ETV Bharat / bharat

ವಿಶೇಷ ಅಂಕಣ: ಸಮಸ್ಯೆಗಳ ಪರಿಹಾರಕ್ಕೆ ಮಾರ್ಗಸೂಚಿಯಷ್ಟೇ ಅಗತ್ಯ ಅದರ ಅನುಷ್ಠಾನ - ಭಾರತದಲ್ಲಿ ಅತ್ಯಾಚಾರ ಕೇಸ್​ನ ವಿರುದ್ಧದ ಕಾಯ್ದೆಗಳು

ನ್ಯಾಯಮೂರ್ತಿ ಜೆ.ಎಸ್. ವರ್ಮಾ ಸಮಿತಿಯು ಒಂದು ಕಠೋರ ಸತ್ಯವನ್ನು ಬಹಿರಂಗ ಪಡಿಸಿದ್ದು, "ಕಾನೂನುಗಳ ಮೇಲಿನ ಭಯವಿಲ್ಲದಿರುವುದು ಮತ್ತು ಉತ್ತಮ ಆಡಳಿತದ ಕೊರತೆ ಅಭದ್ರತೆ ಮೂಡಲು ಕಾರಣ" ಎಂದು ತಿಳಿಸಿತ್ತು. ಕೇವಲ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುವ ಮೂಲಕ ಸಮಸ್ಯೆಗಳನ್ನು ಸರಿಪಡಿಸುವುದು ಅಸಾಧ್ಯ.

ದೇಶದ ಅತ್ಯಾಚಾರ ಪ್ರಕರಣ
ದೇಶದ ಅತ್ಯಾಚಾರ ಪ್ರಕರಣ
author img

By

Published : Oct 14, 2020, 2:55 PM IST

ದೇಶದ ಜನಸಂಖ್ಯೆಯ ಅರ್ಧದಷ್ಟು ಮಹಿಳೆಯರಿದ್ದಾರೆ. ಕಳೆದ ವರ್ಷ ಮಹಿಳೆಯರ ವಿರುದ್ಧ ಪ್ರತಿನಿತ್ಯ ವರದಿಯಾದ ಸರಾಸರಿ 87 ಅತ್ಯಾಚಾರ ಪ್ರಕರಣಗಳು ಮಹಿಳೆಯರು ಮತ್ತು ಮಾತೃತ್ವದ ಘನತೆಗೆ ಧಕ್ಕೆ ತಂದಿದೆ. ಏಳು ವರ್ಷಗಳ ಹಿಂದೆ, ನ್ಯಾಯಮೂರ್ತಿ ಜೆ.ಎಸ್. ವರ್ಮಾ ಸಮಿತಿ ಪ್ರಕಟಿಸಿದ ಕಟು ಸತ್ಯವೆನೇಂದರೆ, ದೇಶದಲ್ಲಿ ಸೃಷ್ಠಿಯಾಗಿರುವ ಅಭದ್ರತೆಯ ವಾತಾವರಣಕ್ಕೆ ಸೂಕ್ತ ಕಾನೂನುಗಳ ಅನುಪಸ್ಥಿತಿ ಕಾರಣವಲ್ಲ. ಆದರೆ ನಿಜವಾಗಿ ಕೊರತೆಯಾಗಿರುವುದು ಉತ್ತಮ ಆಡಳಿತ ಮತ್ತು ಕಾನೂನಿನ ಬಗ್ಗೆ ಭಯ ಇಲ್ಲದಿರುವುದು.

ಕಾಯಿಲೆಗೆ ಸರಿಯಾದ ಚಿಕಿತ್ಸೆ ನೀಡದೆ ಕೇವಲ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುವ ಮೂಲಕ ಅಥವಾ ಕಾನೂನಿಗೆ ತಿದ್ದುಪಡಿ ತಂದ ಮಾತ್ರಕ್ಕೆ ಲೋಪದೋಷಗಳನ್ನು ಸರಿಪಡಿಸುವುದು ಅಸಾಧ್ಯ. ಕೇಂದ್ರ ಗೃಹ ಸಚಿವಾಲಯ ಈಗಾಗಲೇ ಕಳೆದ ವರ್ಷ ಮೇ 16, ಕಳೆದ ಡಿಸೆಂಬರ್ 5 ಮತ್ತು ಈ ತಿಂಗಳ 5ರಂದು ಎಲ್ಲ ರಾಜ್ಯಗಳಿಗೆ ಸ್ಪಷ್ಟ ಸೂಚನೆಗಳನ್ನು ನೀಡಿ, ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳಲ್ಲಿ ಪೊಲೀಸರು ಕಠಿಣ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ತಿಳಿಸಿದೆ. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಯಾವುದೇ ಪೊಲೀಸ್ ಠಾಣೆಯಲ್ಲಿ ಸರಹದ್ದು ವ್ತಾಪ್ತಿಯನ್ನು ಪರಿಗಣಿಸದೆ ಎಫ್‌ಐಆರ್ ದಾಖಲಿಸುವುದು ಕಡ್ಡಾಯ ಎಂದು ಕೇಂದ್ರ ಸರಕಾರ ಸ್ಪಷ್ಡಪಡಿಸಿದೆ.

