ETV Bharat / bharat

ಡೌನ್‌ಗ್ರೇಡ್ ವಾಹನಗಳ ಮಾರಾಟ ನಿಲ್ಲಿಸಿ: ವಾಹನ ತಯಾರಕರಿಗೆ ಸರ್ಕಾರದ ಸೂಚನೆ - ಕಾರುಗಳ ಮಾರಾಟ

ಉದ್ದೇಶಪೂರ್ವಕವಾಗಿ ಡೌನ್‌ಗ್ರೇಡ್ ಮಾಡಲಾದ ಸುರಕ್ಷತಾ ಮಾನದಂಡಗಳನ್ನು ಹೊಂದಿರದ ವಾಹನಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ವರದಿಗಳ ಬಗ್ಗೆ ಸರ್ಕಾರ ಕಳವಳ ವ್ಯಕ್ತಪಡಿಸಿದೆ.

Govt asks automakers to stop selling vehicles with purposefully downgraded safety standards
ವಾಹನ ತಯಾರಕರಿಗೆ ಸರ್ಕಾರದ ಸೂಚನೆ
author img

By

Published : Feb 9, 2021, 4:44 PM IST

ನವದೆಹಲಿ: ಭಾರತದಲ್ಲಿ ವಾಹನ ತಯಾರಕರು ಉದ್ದೇಶ ಪೂರ್ವಕವಾಗಿ ಡೌನ್‌ಗ್ರೇಡ್ ಮಾಡಲಾದ ವಾಹನಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ವರದಿಗಳ ಬಗ್ಗೆ ಸರ್ಕಾರ ಕಳವಳ ವ್ಯಕ್ತಪಡಿಸಿದೆ. ಹಾಗೆ ಇದೊಂದು ಕ್ಷಮಿಸಲಾಗದ ಕ್ರಮವಾಗಿದ್ದು,ಈ ಅಭ್ಯಾಸವನ್ನು ನಿಲ್ಲಿಸುವಂತೆ ಕೇಳಿ ಕೊಂಡಿದೆ.

ರಸ್ತೆಯ ಸುರಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ವಾಹನಗಳ ಸ್ಥಳ ಟ್ರ್ಯಾಕಿಂಗ್ ಸಾಧನಗಳ ಅನುಷ್ಠಾನ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ಈ ಬಗ್ಗೆ ಚರ್ಚಿಸಲಾಯಿತು. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ (MoRTH) ಕಾರ್ಯದರ್ಶಿ ಗಿರಿಧರ್ ಅರಮನೆ ಮಾತನಾಡಿ, ಕೆಲವು ತಯಾರಕರು ಸುರಕ್ಷತಾ ರೇಟಿಂಗ್ ವ್ಯವಸ್ಥೆ ಅಳವಡಿಸಿಕೊಂಡಿದ್ದಾರೆ. ಅವನ್ನು ಅವರ ಉನ್ನತ-ಮಟ್ಟದ ಮಾದರಿಗಳಿಗೆ ಮಾತ್ರ ಬಳಸಲಾಗುತ್ತದೆ ಎಂದಿದ್ದಾರೆ.

ಸುರಕ್ಷತಾ ಮಾನದಂಡಗಳ ಆಧಾರದ ಮೇಲೆ ಭಾರತೀಯ ಮಾದರಿಗಳನ್ನು ಉದ್ದೇಶಪೂರ್ವಕವಾಗಿ ಡೌನ್‌ಗ್ರೇಡ್ ಮಾಡಲಾಗಿದೆ ಎಂಬ ಕೆಲವು ಸುದ್ದಿ ವಿಷಯಗಳಿಂದ ನಾನು ತೀವ್ರ ಕಳವಳಕ್ಕೆ ಒಳಗಾಗಿದ್ದೇನೆ. ಈ ಅಭ್ಯಾಸವನ್ನು ನಿಲ್ಲಿಸಬೇಕಾಗಿದೆ ಎಂದು ಹೇಳಿದರು.

ರಸ್ತೆ ಸುರಕ್ಷತೆಯಲ್ಲಿ ವಾಹನ ತಯಾರಕರು ಅತ್ಯಂತ ಮಹತ್ವದ ಪಾತ್ರ ವಹಿಸುತ್ತಾರೆ ಎಂದು ಹೇಳಿರುವ ಅರಮನೆ, ಭಾರತದಲ್ಲಿ ಉತ್ತಮ ಗುಣಮಟ್ಟದ ವಾಹನವನ್ನು ನೀಡುವಲ್ಲಿ ತಯಾರಕರು ಯಾವುದೇ ಪ್ರಯತ್ನಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಕೆಲವೇ ತಯಾರಕರು ತಮ್ಮ ಉನ್ನತ ಮಟ್ಟದ ಮಾದರಿಗಳಿಗೆ ಬಳಸುತ್ತಿರುವ ಸುರಕ್ಷತಾ ರೇಟಿಂಗ್ ವ್ಯವಸ್ಥೆಯನ್ನು ಕೆಲವಷ್ಟೇ ಜನರು ಅಳವಡಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಎಲ್ಲ ವಾಹನ ತಯಾರಕರು ತಮ್ಮ ಎಲ್ಲ ವಾಹನಗಳಿಗೆ ಸುರಕ್ಷತಾ ರೇಟಿಂಗ್ ಪಡೆಯುವುದು ಅತ್ಯಗತ್ಯ. ಗ್ರಾಹಕರು ತಾವು ಏನನ್ನು ಖರೀದಿಸುತ್ತಿದ್ದೇವೆ ಮತ್ತು ಅದರ ಪರಿಣಾಮಗಳೇನು ಎಂಬುದರ ಬಗ್ಗೆ ತಿಳಿಯುವುದಕ್ಕೆ ಇದು ಇದು ಸಹಾಯಕಾರಿ ಎಂದರು.

