ETV Bharat / bharat

ಗುಜರಾತ್​ ಕಾಂಗ್ರೆಸ್​ನಲ್ಲಿ ರಾಜೀನಾಮೆ ಪರ್ವ; ಇಂದು ಮತ್ತೋರ್ವ ಶಾಸಕ ರಿಸೈನ್​

author img

By

Published : Jun 5, 2020, 12:32 PM IST

ಗುಜರಾತ್​ನಲ್ಲಿ ನಿನ್ನೆಯಷ್ಟೇ ಇಬ್ಬರು ಶಾಸಕರು ತಮ್ಮ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ರಾಜ್ಯಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಇಂದು ಮತ್ತೋರ್ವ ಕಾಂಗ್ರೆಸ್​ ಶಾಸಕ ತಮ್ಮ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

Brijesh Merja
ಬ್ರಿಜೇಶ್​ ಮೆರ್ಜಾ

ಅಹಮದಾಬಾದ್: ಗುಜರಾತ್​ನಲ್ಲಿ ಮತ್ತೆ ಕಾಂಗ್ರೆಸ್​ ಸದಸ್ಯರ ರಾಜೀನಾಮೆ ಪರ್ವ ಮುಂದುವರಿದಿದ್ದು, ಇಂದು ಮತ್ತೋರ್ವ ಕೈ ಶಾಸಕ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಮೊರ್ಬಿ ವಿಧಾನಸಭಾ ಕ್ಷೇತ್ರದ ಶಾಸಕ ಬ್ರಿಜೇಶ್​ ಮೆರ್ಜಾ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಕಾಂಗ್ರೆಸ್​ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ತಮ್ಮ ರಾಜೀನಾಮೆ ಪತ್ರ ಕಳುಹಿಸಿದ್ದಾರೆ. ರಾಜ್ಯಸಭಾ ಚುನಾವಣೆ ಸಮೀಪಿಸುತ್ತಿದ್ದು, ಇದಕ್ಕೂ ಮುನ್ನವೇ ಮೂವರು ಸದಸ್ಯರ ರಾಜೀನಾಮೆ ಅಚ್ಚರಿ ಮೂಡಿಸಿದೆ.

ನಿನ್ನೆಯಷ್ಟೇ ಇಬ್ಬರು ಶಾಸಕರು ತಮ್ಮ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಇಬ್ಬರು ಕಾಂಗ್ರೆಸ್​ ಶಾಸಕರಾದ ಅಕ್ಷಯ್ ಪಟೇಲ್ ಮತ್ತು ಜಿತು ಚೌಧರಿ ನಿನ್ನೆಯಷ್ಟೇ ಗುಜರಾಥ್​ ವಿಧಾನಸಭಾ ಸ್ಪೀಕರ್ ರಾಜೇಂದ್ರ ತ್ರಿವೇದಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದರು.

ಇದಕ್ಕೂ ಮೊದಲು ಕಳೆದ ಮಾರ್ಚ್‌ನಲ್ಲೂ ಕಾಂಗ್ರೆಸ್​ನ ಐವರು ಶಾಸಕರು ರಾಜೀನಾಮೆ ನೀಡಿದ್ದರು. 182 ಸದಸ್ಯರ ರಾಜ್ಯ ವಿಧಾನಸಭೆಯಲ್ಲಿ ಆಡಳಿತಾರೂಢ ಬಿಜೆಪಿಯಲ್ಲಿ 103 ಶಾಸಕರಿದ್ದು, ಪ್ರತಿಪಕ್ಷ ಕಾಂಗ್ರೆಸ್​ನಲ್ಲಿ ಈಗ 66 ಶಾಸಕರಿದ್ದಾರೆ.

ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗಾಗಿ ಇತ್ತೀಚೆಗಷ್ಟೇ ರಾಜ್ಯ ಬಿಜೆಪಿಯಿಂದ ಮೂವರು ಹಾಗೂ ಕಾಂಗ್ರೆಸ್​ನಿಂದ ಇಬ್ಬರನ್ನು ಪಕ್ಷ ಘೋಷಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.