ಸಿಆರ್‌ಪಿಸಿಯ ಸೆಕ್ಷನ್ 173 ರ ಅಡಿಯಲ್ಲಿ ಪ್ರಕರಣ ದಾಖಲಾದ 60 ದಿನಗಳಲ್ಲಿ ತನಿಖೆ ಪೂರ್ಣಗೊಳಿಸಬೇಕು ಮತ್ತು ತನಿಖೆಯಲ್ಲಿನ ನಿರ್ಲಕ್ಷ್ಯಕ್ಕೆ ಕಠಿಣ ದಂಡ ವಿಧಿಸಲು ಅವಕಾಶ ಇದೆ. ಅಲ್ಲದೆ ಸೆಕ್ಷನ್ 173 ರ ಪ್ರಕಾರ ಆರೋಪಗಳನ್ನು ದಾಖಲಿಸಿದ ನಂತರ ತನಿಖೆಗ ಪ್ರಗತಿಯನ್ನು ನಿರಂತರವಾಗಿ ಪರಿಶೀಲಿಸಬೇಕು ‘'ಇನ್ವೆಸ್ಟಿಗೇಷನ್ ಟ್ರ್ಯಾಕಿಂಗ್' ವ್ಯವಸ್ಥೆ’ಯ ಮೂಲಕ ತನಿಖೆಯನ್ನು ಆಗಾಗ್ಗೆ ಮೇಲ್ವಿಚಾರಣೆ ಮಾಡಬೇಕೆಂದು. ಕ್ರಿಮಿನಲ್ ಪ್ರೊಸೀಜರ್ ಕೋಡ್ ಸೆಕ್ಷನ್ 154 ರ ಅಡಿಯಲ್ಲಿ ಎಫ್ಐಆರ್ ದಾಖಲಿಸುವುದು ಕಡ್ಡಾಯವಾಗಿದೆ ಎಂದು 2013 ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು, ಆಲ್ಲದೆ ನ್ಯಾಯಾಲಯ ಪೋಲಿಸ್ ವ್ಯವಸ್ಥೆಗೆ ಆಪರಾಧಗಳ ಕರಿತು ಸಮರ್ಪಕ ತನಿಖೆ ನಡೆಸಲು 8 ಮಾರ್ಗದರ್ಶನಗಳನ್ನು ನೀಡಿತ್ತು. ಎಲ್ಲಿಯವರೆಗೆ ಪೊಲೀಸರು ರಾಜಕಾರಣಿಗಳ ಅಡಿಯಾಳಾಗಿರುತ್ತಾರೋ ಅಲ್ಲಿಯವರೆಗೆ ಗೂಂಡಾಗಳು ಮತ್ತು ಅಪರಾಧಿಗಳು ಮಹಿಳೆಯರ ಮೇಲೆ ದೌರ್ಜನ್ಯ ನಡೆಸುತ್ತಾರೆ ಮತ್ತು ತಮ್ಮ ರಾಜಕೀಯ ಪ್ರಭಾವ ಬಳಸಿ ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಾರೆ. ಮಾರ್ಗಸೂಚಿಗಳನ್ನು ಪುನರುಚ್ಚರಿಸುವುದಕ್ಕಿಂತ ಹೆಚ್ಚಾಗಿ ಅವುಗಳನ್ನು ಜಾರಿಗೊಳಿಸುವ ಇಚ್ಚಾಶಕ್ತಿಯನ್ನು ತಕ್ಷಣ ತೋರಬೇಕು,

'ಘೋರ ಅಪರಾಧಗಳಿಗೆ' ಶಿಕ್ಷೆ ಪೊಲೀಸ್ ಮತ್ತು ಅಭಿಯೋಜಕ ವ್ಯವಸ್ಥೆ ವಿಧಿಸದಿದ್ದರೆ, ಅಂತಹ ಎಲ್ಲಾ ಪ್ರಕರಣಗಳಲ್ಲಿ ತನಿಖೆ ಮತ್ತು ಕಾನೂನು ಕ್ರಮ ಜರುಗಿಸುವ ಅಭಿಯೋಜಕ ಅಧಿಕಾರಿಗಳ ಪಾತ್ರವನ್ನು ಕಟ್ಟುನಿಟ್ಟಾಗಿ ಪರಿಶೀಲಿಸಬೇಕು. 2014ರಲ್ಲಿ, ನ್ಯಾಯಾಂಗವು ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು ಮತ್ತು ತಪ್ಪಿಗೆ ಇಲಾಖೆ ಶಿಕ್ಷೆ ವಿಧಿಸಬೇಕು ಎಂದು ತೀರ್ಪು ನೀಡಿತು. ಅಂದಿನ ನಿರ್ದೇಶನದಂತೆ ಆರು ತಿಂಗಳೊಳಗೆ ಅಗತ್ಯವಾದ ವ್ಯವಸ್ಥೆಯನ್ನು ಸಜ್ಜಗೊಳಿಸಲು ಸರ್ಕಾರಗಳು ವಿಫಲವಾದ ಕಾರಣ, ಅಪರಾಧ ಚಟುವಟಿಕೆಗಳು ನಿರಾತಂಕವಾಗಿ ನಡೆಯುತ್ತಿವೆ.

