ETV Bharat / bharat

ಗುಜರಾತ್​ ಕಾರ್ಖಾನೆಯಲ್ಲಿ ಬಾಯ್ಲರ್​ ಸ್ಫೋಟ... 8 ಸಾವು, 50 ಕಾರ್ಮಿಕರ ಸ್ಥಿತಿ ಗಂಭೀರ! - ಬಾಯ್ಲರ್​ ಸ್ಫೋಟ

ಕೆಮಿಕಲ್​ ಕಾರ್ಖಾನೆವೊಂದರಲ್ಲಿ ಬಾಯ್ಲರ್​ ಸ್ಫೋಟಗೊಂಡು 8ಮಂದಿ ಸಾವನ್ನಪ್ಪಿ, 50 ಕಾರ್ಮಿಕರು ಗಾಯಗೊಂಡಿರುವ ಘಟನೆ ಗುಜರಾತ್​ನಲ್ಲಿ ಸಂಭವಿಸಿದೆ.

Chemical Factory
Chemical Factory
author img

By

Published : Jun 4, 2020, 2:35 AM IST

Updated : Jun 4, 2020, 2:45 AM IST

ಭುರತ್​(ಗುಜರಾತ್​): ಇಲ್ಲಿನ ಕಮಿಕಲ್​ ಪ್ಯಾಕ್ಟರಿವೊಂದರಲ್ಲಿ ಬಾಯ್ಲರ್​ ಸ್ಫೋಟಗೊಂಡ ಪರಿಣಾಮ 8 ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, 50 ಕಾರ್ಮಿಕರು ಗಾಯಗೊಂಡಿರುವ ಘಟನೆ ನಡೆದಿದ್ದು, ಅವರನ್ನ ವಿವಿಧ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ನಿನ್ನೆ ಸಂಜೆ ಈ ಅವಘಡ ಸಂಭವಿಸಿದ್ದು, ಗುಜರಾತ್​ನ ಭುರತ್​​ ಜಿಲ್ಲೆಯ ದಾಹೆಜ್​​ನಲ್ಲಿರುವ ಕೃಷಿ ರಾಸಾಯನಿಕ ಕಾರ್ಖಾನೆ ಇದಾಗಿದೆ. ಘಟನೆಯಲ್ಲಿ ಗಾಯಗೊಂಡವರನ್ನ ಭುರತ್​ನ ವಿವಿಧ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದ್ದು, ಸ್ಫೋಟದ ತೀವ್ರತೆಗೆ ಅಕ್ಕ-ಪಕ್ಕ ಕಂಪನಿಗಳ ಮತ್ತು ಮನೆಗಳ ಗ್ಲಾಸ್​ಗಳು ಪುಡಿ-ಪುಡಿಯಾಗಿವೆ ಎಂದು ತಿಳಿದು ಬಂದಿದೆ. ಬಾಯ್ಲರ್​ ಸ್ಪೋಟಗೊಂಡಿರುವ ಕಾರಣ ಪಕ್ಕದ ಕೆಲ ಗ್ರಾಮದ ಜನರನ್ನ ಸ್ಥಳಾಂತರ ಮಾಡಲಾಗಿದೆ.

ಗುಜರಾತ್​ ಕಾರ್ಖಾನೆಯಲ್ಲಿ ಬಾಯ್ಲರ್​ ಸ್ಫೋಟ

ಬಾಯ್ಲರ್​ ಸ್ಪೋಟಗೊಂಡ ವೇಳೆ 230 ಕಾರ್ಮಿಕರು ಇಲ್ಲಿ ಉಪಸ್ಥಿತರಿದ್ದರು ಎಂದು ತಿಳಿದು ಬಂದಿದ್ದು, ಬೆಂಕಿಯನ್ನ ಈಗಾಗಲೇ ಸಂಪೂರ್ಣವಾಗಿ ನಿಯಂತ್ರಣ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಡಿ ಮೋಡಿಯಾ ತಿಳಿಸಿದ್ದಾರೆ.

Last Updated : Jun 4, 2020, 2:45 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.