ಕಳೆದ ಕೆಲವು ವರ್ಷಗಳಿಂದ ವಾಹನ ಸುರಕ್ಷತಾ ಗ್ರೂಪ್​​ ಗ್ಲೋಬಲ್ ಎನ್‌ಸಿಎಪಿ ವಿವಿಧ ಪರೀಕ್ಷೆಗಳನ್ನು ನಡೆಸಿ ಕೆಲವು ಅಂಶಳನ್ನು ಕಂಡು ಹಿಡಿದಿದೆ. ಭಾರತದಲ್ಲಿ ಮಾರಾಟವಾದ ಕೆಲವು ಮಾದರಿಗಳು ರಪ್ತಾಗುವ ಮಾದರಿಗಳಿಗೆ ಹೋಲಿಕೆ ಮಾಡಿದರೆ ಕೆಳಮಟ್ಟದ ಸುರಕ್ಷತಾ ರೇಟಿಂಗ್‌ಗಳನ್ನು ಹೊಂದಿರುವುದು ಇದರಿಂದ ತಿಳಿದು ಬಂದಿದೆ.

ಯುಎಸ್ ಮತ್ತು ಭಾರತದ ಉದಾಹರಣೆ ಉಲ್ಲೇಖಿಸಿದ ಅವರು, 2018 ರಲ್ಲಿನ ಅಂಕಿ ಅಂಶದ ಪ್ರಕಾರ ಯುಎಸ್​ನಲ್ಲಿ ನಡೆದ ಸುಮಾರು 45 ಲಕ್ಷ ಅಪಘಾತಗಳಲ್ಲಿ 36,560 ಮಂದಿ ಸಾವಿಗೀಡಾಗಿದ್ದಾರೆ. ಆದರೆ,ಭಾರತದಲ್ಲಿ ಕೇವಲ 4.5 ಲಕ್ಷ ರಸ್ತೆ ಅಪಘಾತಗಳಲ್ಲಿ 1.5 ಲಕ್ಷ ಜನರು ಸಾವಿಗೀಡಾಗಿದ್ದಾರೆ. ಅಪಘಾತಗಳು ಹತ್ತು ಪಟ್ಟು ಕಡಿಮೆಯಾದರು ಕೂಡ ಭಾರತದಲ್ಲಿ ಸಾವಿನ ಸಂಖ್ಯೆ ಐದು ಪಟ್ಟು ಹೆಚ್ಚಾಗಿದೆ. ಮತ್ತು ಭಾರತದಲ್ಲಿ ನಿಧಾನಗತಿಯ ಕಾರುಗಳು ಮತ್ತು ನಿಧಾನಗತಿಯ ರಸ್ತೆಗಳಿದ್ದರೂ ಈ ಸಾವು ಸಂಭವಿಸುತ್ತವೆ ಎಂದು ಮಾಹಿತಿ ನೀಡಿದರು.

ಸುರಕ್ಷತೆಯ ವ್ಯವಸ್ಥೆ ಇದ್ದರೆ ಪೇಟೆಂಟ್‌ಗಳನ್ನು ಹಂಚಿಕೊಳ್ಳಲು ವಾಹನ ತಯಾರಕರನ್ನು ಕೇಳಿಕೊಂಡ ಅವರು, ಸ್ವೀಡಿಷ್ ಇಂಜಿನಿಯರ್ ನಿಲ್ಸ್ ಬೋಲಿನ್ ಕಂಡುಹಿಡಿದ ಮೂರು-ಪಾಯಿಂಟ್ ಸೀಟ್ ಬೆಲ್ಟ್​​ನ ನಿಯಮವನ್ನು ಉದಾಹರಣೆಯಾಗಿ ನೀಡಿದರು. ಹಾಗೆ ಈ ರೀತಿಯ ತಾಂತ್ರಿಕ ಕ್ರಮಗಳು ಭಾರತದ ರಸ್ತೆಗಳಲ್ಲಿ ಹೆಚ್ಚಿನ ವಾಹನ ಸುರಕ್ಷತೆ ಮತ್ತು ಸಾವುಗಳ ಸಂಖ್ಯೆ ಕಡಿಮೆ ಮಾಡುವಲ್ಲಿ ಸಹಾಯಕಾರಿ ಎಂದು ಅವರು ವಿವರಿಸಿದರು.

