ETV Bharat / bharat

''ಕೇಂದ್ರದ ನೀತಿಗಳಿಂದ ಕೋಟ್ಯಂತರ ಉದ್ಯೋಗ ನಷ್ಟ, ಜಿಡಿಪಿಯಲ್ಲಿ ಐತಿಹಾಸಿಕ ಪತನ'' - ಉದ್ಯೋಗಗಳಿಗಾಗಿ ಮಾತನಾಡಿ

ಕೇಂದ್ರ ಸರ್ಕಾರ ಕೋಟ್ಯಂತರ ಮಂದಿಯ ಉದ್ಯೋಗ ಕಸಿದುಕೊಂಡಿದ್ದು, ಇದರಿಂದಾಗಿ ದೇಶದ ಜಿಡಿಪಿಯೂ ಕೂಡ ಕುಸಿದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

Rahul gandhi
ರಾಹುಲ್ ಗಾಂಧಿ
author img

By

Published : Sep 10, 2020, 1:58 PM IST

ನವದೆಹಲಿ: ಕೇಂದ್ರ ಸರ್ಕಾರ ರೂಪಿಸಿದ ನೀತಿಗಳಿಂದಾಗಿ ಕೋಟ್ಯಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿ ವಿಡಿಯೋವೊಂದನ್ನು ಬಿಡುಗಡೆ ಮಾಡಿರುವ ಅವರು ಕಾಂಗ್ರೆಸ್ ಪಕ್ಷ ಯುವಜನರಿಗೆ ಉದ್ಯೋಗ ಒದಗಿಸುವ ಸಲುವಾಗಿ ಆರಂಭಿಸಿರುವ ''ಸ್ಪೀಕ್ ಅಪ್​ ಫಾರ್ ಜಾಬ್ಸ್​'' (ಉದ್ಯೋಗಗಳಿಗಾಗಿ ಮಾತನಾಡಿ) ಅಭಿಯಾನದಲ್ಲಿ ಪಾಲ್ಗೊಳ್ಳಬೇಕೆಂದು ಜನರಲ್ಲಿ ಮನವಿ ಮಾಡಿದ್ದಾರೆ.

  • The policies of Modi Govt have caused the loss of crores of jobs and a historic fall in GDP.

    It has crushed the future of India’s youth. Let’s make the Govt listen to their voice.

    Join #SpeakUpForJobs from 10am onwards. pic.twitter.com/mRUooQ1yjX

    — Rahul Gandhi (@RahulGandhi) September 10, 2020 " class="align-text-top noRightClick twitterSection" data=" ">

ಗುರುವಾರ ಬೆಳಗ್ಗೆ 10 ಗಂಟೆಯಿಂದ 10 ಗಂಟೆಗಳ ಕಾಲ ಸಾಮಾಜಿಕ ಜಾಲತಾಣಗಳಲ್ಲಿ ಈ ಅಭಿಯಾನ ನಡೆಯುತ್ತಿದ್ದು, 'ಮೋದಿ ಸರ್ಕಾರದ ನೀತಿಗಳಿಂದಾಗಿ ಕೋಟ್ಯಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಇದು ಜಿಡಿಪಿ ಕುಸಿತಕ್ಕೆ ಕಾರಣವಾಗಿದೆ. ಇದು ಐತಿಹಾಸಿಕ ಪತನ ಎಂದು ಟ್ವೀಟ್​ನಲ್ಲಿ ಆರೋಪಿಸಿದ್ದಾರೆ.

ಇದರ ಜೊತೆಗೆ ಭಾರತದ ಯುವಜನತೆಯ ಭವಿಷ್ಯವನ್ನು ಸರ್ಕಾರ ಹತ್ತಿಕ್ಕಿದ್ದು, ಯುವಜನತೆಯ ಧ್ವನಿಯನ್ನು ಸರ್ಕಾರ ಕೇಳುವಂತೆ ಮಾಡೋಣ ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

ಕೇಂದ್ರ ಸರ್ಕಾರ ಪ್ರತೀ ವರ್ಷ 2 ಕೋಟಿ ಉದ್ಯೋಗ ನೀಡುವ ಭರವಸೆ ನೀಡಿತ್ತು. ಆರು ವರ್ಷಕ್ಕೆ 12 ಕೋಟಿ ಉದ್ಯೋಗ ನೀಡುವ ಬದಲು 14 ಕೋಟಿ ಉದ್ಯೋಗಗಳನ್ನು ಕಸಿದುಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೆವಾಲಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.