದ ಕೂದಲಿನೊಂದಿಗೆ ದಾಖಲೆ ನಿರ್ಮಿಸಿದ್ದರು. ಇದೀಗ 190 ಸೆಂಟಿಮೀಟರ್ನಷ್ಟು ಉದ್ದದ ಕೂದಲಿನ ಮೂಲಕ ತನ್ನದೇ ದಾಖಲೆ ಮುರಿದಿದ್ದಾಳೆ. ನಾನು ನನ್ನ ಕೂದಲನ್ನು ಪ್ರೀತಿಸುತ್ತೇನೆ, ಕೂದಲನ್ನು ಕತ್ತರಿಸಬೇಕೆಂದು ನಾನು ಎಂದಿಗೂ ಬಯಸುವುದಿಲ್ಲ. ಗಿನ್ನೆಸ್ ಪುಸ್ತಕದ ದಾಖಲೆಯಲ್ಲಿ ನನ್ನ ಹೆಸರು ಇರಬೇಕೆಂಬುದು ನನ್ನ ತಾಯಿಯ ಕನಸಾಗಿತ್ತು ಎಂದು ಸುದ್ದಿ ಸಂಸ್ಥೆಗೆ ತಿಳಿಸಿದ್ದಾಳೆ.
ತನ್ನ ಕೂದಲಿನ ಸೀಕ್ರೆಟ್ ಬಗ್ಗೆ ಕೇಳಿದ್ರೆ ಮನೆಯಲ್ಲೇ ತಯಾರಿಸುವ ಎಣ್ಣೆ ಮತ್ತು ತನ್ನ ತಾಯಿಯೇ ಕೆಲವು ರಹಸ್ಯ ಪದಾರ್ಥಗಳುನ್ನ ಬಳಸಿ ತಯಾರಿಸುವ ಎಣ್ಣೆಯನ್ನ ಬಳಸುತ್ತೇನೆ. ಹೀಗಾಗಿ ನನ್ನ ಕೂದಲು ಹೆಚ್ಚು ಬೆಳವಣಿಗೆ ಕಂಡಿದೆ ಎಂದು ಹೇಳಿದ್ದಾಳೆ.
ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಮಾಡಿದ್ದಕ್ಕೆ ನನಗೆ ಸಂತೋಷವಿದೆ ಎಂದಿದ್ದಾರೆ. ಇನ್ನು ಕೂದಲಿನ ರಕ್ಷಣೆ ಬಗ್ಗೆ ಕೇಳಿದ್ದಕ್ಕೆ. ವಾರಕ್ಕೆ ಒಂದು ಬಾರಿ ಮಾತ್ರ ಕೂದಲನ್ನ ತೊಳೆಯುತ್ತೇನೆ. ಹೀಗೆ ತೊಳೆದ ಕೂದಲು ಒಣಗಳು ಅರ್ಧಗಂಟೆ ಬೇಕಾದರೆ, ಅದನ್ನ ಬಾಚಲು 1 ಗಂಟೆ ಬೇಕಾಗುತ್ತೆ ಎಂದಿದ್ದಾರೆ.