ಅಪಘಾತದ ಸಂದರ್ಭದಲ್ಲಿ ಪ್ರತಿಕ್ರಿಯಿಸುವ ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್ ಮತ್ತು ಸೀಟ್ ಬೆಲ್ಟ್‌ಗಳಂತಹ ಕೆಲವು ಸಕ್ರಿಯ ಸುರಕ್ಷತಾ ವ್ಯವಸ್ಥೆಗಳನ್ನು ಭಾರತದಲ್ಲಿ ಜಾರಿಗೆ ತರಲಾಗಿದೆ. ಆದರೆ, ಇದರಲ್ಲಿ ಸ್ವಲ್ಪ ಅಂತರವಿದೆ. ಭಾರತ ಇವೆಲ್ಲವನ್ನೂ ಸಂಪೂರ್ಣವಾಗಿ ಕಾರ್ಯಗತಗೊಳಿಸಬೇಕಾಗಿದೆ ಎಂದರು.

ರಸ್ತೆ ಸುರಕ್ಷತೆಯನ್ನು ಸುಧಾರಿಸಲು ಮತ್ತು ಸಾವುನೋವುಗಳನ್ನು ಕಡಿಮೆ ಮಾಡಲು ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಪ್ರತಿಕ್ರಿಯಿಸಿದ ಅವರು, ಅಪಘಾತಕ್ಕೊಳಗಾದವರಿಗೆ ತುರ್ತು ಆರೈಕೆ ಮತ್ತು ನಗದು ರಹಿತ ಚಿಕಿತ್ಸೆಯ ಯೋಜನೆಯನ್ನು ಜಾರಿಗೆ ತರಲು ಯೋಜನೆ ಪ್ರಕ್ರಿಯೆಯಲ್ಲಿದೆ. ಇದರಲ್ಲಿ ವಾಹನ ಸ್ಥಳ ಟ್ರ್ಯಾಕಿಂಗ್ (ವಿಎಲ್‌ಟಿ) ಒಂದು ಅವಿಭಾಜ್ಯ ಅಂಗವಾಗಲಿದೆ ಎಂದು ಹೇಳಿದರು.

ಸಿಸಿಟಿವಿ ಕ್ಯಾಮೆರಾ ಹೊಂದಿರುವ ವಿಎಲ್‌ಟಿ ವ್ಯವಸ್ಥೆಯನ್ನು ಈಗಾಗಲೇ ವಿಮಾ ಕಂಪನಿಗಳು ಬಳಸುತ್ತಿವೆ. ಹಾಗೆಯೇ ವಾಹನ ತಯಾರಕರು ಸಹ ವಾಹನ ವ್ಯವಸ್ಥೆಗಳಲ್ಲಿ ತುರ್ತು ಆರೈಕೆಯನ್ನು ಸಹ ನೀಡಬಹುದು. ನಾವು ಈಗಾಗಲೇ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ದತ್ತಾಂಶ ಕೇಂದ್ರಗಳನ್ನು ಸ್ಥಾಪಿಸಲು ಕಡ್ಡಾಯಗೊಳಿಸಿದ್ದೇವೆ. ಇದರಿಂದ ಸಂದೇಶಗಳನ್ನು ನಿಯಂತ್ರಣ ಕೇಂದ್ರಗಳಲ್ಲಿ ಸ್ವೀಕರಿಸಲು ಮತ್ತು ತುರ್ತು ಆರೈಕೆಯನ್ನು ವಾಹನದ ಸ್ಥಳಕ್ಕೆ ರವಾನಿಸಬಹುದು ಎಂದು ವಿವರಿಸಿದರು.

ಇದಲ್ಲದೆ, ಜಿಪಿಎಸ್ ಆಧಾರಿತ ಟೋಲಿಂಗ್ ವ್ಯವಸ್ಥೆಯನ್ನು ಮಾಡಲು ಕೇಂದ್ರವು ಆಲೋಚಿಸುತ್ತಿದೆ. ಇದರಿಂದ ದೇಶದ ಎಲ್ಲಾ ವಾಹನಗಳಿಗೆ ಸಾಧನಗಳನ್ನು ಅಳವಡಿಸಬೇಕಿರುತ್ತದೆ. ಜಿಪಿಎಸ್ ಆಧಾರಿತ ಹೊಸ ವ್ಯವಸ್ಥೆಯು ಪ್ರಯಾಣಿಕರ ಟೋಲ್ ಶುಲ್ಕವನ್ನು ಕಡಿಮೆ ಮಾಡುತ್ತವೆ. ಮತ್ತು ಲೋಪದೋಷವನ್ನು ಖಚಿತಪಡಿಸುತ್ತದೆ. ಇದು ಸರ್ಕಾರದ ವೆಚ್ಚ ಮತ್ತು ಪ್ರಯಾಣಿಕರಿಂದ ಆಗುವ ವೆಚ್ಚವನ್ನು ಕಡಿಮೆ ಮಾಡುತ್ತದೆ ಎಂದು ತಿಳಿಸಿದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.