ಗಾಂಧಿನಗರ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಐವರು ಶಾಸಕರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಗುಜರಾತ್ ಕಾಂಗ್ರೆಸ್ ಅಮಾನತುಗೊಳಿಸಿದೆ.
ರಾಜ್ಯಸಭೆ ಚುನಾವಣೆಗೂ ಮುಂಚಿತವಾಗಿ ಕಾಂಗ್ರೆಸ್ನ ಐವರು ಶಾಸಕರು ಗುಜರಾತ್ ವಿಧಾನಸಭಾ ಸ್ಪೀಕರ್‌ಗೆ ರಾಜೀನಾಮೆ ಸಲ್ಲಿಸಿದ್ದರು.
-
Gujarat Congress suspends five party MLAs, who resigned as legislators, from the primary membership of the party. pic.twitter.com/abSx1XUXKV
— ANI (@ANI) March 16, 2020 " class="align-text-top noRightClick twitterSection" data="
">Gujarat Congress suspends five party MLAs, who resigned as legislators, from the primary membership of the party. pic.twitter.com/abSx1XUXKV
— ANI (@ANI) March 16, 2020Gujarat Congress suspends five party MLAs, who resigned as legislators, from the primary membership of the party. pic.twitter.com/abSx1XUXKV
— ANI (@ANI) March 16, 2020
ಆಪರೇಷನ್ ಕಮಲದ ಭೀತಿಯಿಂದ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ತಪ್ಪಿಸಲು ಕಾಂಗ್ರೆಸ್ ತನ್ನ 25 ಶಾಸಕರನ್ನು ಇಂದು ಸಂಜೆ ಗುಜರಾತ್‌ನಿಂದ ಜೈಪುರಕ್ಕೆ ಕಳುಹಿಸುವ ಸಾಧ್ಯತೆ ಇದೆ. ಈಗಾಗಲೆ 41 ಶಾಸಕರನ್ನು ಶನಿವಾರ ಮತ್ತು ಭಾನುವಾರ ಎರಡು ಬ್ಯಾಚ್‌ಗಳಲ್ಲಿ ಜೈಪುರಕ್ಕೆ ಕಳುಹಿಸಿ ಕೊಟ್ಟಿದೆ.
ಜೈಪುರದಲ್ಲಿರುವ ಶಾಸಕರನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ರಾಜಸ್ಥಾನ ಸರ್ಕಾರದ ಮುಖ್ಯ ಸಚೇತಕ ಡಾ.ಮಹೇಶ್ ಜೋಶಿ ಅವರಿಗೆ ವಹಿಸಲಾಗಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೂಡ ನಿರಂತರವಾಗಿ ನಿಗಾ ವಹಿಸುತ್ತಿದ್ದಾರೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವ ಕಾರಣ ಈ ಎಲ್ಲ ಶಾಸಕರನ್ನು ಜೈಪುರಕ್ಕೆ ಶಿಫ್ಟ್ ಮಾಡಲಾಗಿದೆ.