ETV Bharat / bharat

ವಿಶೇಷ ಅಂಕಣ: ಭಾರತದ ಪೌರತ್ವ ಪಡೆಯೋದು ಹೇಗೆ? ಎಷ್ಟು ವಿದೇಶಿಗರಿಗೆ ಪೌರತ್ವ ನೀಡಲಾಗಿದೆ? - ನೈಸರ್ಗಿಕೀಕರಣ ಪ್ರಕ್ರಿಯೆ

ಕೇಂದ್ರ ಗೃಹ ಸಚಿವಾಲಯದ ಪ್ರಕಾರ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ಸುಮಾರು 4,000 ಜನರಿಗೆ 2019ರಲ್ಲಿ ಭಾರತದ ಪೌರತ್ವ ನೀಡಲಾಗಿದೆ. ಧಾರ್ಮಿಕ ಅಲ್ಪಸಂಖ್ಯಾತರಾಗಿರುವ ನೂರಾರು ಜನರು ಇದರಲ್ಲಿ ಸೇರಿದ್ದಾರೆ. ಕಳೆದ ಆರು ವರ್ಷಗಳಲ್ಲಿ ಪಾಕಿಸ್ತಾನದ 2,830 ಜನ, ಅಫ್ಘಾನಿಸ್ತಾನದ 912 ಮತ್ತು ಬಾಂಗ್ಲಾದೇಶದಿಂದ 172 ಜನರಿಗೆ ಭಾರತೀಯ ಪೌರತ್ವ ನೀಡಲಾಗಿದೆ.

Indian Citizenship
ಭಾರತ
author img

By

Published : Sep 24, 2020, 5:06 PM IST

ಭಾರತೀಯನಾಯಾಗಿ ಪೌರತ್ವ ಪಡೆದ ವ್ಯಕ್ತಿಗಳ ದಾಖಲೆಗಳನ್ನು, ಪೌರತ್ವ ಕಾಯ್ದೆ 1955 ರ ನಿಬಂಧನೆಗಳ ಪ್ರಕಾರ ಮತ್ತು ಅಲ್ಲಿ ರೂಪಿಸಲಾಗಿರುವ ನಿಯಮಗಳ ಪ್ರಕಾರ ನಿರ್ವಹಿಸಲಾಗುತ್ತದೆ. ಪೌರತ್ವ ಕಾಯ್ದೆ 1955 ರ ಸೆಕ್ಷನ್ 5 (ನೋಂದಣಿ ಮೂಲಕ) ಅಥವಾ ಸೆಕ್ಷನ್ 6 (ನೈಸರ್ಗಿಕೀಕರಣ ಪ್ರಕ್ರಿಯೆ ಮೂಲಕ)ರ ಅಡಿಯಲ್ಲಿ ಭಾರತೀಯ ಪೌರತ್ವವನ್ನು ವ್ಯಕ್ತಿಗಳಿಗೆ ನೀಡಲಾಗುತ್ತದೆ. ಪೌರತ್ವ ಪಡೆದ ವ್ಯಕ್ತಿಗಳ ದಾಖಲೆಗಳನ್ನು ಧರ್ಮವಾರು ನಿರ್ವಹಿಸಲಾಗುವುದಿಲ್ಲ ಅನ್ನೋದು ಪ್ರಮುಖ ಅಂಶ.

ಭಾರತೀಯ ನಾಗರಿಕನಾಗಿ ಒಬ್ಬ ವ್ಯಕ್ತಿ ಭಾರತದಲ್ಲೇ ಜನಿಸಿದಾಗ ಪೌರತ್ವ ಪಡೆಯಬಹುದು. ಇದರೊಂದಿಗೆ ಭಾರತ ಮೂಲದವರಾಗಿ ಅಥವಾ ನೋಂದಣಿ ಮೂಲಕವೂ ಪಡೆಯಬಹುದು. ಇದರೊಂದಿಗೆ ನೈಸರ್ಗಿಕೀಕರಣ ಪ್ರಕ್ರಿಯೆ ಮೂಲಕ ಅಂದರೆ, ಭಾರತ ದೇಶದ ಪ್ರಜೆಯಲ್ಲದವರು(ವಿದೇಶಿಗರು, ಆದರೆ ಅಕ್ರಮ ವಲಸಿಗರನ್ನು ಹೊರತುಪಡಿಸಿ) ದೇಶದ ಪೌರತ್ವ ಅಥವಾ ರಾಷ್ಟ್ರೀಯತೆಯನ್ನು ಪಡೆದುಕೊಳ್ಳುವ ಕಾನೂನು ಪ್ರಕ್ರಿಯೆಯ ಮೂಲಕ ಪೌರತ್ವ ಪಡೆದುಕೊಳ್ಳಬಹುದು. ಮತ್ತೊಂದೆಡೆ ಭೂಪ್ರದೇಶದ ಸಂಯೋಜನೆ ಮೂಲಕ ಪಡೆದುಕೊಳ್ಳಬಹುದು. ಭೂಪ್ರದೇಶದ ಸಂಯೋಜನೆ ಎಂದರೆ ದೇಶಕ್ಕೆ ಸೇರಿದ ಕೇಂದ್ರಾಡಳಿತ ಪ್ರದೇಶದಲ್ಲಿ ವಾಸವಿರುವ ನಾಗರಿಕರು ಕೇಂದ್ರ ಸರ್ಕಾರದ ನಿಯಮಗಳ ಮೂಲಕ ದೇಶದ ಪೌರತ್ವ ಪಡೆಯುವ ಪ್ರಕ್ರಿಯೆ. ಭಾರತದಲ್ಲಿ ಪೌರತ್ವವನ್ನು ಪಡೆದುಕೊಳ್ಳುವುದು ಪೌರತ್ವ ಕಾಯ್ದೆ 1955 ರ ಅಡಿಯಲ್ಲಿರುವ ನಿಬಂಧನೆ ಮತ್ತು ಅಲ್ಲಿ ಮಾಡಿದ ನಿಯಮಗಳಿಂದ ನಿಯಂತ್ರಿಸಲ್ಪಡುತ್ತದೆ.

