ಡಿಯೊರಿಯಾ: ಸರತಿಯಲ್ಲಿ ಬಾರದ ಇಬ್ಬರು ಯುವಕರು, ಈ ಬಗ್ಗೆ ಪ್ರಶ್ನಿಸಿದ ಪೊಲೀಸ್ ಪೇದೆಗೆ ಹಿಗ್ಗಾಮುಗ್ಗಾ ಥಳಿಸಿರುವ ವಿಡಿಯೋ ವೈರಲ್ ಆಗಿದೆ.
ಉತ್ತರಪ್ರದೇಶದ ಡಿಯೊರಿಯಾ ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ಪೇದೆಗೆ ಯುವಕರಿಬ್ಬರು ಮನಬಂದಂತೆ ಥಳಿಸಿದ್ದಾರೆ. ಈ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾಗಿ ತಿಳಿದುಬಂದಿದೆ.
ಡಿಯೊರಿಯಾ ರೈಲ್ವೆ ನಿಲ್ದಾಣ ಟಿಕೆಟ್ ಕೌಂಟರ್ ಬಳಿಯಿದ್ದ ಕ್ಯೂ ಲೆಕ್ಕಿಸದೆ, ಈ ಇಬ್ಬರು ಯುವಕರು ಮುನ್ನುಗ್ಗಲು ಯತ್ನಿಸಿದರು. ಇದನ್ನು ರೈಲ್ವೇ ಪೊಲೀಸ್ ಪೇದೆ ಪ್ರಶ್ನಿಸಿದ್ದಾರೆ. ಮಾತಿಗೆ ಮಾತು ಬೆಳೆದು, ಅವಾಚ್ಯ ಶಬ್ದಗಳಿಂದ ಪೇದೆಯನ್ನು ನಿಂದಿಸಿದ್ದಾರೆ. ನಂತರ, ಮನಬಂದಂತೆ ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ.
ಪೇದೆಯ ಹೆಸರು ಇನ್ನೂ ತಿಳಿದುಬಂದಿಲ್ಲ. ಸದ್ಯ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.