ಕೋವಿಡ್-19 ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ 21 ದಿನ ಇಡೀ ದೇಶವನ್ನೇ ಲಾಕ್ಡೌನ್ ಘೋಷಣೆ ಮಾಡಿದ್ದಾರೆ.
ಈ ಆದೇಶವನ್ನು ಮೀರಿದವರಿಗೆ ವಿಧಿಸಲಾಗುವ ದಂಡ ಹಾಗೂ ಶಿಕ್ಷೆ ಕುರಿತು ಗೃಹ ಸಚಿವಾಲಯ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ವಿಪತ್ತು ನಿರ್ವಹಣಾ ಕಾಯ್ದೆ, 2005ರ ಸೆಕ್ಷನ್ 51ರಿಂದ 60 ಪ್ರಕಾರ, ಅಪರಾಧಗಳು ಮತ್ತು ದಂಡಗಳು ಹೀಗಿವೆ:
ಪ್ರತಿರೋಧ/ಅಡಚಣೆ :
ಒಂದರಿಂದ ಎರಡು ವರ್ಷ ಜೈಲು ಅಥವಾ ದಂಡ ಅಥವಾ ದಂಡದೊಂದಿಗೆ ಜೈಲು
ವಾಸ್ತವ ಮರೆಮಾಡಿ ಸುಳ್ಳು ಹೇಳುವವರಿಗೆ :
ಎರಡು ವರ್ಷ ಕಾರಾಗೃಹ ವಾಸ ಹಾಗೂ ದಂಡ.
ಹಣ ಹಾಗೂ ವಸ್ತುಗಳ ದುರುಪಯೋಗ :
ಎರಡು ವರ್ಷ ಜೈಲು ಹಾಗೂ ದಂಡ.
ಸುಳ್ಳು ಎಚ್ಚರಿಕೆ ನೀಡುವುದು :
ಒಂದು ವರ್ಷ ಕಾರಾಗೃಹ ವಾಸ ಹಾಗೂ ದಂಡ
. ಸರ್ಕಾರಿ ಇಲಾಖೆಯ ಅಪರಾಧಗಳು :
ಅಪರಾಧದಲ್ಲಿ ತೊಡಗುವ ಸರ್ಕಾರಿ ಅಧಿಕಾರಿಗೆ ಶಿಕ್ಷೆ.
ಕರ್ತವ್ಯದಲ್ಲಿರುವ ಅಧಿಕಾರಿಯ ವೈಫಲ್ಯ ಅಥವಾ ಈ ಕಾಯ್ದೆಯ ಉಲ್ಲಂಘನೆಗೆ ಒಪ್ಪಿಗೆ : ಒಂದು ವರ್ಷ ಜೈಲು ಶಿಕ್ಷೆ ಹಾಗೂ ದಂಡ.
ಆದೇಶ ಉಲ್ಲಂಘಿಸಿದ್ದಕ್ಕಾಗಿ :
ಒಂದು ವರ್ಷದವರೆಗೆ ಕಾರಾಗೃಹ ವಾಸ ಅಥವಾ ದಂಡ ಹಾಗೂ ಕಾರಾಗೃಹ ವಾಸ
ಕಂಪನಿಗಳಿಂದ ಅಪರಾಧ :
ಅಪರಾಧವೆಸಗಿದ ಕಂಪನಿಯ ನಿರ್ದೇಶಕ, ವ್ಯವಸ್ಥಾಪಕ, ಕಾರ್ಯದರ್ಶಿ ಅಥವಾ ಅಧಿಕಾರಿಗೆ ಶಿಕ್ಷೆ.