ಭಾರತದಲ್ಲಿ ನಿರಾಶ್ರಿತರನ್ನು ನಿಯಂತ್ರಿಸುವ ಕಾನೂನು ಇಲ್ಲ. ಬದಲಾಗಿ, ನಿರಾಶ್ರಿತರು ಮತ್ತು ದೇಶದಲ್ಲಿ ಆಶ್ರಯ ಬೇಕಾಗಿರುವವರ ಸ್ವವಿವರಗಳ ನಿರ್ವಹಣೆ ತಾತ್ಕಾಲಿಕವಾಗಿ ಉಳಿದಿದೆ. ಇದರಲ್ಲಿ ಅಸಾಮಾನ್ಯ ಉಭಯ ವ್ಯವಸ್ಥೆಯಿದ್ದು, ಇದರಲ್ಲಿ ಆಶ್ರಯ ಬೇಕಾಗಿರುವವರ ವಿವರಗಳನ್ನು ಸರ್ಕಾರ ಮತ್ತು ನಿರಾಶ್ರಿತರಿಗಾಗಿ ಇರುವ ವಿಶ್ವಸಂಸ್ಥೆಯ ಹೈಕಮಿಷನರ್(UNHCR) ನಡುವೆ ವಿಂಗಡಿಸಲಾಗಿದೆ. ಇದರಲ್ಲಿ ಹೆಚ್ಚಿನ ಪಾಲನ್ನು ಸರ್ಕಾರ ಹೊಂದಿದೆ. ನೆರೆಯ ರಾಷ್ಟ್ರಗಳಿಂದ ಆಶ್ರಯ ಪಡೆಯುವವರನ್ನು ಸರ್ಕಾರ ನೇರವಾಗಿ ನಿರ್ವಹಿಸುತ್ತದೆ. ಇದರಲ್ಲಿ ಮುಖ್ಯವಾಗಿ ಟಿಬೆಟಿಯನ್ನರು ಹಾಗೂ ಶ್ರೀಲಂಕಾದವರು ಸೇರುತ್ತಾರೆ. ಇನ್ನೊಂದೆಡೆ ಪೂರ್ವದಲ್ಲಿ ಭಾರತದೊಂದಿಗೆ ಗಡಿ ಹಂಚಿಕೊಂಡಿರುವ ಮಯನ್ಮಾರ್‌ನಿಂದ ಆಗಮಿಸುವವರು ಸೇರಿದಂತೆ ನೆರೆ ರಾಷ್ಟ್ರಗಳಲ್ಲದ ಎಲ್ಲಾ ದೇಶಗಳ ನಿರಾಶ್ರಿತರು ಭಾರತದ ಪೌರತ್ವಕ್ಕಾಗಿ ಸಂಬಂಧಿತ ದಾಖಲಾತಿಗಳೊಂದಿಗೆ UNHCR ಅನ್ನು ಸಂಪರ್ಕಿಸಬೇಕಾಗುತ್ತದೆ.

ವರ್ಷವಾರು ಮತ್ತು ದೇಶವಾರು ಭಾರತೀಯ ಪೌರತ್ವ ನೀಡಿರುವ ವಿವರ...

