ETV Bharat / bharat

ಆನೆಗಳಿಂದ ಕೊರೊನಾದಂತಹ ಕಾಯಿಲೆ ಹಬ್ಬುವ ಸಾಧ್ಯತೆ: ಪೆಟಾ ಎಚ್ಚರಿಕೆ - ಕೋವಿಡ್ 19

ಪ್ರಾಣಿ ದಯಾ ಸಂಘ (ಪೆಟಾ) ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಬಾಗಿಲು ಬಡಿದಿದ್ದು, ದೇಶದಲ್ಲಿ ಬಂಧಿತ ಆನೆಗಳು ಎದುರಿಸುತ್ತಿರುವ ಸನ್ನಿಹಿತ ಝೋನೋಟಿಕ್ ಕ್ಷಯರೋಗಕ್ಕೆ ಕಾರಣವಾಗಲಿದೆ. ಇದು ಸಾರ್ವಜನಿಕರ ಆರೋಗ್ಯಕ್ಕೆ ಅಪಾಯ ಉಂಟುಮಾಡಲಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದೆ.

Asian Elephant
ಆನೆ
author img

By

Published : May 14, 2020, 9:53 PM IST

ನವದೆಹಲಿ: ಮಾರಣಾಂತಿಕ ಕೊರೊನಾ ವೈರಸ್​ನಂತಹ ಝೋನೋಟಿಕ್ ಕಾಯಿಲೆಗಳು ಹೆಚ್ಚುತ್ತಿರುವ ಭಯದ ಹಿನ್ನೆಲೆಯಲ್ಲಿ ಪ್ರಾಣಿ ದಯಾ ಸಂಘಟನೆಯು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರನ್ನು ಆನೆಗಳಿಗೆ ಪ್ರದರ್ಶನ ಮತ್ತು ತರಬೇತಿ ನೀಡುವುದನ್ನು ನಿಷೇಧಿಸುವಂತೆ ಒತ್ತಾಯಿಸಿದೆ.

ಪ್ರಾಣಿ ದಯಾ ಸಂಘ (ಪೆಟಾ) ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಬಾಗಿಲು ಬಡಿದಿದ್ದು, ದೇಶದಲ್ಲಿ ಬಂಧಿತ ಆನೆಗಳು ಎದುರಿಸುತ್ತಿರುವ ಸನ್ನಿಹಿತ ಝೋನೋಟಿಕ್ ಕ್ಷಯರೋಗಕ್ಕೆ ಕಾರಣವಾಗಲಿದೆ. ಇದು ಸಾರ್ವಜನಿಕರ ಆರೋಗ್ಯಕ್ಕೆ ಅಪಾಯ ಉಂಟುಮಾಡಲಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದೆ.

ದೇಶದಲ್ಲಿನ ಆನೆಗಳಿಂದ ಮನುಷ್ಯರಿಗೆ ಕ್ಷಯರೋಗ ಹರಡಬಹುದು ಎಂಬುದು ಪತ್ತೆಯಾಗಿದೆ. ಅನೇಕ ಬಂಧಿತ ಆನೆಗಳು ಕ್ಷಯರೋಗದಿಂದ ಬಳಲುತ್ತವೆ. ಸೆರೆಯಾಳು ಆನೆಗಳನ್ನು ಜೈಪುರದ ಸಮೀಪದ ಅಮೆರ್ ಕೋಟೆಯಲ್ಲಿ ಸವಾರಿ ಮಾಡಲು ಬಳಸಲಾಗುತ್ತಿದೆ. ಸರ್ಕಸ್, ಚಲನಚಿತ್ರ, ಟಿವಿ ಕಾರ್ಯಕ್ರಮಗಳು, ಉತ್ಸವ, ಮೆರವಣಿಗೆಗಳಲ್ಲಿ ಬಳಸಿಕೊಳ್ಳುವುದರಿಂದ ಸಾರ್ವಜನಿಕರು ಅಪಾಯಕ್ಕೆ ಸಿಲುಕಿಸಬಹುದು ಎಂದು ಪೆಟಾ ಹೇಳಿದೆ.

ಎಲ್ಲಾ ಆನೆಗಳನ್ನು ಬಂಧನದಿಂದ ಮುಕ್ತವಾಗಿಸಿ ಪ್ರಕೃತಿದತ್ತವಾದ ಸ್ವತಂತ್ರ ಬದುಕು ಕಲ್ಪಿಸಿಕೊಡುವ ಸಮಯ ಬಂದಿದೆ. ಪ್ರದರ್ಶನಗಳಲ್ಲಿ ಅವುಗಳ ಬಳಕೆ ನಿಷೇಧಿಸಲಾಗಿದೆ. ಈಗಿನ ಪರಿಸ್ಥಿತಿ ಈ ಗುರಿಯತ್ತ ನಮ್ಮನ್ನು ಹತ್ತಿರ ತರುತ್ತಿದೆ. ಕೋವಿಡ್​-19ನಂತಹ ಝೋನೋಟಿಕ್ ರೋಗದ ಅಪಾಯಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಪೆಟಾ ಇಂಡಿಯಾ ಸಿಇಒ ಮತ್ತು ಪಶುವೈದ್ಯ ಡಾ. ಮನಿಲಾಲ್ ವಲ್ಲಿಯೇಟ್ ಮನವಿ ಮಾಡಿದ್ದಾರೆ.

ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ 600 ಆನೆಗಳ ಮೇಲೆ 2012ರಲ್ಲಿ ನಡೆಸಿದ ವೈಜ್ಞಾನಿಕ ಅಧ್ಯಯನದಿಂದ ಸೆರೆಯಲ್ಲಿರುವ ಏಷ್ಯಾನ್​ ಭಾರತೀಯ ಆನೆಗಳಲ್ಲಿ ರೋಗ ಲಕ್ಷಣವಿಲ್ಲದ ಕ್ಷಯ ಸೋಂಕಿನ ಹರಡುವಿಕೆಗೆ ಹೆಚ್ಚಿನ ಪುರಾವೆಗಳಿವೆ ಎಂಬುದು ತಿಳಿದು ಬಂದಿದೆ.

2013ರಲ್ಲಿನ ಮತ್ತೊಂದು ಅಧ್ಯಯನವು ಸೆರೆಯಲ್ಲಿರುವ ಆನೆಗಳ ನಡುವೆ ಎಂ. ಕ್ಷಯರೋಗವನ್ನು ಹರಡುವ ಎರಡು ಸಂಭವನೀಯ ಪ್ರಕರಣಗಳನ್ನು ಕಂಡುಕೊಂಡಿತು. ಮೊದಲನೇಯದು ಮಾನವನಿಂದ ಆನೆಗೆ (ಪ್ರಸರಣ) ಮತ್ತು ಎರಡನೇಯದು ಆನೆಯಿಂದ ಮನುಷ್ಯನಿಗೆ ಹರಡುವ ಪ್ರಕರಣ ಎಂ. ಕ್ಷಯರೋಗ ಎಂದು ಉಲ್ಲೇಖಿಸಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.