ಅಪರಾಧಿಗಳನ್ನು ನಿರ್ಲಕ್ಷಿಸದೆ ಕಾನೂನಿನ ಪಾಲನೆಯ ನಿಯಮವನ್ನು ಎತ್ತಿ ಹಿಡಿಯಬೇಕಾದರೆ ಪೊಲೀಸ್ ಸುಧಾರಣೆಗಳು ಅಗತ್ಯವೆಂದು ಪ್ರಕಾಶ್ ಸಿಂಗ್ ಪ್ರಕರಣದಲ್ಲಿ 2006ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಏಳು ಸ್ಪಷ್ಟ ಮಾರ್ಗಸೂಚಿಗಳನ್ನು ಯಾವುದೇ ರಾಜ್ಯಗಳು ನಿಷ್ಠೆಯಿಂದ ಪಾಲಿಸಿಲ್ಲ. ಅಪರಾಧ ರಾಜಕಾರಣವನ್ನು ನಾಚಿಕೆಯಿಲ್ಲದ ಧೈರ್ಯದಿಂದ ಆಚರಿಸಿದಾಗ ಮತ್ತು ಪೊಲೀಸ್ ವ್ಯವಸ್ಥೆಯು ಅದಕ್ಕೆ ಅಧೀನವಾದಾಗ, ಸಾಮಾಜಿಕ ನ್ಯಾಯವನ್ನು ಹೇಗೆ ಸಾಧಿಸಬಹುದು?

ಅದೇ ವರ್ಷ, ಸುಪ್ರೀಂ ಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ವಿ.ಎನ್. ಖರೆ, ಅಪರಾಧ ನ್ಯಾಯ ವ್ಯವಸ್ಥೆಯನ್ನು ಬಲಪಡಿಸಲು ಐದು ಶಕ್ತಿಯುತ ಸೂತ್ರಗಳನ್ನು ನೀಡಿದರು, ಇದನ್ನು ಪಂಚಸೂತ್ರಕ್ಕೆ ಹೋಲಿಸಲಾಯಿತು. ಮೊದಲ ಸಲಹೆ ಏನೆಂದರೆ, ಅಭಿಯೋಜಕ ಇಲಾಖೆಯನ್ನು ಸರಕಾರದ ಹಿಡಿತದಿಂದ ಮುಕ್ತಗೊಳಿಸಿ ಅದಕ್ಕೆ ಸ್ವಾಯತ್ತತೆ ನೀಡುವುದು. ಅಭಿಯೋಜಕ ಇಲಾಖೆಯನ್ನು ಕೇಂದ್ರ ಚುನಾವಣೆ ಆಯೋಗ ಮಾದರಿಯಲ್ಲಿ ಸ್ವತಂತ್ರ ಇಲಾಖೆಯೆಂದು ಪರಿಗಣಿಸಬೇಕು. ಇನ್ನೊಂದು ಸಲಹೆ ಏನೆಂದರೆ ಸ್ವತಂತ್ರ ಅಪರಾಧ ತನಿಖೆ ಪದ್ಧತಿ ಜಾರಿಗೊಳಿಸುವುದು. ಮೂರನೆಯದು, ಪೊಲೀಸರಿಗೆ ನೀಡಿದ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಬೇಕು, ಪ್ರಮುಖ ಸಾಕ್ಷ್ಯಗಳಿಗೆ ಮಾನ್ಯತೆ ನೀಡಿ, ಪ್ರಕರಣದ ವಿಚಾರಣೆಗೆ ಮೊದಲೇ ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಸಾಕ್ಷಿಗಳಿಗೆ ಸೂಕ್ತ ಭದ್ರತೆ ನೀಡುವುದು ನಾಲ್ಕನೆಯ ಸಲಹೆ ಆಗಿತ್ತು. ಕೊನೆಯದು ಆರೋಪಿಗಳು ಖುಲಾಸೆಗೊಂಡ ಪ್ರಕರಣಗಳಲ್ಲಿ ಮೇಲ್ಮನವಿ ಸಲ್ಲಿಸುವ ಅಧಿಕಾರವನ್ನು ಸಂತ್ರಸ್ಥರಿಗೆ ನೀಡುವುದು. ಇಲ್ಲಿ ಕನಿಷ್ಠ ಶಿಕ್ಷೆಯ ಕಾರಣಗಳನ್ನು ಉಲ್ಲೇಖಿಸಬೇಕು, ಕಾನೂನು ಆಯೋಗವು 2012 ರ ಹಿಂದೆಯೇ ಸಾರ್ವಜನಿಕ ಅಭಿಯೋಜಕರ ನೇಮಕಾತಿ ಪ್ರಕ್ರಿಯೆಯನ್ನು ಸುಧಾರಿಸಬೇಕೆಂದು ಸೂಚಿಸಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.