ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ಬಿಕ್ಕಟ್ಟು ಸಂದರ್ಭದಲ್ಲಿ ಆದಾಯ ಕೊರತೆ ಸಮಸ್ಯೆ ಎದುರಿಸುತ್ತಿರುವ 14 ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಟ್ವೀಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಒಟ್ಟು 14 ರಾಜ್ಯಗಳಿಗೆ 6,195.08 ಕೋಟಿ ರೂ. ಅನುದಾನ ರಿಲೀಸ್ ಆಗಿದ್ದು, 15ನೇ ಹಣಕಾಸು ಸಚಿವಾಲಯ ಈ ಕುರಿತು ಶಿಫಾರಸು ಮಾಡಿತ್ತು. ಆದರೆ ಕರ್ನಾಟಕಕ್ಕೆ ಯಾವುದೇ ಅನುದಾನ ರಿಲೀಸ್ ಆಗಿಲ್ಲ.
-
The government on September 10, 2020 released Rs 6,195.08 crore to 14 states as the sixth equated monthly instalment of the Post Devolution Revenue Deficit Grant as recommended by the 15th Finance Commission. This would provide them additional resources during the Corona crisis. pic.twitter.com/18PW6eqgnn
— NSitharamanOffice (@nsitharamanoffc) September 11, 2020 " class="align-text-top noRightClick twitterSection" data="
">The government on September 10, 2020 released Rs 6,195.08 crore to 14 states as the sixth equated monthly instalment of the Post Devolution Revenue Deficit Grant as recommended by the 15th Finance Commission. This would provide them additional resources during the Corona crisis. pic.twitter.com/18PW6eqgnn
— NSitharamanOffice (@nsitharamanoffc) September 11, 2020The government on September 10, 2020 released Rs 6,195.08 crore to 14 states as the sixth equated monthly instalment of the Post Devolution Revenue Deficit Grant as recommended by the 15th Finance Commission. This would provide them additional resources during the Corona crisis. pic.twitter.com/18PW6eqgnn
— NSitharamanOffice (@nsitharamanoffc) September 11, 2020
ಆದಾಯ ಹಂಚಿಕೆ ಕೊರತೆ ಎದುರಿಸುತ್ತಿರುವ ಕಾರಣ ಕೇಂದ್ರ ಸರ್ಕಾರ ವಿಶೇಷ ಅನುದಾನ ನೀಡುವಂತೆ 15ನೇ ಹಣಕಾಸು ಆಯೋಗ ಶಿಫಾರಸು ಮಾಡಿತ್ತು. ಅದರಂತೆ ಕೇಂದ್ರ ಇದೀಗ 6ನೇ ಕಂತು ರಿಲೀಸ್ ಮಾಡಿದೆ.
ಯಾವ ರಾಜ್ಯಕ್ಕೆ ಎಷ್ಟು ಅನುದಾನ?
1. ಆಂಧ್ರಪ್ರದೇಶ - 491.41 ಕೋಟಿ ರೂ.
2. ಅಸ್ಸಾಂ- 631.58 ಕೋಟಿ ರೂ.
3. ಹಿಮಾಚಲ ಪ್ರದೇಶ - 952.58 ಕೋಟಿ ರೂ.
4. ಕೇರಳ- 1276.91 ಕೋಟಿ ರೂ.
5. ಮಣಿಪುರ- 235.33 ಕೋಟಿ ರೂ.
6. ಮೇಘಾಲಯ- 40.91 ಕೋಟಿ ರೂ.
7. ಮಿಜೋರಾಂ- 118.50 ಕೋಟಿ ರೂ.
8. ನಾಗಾಲ್ಯಾಂಡ್- 326.41 ಕೋಟಿ ರೂ.
9. ಪಂಜಾಬ್- 638.25 ಕೋಟಿ ರೂ.
10. ತಮಿಳುನಾಡು- 335.41 ಕೋಟಿ ರೂ.
11. ತ್ರಿಪುರ- 269.66 ಕೋಟಿ ರೂ.
12. ಉತ್ತರಾಖಂಡ- 423.00 ಕೋಟಿ ರೂ.
13. ಪಶ್ಚಿಮ ಬಂಗಾಳ- 417.75 ಕೋಟಿ ರೂ.
14. ಸಿಕ್ಕಿಂ- 37.33 ಕೋಟಿ ರೂ. ಪ್ರಸಕ್ತ ಹಣಕಾಸು ವರ್ಷ ಏಪ್ರಿಲ್-ಆಗಸ್ಟ್ ತಿಂಗಳಲ್ಲಿ ಕೇಂದ್ರ ಸರ್ಕಾರ ಅನುದಾನ ರಿಲೀಸ್ ಮಾಡಿತ್ತು.