ನವದೆಹಲಿ: ಕೇಂದ್ರ ಸರ್ಕಾರವು ಚೀನಾ ವಿರುದ್ಧ ದುರ್ಬಲ ಕಾರ್ಯತಂತ್ರವನ್ನು ಅನುಸರಿಸುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
ಚೀನಾದ ಸಂಸ್ಥೆಗೆ ರೈಲ್ವೆ ಒಪ್ಪಂದವನ್ನು ಹಸ್ತಾಂತರಿಸುವ ಮೂಲಕ ಚೀನಾದ ಮುಂದೆ ಮಂಡಿಯೂರಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ. ಕೇಂದ್ರವು ಚೀನಾಗೆ ತಕ್ಕ ಉತ್ತರ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ನಮ್ಮ 20 ಸೈನಿಕರು ಹುತಾತ್ಮರಾಗಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಕೇಂದ್ರ ಸರ್ಕಾರವು ಬಲವಾದ ಸಂದೇಶವನ್ನು ನೀಡಬೇಕು. ಆದರೆ ದೆಹಲಿ-ಮೀರತ್ ಸೆಮಿ ಹೈಸ್ಪೀಡ್ ರೈಲ್ವೆ ಕಾರಿಡಾರ್ ಒಪ್ಪಂದವನ್ನು ಚೀನಾದ ಕಂಪೆನಿಗೆ ಹಸ್ತಾಂತರಿಸುವ ಮೂಲಕ ಕೇಂದ್ರ ಚೀನಾದ ಎದುರು ಮಂಡಿಯೂರಿ ದುರ್ಬಲ ತಂತ್ರ ಅನುಸರಿಸುತ್ತಿದೆ. ಈ ಕಾರಿಡಾರ್ ನಿರ್ಮಿಸಲು ಎಲ್ಲಾ ಭಾರತೀಯ ಕಂಪನಿಗಳು ಸಹ ಸಮರ್ಥವಾಗಿವೆ "ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ದೆಹಲಿ-ಮೀರತ್ ಹೈಸ್ಪೀಡ್ ರೈಲಿಗಾಗಿ ಚೀನಾದ ಕಂಪನಿಯೊಂದು 1,126 ಕೋಟಿ ರೂ.ಗಳ ಗುತ್ತಿಗೆ ಪಡೆದಿದೆ ಎಂದು ಅವರು ಮಾಧ್ಯಮ ವರದಿಯನ್ನು ಹಂಚಿಕೊಂಡಿದ್ದಾರೆ.