ಭುವನೇಶ್ವರ( ಒಡಿಶಾ): ಹೌದು...ನಾವು ನಿಜಾನೆ ಹೇಳ್ತಿರೋದು...ನೀವು 2022ರಳೊಗೆ ದೇಶದ 15 ಸ್ಥಳಗಳಿಗೆ ಭೇಟಿ ನೀಡಿದ್ರೆ, ನಿಮ್ಮ ಪ್ರವಾಸ ಭತ್ಯೆಯನ್ನು ನಿಮಗೆ ಕೊಡುತ್ತೇವೆ ಎಂದು ಕೇಂದ್ರ ಸರಕಾರ ಹೇಳಿದೆ.
ಕೊನಾರ್ಕ್‌ನಲ್ಲಿ ಎಫ್‌ಐಸಿಸಿಐ ಸಹಯೋಗದೊಂದಿಗೆ ಒಡಿಶಾ ಸರ್ಕಾರ ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರೀಯ ಪ್ರವಾಸೋದ್ಯಮ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವರು ಶುಕ್ರವಾರ ಈ ವಿಷಯ ತಿಳಿಸಿದರು.
ಕೇಂದ್ರ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಒಂದು ವರ್ಷದಲ್ಲಿ 15 ದೇಶೀಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರಯಾಣಿಕರಿಗೆ ತಮ್ಮ ಪ್ರಯಾಣ ವೆಚ್ಚವನ್ನು ಪ್ರೋತ್ಸಾಹಕ ಧನವಾಗಿ ನೀಡಲು ಕೇಂದ್ರ ನಿರ್ಧರಿಸಿದೆ ಎಂದು ತಿಳಿಸಿದರು. ಹಾಗೂ ಆ ರೀತಿಯಾಗಿ ಪ್ರಯಾಣಿಸುವವರನ್ನು ಭಾರತೀಯ ಪ್ರವಾಸೋದ್ಯಮದ ಬ್ರ್ಯಾಂಡ್ ರಾಯಭಾರಿಗಳಾಗಿ ಗೌರವಿಸಬೇಕು ಎಂದು ಪಟೇಲ್ ಹೇಳಿದರು.
ಕೊನಾರ್ಕ್‌ನಲ್ಲಿರುವ ಸೂರ್ಯ ದೇವಾಲಯವನ್ನು 'ಸಾಂಪ್ರದಾಯಿಕ ಪ್ರವಾಸೋದ್ಯಮ ತಾಣ'ಗಳ ( ಐಕಾನಿಕ್ ಸೈಟ್ಸ್) ಪಟ್ಟಿಯಲ್ಲಿ ಸೇರಿಸಲಾಗುವುದು ಎಂದು ಸಚಿವರು ಹೇಳಿದರು. ಶೀಘ್ರದಲ್ಲೇ ಇದನ್ನು ಘೋಷಿಸಲು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದರು.
ಇನ್ನು ನೀವೂ ಕೂಡ ಕೇಂದ್ರ ಪ್ರವಾಸೋದ್ಯಮ ಇಲಾಖೆಯ ಹೊಸ ಯೋಜನ ಫಲಾನುಗವಿಗಳಾಗ ಬೇಕಾದ್ರೆ ಇಷ್ಟೇ ಮಾಡಬೇಕಿರೋದು:
- ನಿಮ್ಮ ರಾಜ್ಯವನ್ನು ಹೊರತು ಪಡಿಸಿ, ಇನ್ನುಳಿದ ಯಾವುದೇ ರಾಜ್ಯದ 15 ಪ್ರವಾಸಿ ತಾಣಗಳಿಗೆ ಭೇಟಿ ನೀಡಬೇಕು.
- 2022 ರೊಳಗಾಗಿ ನೀವು 15 ಸ್ಥಳಗಳನ್ನು ಪೂರ್ಣಗೊಳಿಸಬೇಕು.
- ಕೇವಲ ಒಂದು ವರ್ಷದ ಒಳಗೆ ನೀವು ಎಲ್ಲಾ ಪ್ರವಾಸಿ ತಾಣಗಳನ್ನು ಕಂಪ್ಲೀಟ್ ಮಾಡಿದ್ರೆ ಸರಕಾರ ನಿಮಗೆ ಬಹುಮಾನ ಸಹ ನೀಡುತ್ತದೆ.
- ಕೊನೆಯದಾಗಿ ನೀವು ವಿಸಿಟ್ ಮಾಡಿದ ಸ್ಥಳಗಳ ಫೋಟೊಗಳನ್ನು ಕೇಂದ್ರ ಪ್ರವಾಸೋದ್ಯಮ ಇಲಾಖೆ ವೆಬ್‌ಸೈಟ್‌ಗೆ ಮರೆಯದೇ ಅಪ್ಲೋಡ್ ಮಾಡಬೇಕು.