ETV Bharat / bharat

ಹಾರ್ದಿಕ್ ಪಟೇಲ್ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿದ ಗುಜರಾತ್ ಹೈಕೋರ್ಟ್

ಪಾಟೀದಾರ್ ಮೀಸಲಾತಿ ಆಂದೋಲನ ಪ್ರಕರಣ ಸಂಬಂಧ ಹಾರ್ದಿಕ್ ಪಟೇಲ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಗುಜರಾತ್ ಹೈಕೋರ್ಟ್ ತಿರಸ್ಕರಿಸಿದೆ.

anticipatory bail plea
ಗುಜರಾತ್ ಹೈಕೋರ್ಟ್
author img

By

Published : Feb 17, 2020, 7:49 PM IST

ಅಹಮದಾಬಾದ್: 2015ರ ಪಾಟೀದಾರ್ ಮೀಸಲಾತಿ ಆಂದೋಲನ ಪ್ರಕರಣದಲ್ಲಿ, ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಗುಜರಾತ್ ಹೈಕೋರ್ಟ್ ಇಂದು ತಿರಸ್ಕರಿಸಿದೆ.

ಅಪರಾಧಗಳ ಪೂರ್ವಾಪರವನ್ನು ಪರಿಶೀಲಿಸಿದ ನ್ಯಾಯಮೂರ್ತಿ ವಿ. ಎಂ. ಪಂಚೋಲಿ ಅವರು ಪಟೇಲ್ ಅವರ ಜಾಮೀನನ್ನು ತಿರಸ್ಕರಿಸಿದ್ದಾರೆ. 2015 ರಲ್ಲಿ ಹಾರ್ದಿಕ್ ಪಟೇಲ್​​​ ಅವರು ತಮ್ಮ ಸಮುದಾಯಕ್ಕೆ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ, ಗುಜರಾತ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ರು.

ಆಗಸ್ಟ್ 25, 2015 ರಂದು, ಸಾವಿರಾರು ಜನರು ಜಿಎಂಡಿಸಿ ಮೈದಾನದಲ್ಲಿ ಪಾಟೀದಾರ್​​​ ಅನಮತ್ ಆಂದೋಲನ್ ಸಮಿತಿ (ಇದರಲ್ಲಿ ಹಾರ್ದಿಕ್ ಪಟೇಲ್ ಒಂದು ಭಾಗವಾಗಿದ್ರು) ನೇತೃತ್ವದಲ್ಲಿ ಅಹಮದಾಬಾದ್‌ನಲ್ಲಿ ಮೆಗಾ ರ‍್ಯಾಲಿ ನಡೆಸಿದ್ರು. ಈ ರ‍್ಯಾಲಿಯನ್ನು ಅನುಮತಿಯಿಲ್ಲದೆ ನಡೆಸಿದ್ದರಿಂದ ಕಾನೂನುಬಾಹಿರ ಎಂದು ಪೊಲೀಸರು ಆರೋಪಿಸಿ, ಅಲ್ಲದೇ ಅಲ್ಲಿ ನಡೆದ ಹಿಂಸಾಚಾರಕ್ಕೆ ಹಾರ್ದಿಕ್ ಪಟೇಲ್ ಕಾರಣ ಎಂದು ದೂರು ದಾಖಲಿಸಿಕೊಂಡಿದ್ದರು. ಈ ಪ್ರತಿಭಟನೆಯಿಂದ ರಾಜ್ಯಾದ್ಯಂತ ಹಲವಾರು ಯುವಕರು ಸಾವನ್ನಪ್ಪಿದರು ಮತ್ತು ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಗಳಿಗೆ ಹಾನಿಯಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.