ಕ್ರಮ ಸಂಖ್ಯೆದೇಶ20152016201720182019Total
1.ಬಾಂಗ್ಲಾದೇಶ16+14864*3949192515012
2.ಪಾಕಿಸ್ತಾನ2636704764508092668
3.ಅಪ್ಘಾನಿಸ್ತಾನ2342441173040665
4.ಶ್ರೀಲಂಕಾ1735341211109
5.ಅಮೆರಿಕ2525252010105

2016 ರಿಂದ ಬಾಂಗ್ಲಾದೇಶದಿಂದ ವಲಸೆ ಬಂದವರ ಸಂಖ್ಯೆ ಕಡಿಮೆಯಾಗಿದೆ. 1971 ರಲ್ಲಿ ಬಾಂಗ್ಲಾದೇಶ ಸ್ವತಂತ್ರ ರಾಷ್ಟ್ರವಾದ ನಂತರ 2015 ರಲ್ಲಿ ಬಾಂಗ್ಲಾದೇಶದಿಂದ ವಲಸೆ ಬಂದವರ ವಲಸಿಗರ ಸಂಖ್ಯೆ ಅತಿ ಹೆಚ್ಚಾಗಿದೆ. 2015 ರಿಂದ ಪಾಕಿಸ್ತಾನದಿಂದ ವಲಸೆ ಬಂದವರ ಸಂಖ್ಯೆ ಹೆಚ್ಚಾಗಿದೆ. ಆದರೆ ಅಫ್ಘಾನಿಸ್ತಾನ ವಲಸಿಗರ ಸಂಖ್ಯೆ ಕಡಿಮೆಯಾಗಿದೆ.

ಕೇಂದ್ರ ಗೃಹ ಸಚಿವಾಲಯದ ಪ್ರಕಾರ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ಸುಮಾರು 4,000 ಜನರಿಗೆ 2019ರಲ್ಲಿ ಭಾರತದ ಪೌರತ್ವ ನೀಡಲಾಗಿದೆ. ಧಾರ್ಮಿಕ ಅಲ್ಪಸಂಖ್ಯಾತರಾಗಿರುವ ನೂರಾರು ಜನರು ಇದರಲ್ಲಿ ಸೇರಿದ್ದಾರೆ. ಕಳೆದ ಆರು ವರ್ಷಗಳಲ್ಲಿ ಪಾಕಿಸ್ತಾನದ 2,830 ಜನ, ಅಫ್ಘಾನಿಸ್ತಾನದ 912 ಮತ್ತು ಬಾಂಗ್ಲಾದೇಶದಿಂದ 172 ಜನರಿಗೆ ಭಾರತೀಯ ಪೌರತ್ವ ನೀಡಲಾಗಿದೆ.

2010 ರಿಂದ ಕಳೆದ 10 ವರ್ಷಗಳಲ್ಲಿ 21,408 ವಿದೇಶಿಗರಿಗೆ ಭಾರತೀಯ ಪೌರತ್ವ ನೀಡಲಾಗಿದೆ ಎಂದು 2020ರ ಬಜೆಟ್ ಅಧಿವೇಶನದಲ್ಲಿ ಅಂಕಿ-ಅಂಶ ನೀಡಲಾಗಿದೆ. ಗೃಹ ಸಚಿವಾಲಯ ಹೊರಡಿಸಿದ ಮಾಹಿತಿಯ ಪ್ರಕಾರ, 2019 ರಲ್ಲಿ 987 ವಿದೇಶಿಯರಿಗೆ ಪೌರತ್ವ ನೀಡಲಾಗಿದೆ. 2018 ರಲ್ಲಿ 628, 2017 ರಲ್ಲಿ 817, 2016 ರಲ್ಲಿ 1,106, 2015 ರಲ್ಲಿ 15,470, 2014 ರಲ್ಲಿ 617, 2013 ರಲ್ಲಿ 563, 2012 ರಲ್ಲಿ 553, 2011 ರಲ್ಲಿ 425 ಮತ್ತು 2010 ರಲ್ಲಿ 232 ಜನರಿಗೆ ಪೌರತ್ವ ನೀಡಲಾಗಿದೆ.

2020ರಲ್ಲಿ ಭಾರತದಲ್ಲಿ ಆಶ್ರಯಕ್ಕಾಗಿ ಕೋರಿರುವ ನಿರಾಶ್ರಿತರ ಸಂಖ್ಯೆ (Migrationpolicy.org)

ಹುಟ್ಟಿದ ರಾಷ್ಟ್ರಸಂಖ್ಯೆ
ಟಿಬೆಟ್​1,08,005
ಶ್ರೀಲಂಕಾ95,230
ಮಯನ್ಮಾರ್​21,049
ಅಫ್ಘಾನಿಸ್ಥಾನ16,333
ಇತರ3,477
ಒಟ್ಟು2,44,094

ETV Bharat Logo

Copyright © 2024 Ushodaya Enterprises Pvt. Ltd., All Rights Reserved.