ETV Bharat / bharat

ವಾಯುಸೇನೆಯ ದೈತ್ಯ ಶಕ್ತಿ 'ರಫೆಲ್​​' ಖರೀದಿ ಡಬಲ್; ಪಾಕ್​ ಜತೆಗೆ ಚೀನಾಗೂ ನಡುಕ

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಕ್ಟೋಬರ್​ ಮೊದಲ ವಾರದಲ್ಲಿ ಫ್ರಾನ್ಸ್ ಪ್ರವಾಸ ಕೈಗೊಳ್ಳಲಿದ್ದು ಇದೇ ವೇಳೆ ಮೊದಲ ಹಂತದ ರಫೇಲ್ ಯುದ್ಧವಿಮಾನವನ್ನು ಫ್ರಾನ್ಸ್ ಸರ್ಕಾರ ಭಾರತಕ್ಕೆ ಅಧಿಕೃತವಾಗಿ ಹಸ್ತಾಂತರ ಮಾಡಲಿದೆ.

author img

By

Published : Sep 22, 2019, 7:21 PM IST

Updated : Sep 22, 2019, 7:30 PM IST

ರಫೇಲ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಪ್ರಥಮ ಅವಧಿಯಲ್ಲಿ ಬಹು ವಿವಾದಿತವಾಗಿ ಕೂಡಿದ್ದ ಅತ್ಯಾಧುನಿಕ ತಂತ್ರಜ್ಞಾನದ ರಫೆಲ್​ ಯುದ್ಧ ವಿಮಾನ ಖರೀದಿಯ ಒಪ್ಪಂದ ಸುಖಾಂತ್ಯ ಕಂಡು ಪ್ರಾಥಮಿಕ ಹಂತದ ಫೈಟರ್​ ಜೆಟ್​ಗಳು ಬಂದಿದ್ದು, ಸರ್ಕಾರ ಈಗ ಮತ್ತೊಂದು ಸುತ್ತಿನ ಒಪ್ಪಂದವನ್ನು ಫ್ರಾನ್ಸ್​ ಸರ್ಕಾರದೊಂದಿಗೆ ಮಾಡಿಕೊಳ್ಳಲು ಮುಂದಾಗಿದೆ.

ಮಾಧ್ಯಮಗಳ ವರದಿಯ ಪ್ರಕಾರ, ಮೋದಿ ಸರ್ಕಾರವು ಈಗಿನ 36 ರಫೆಲ್​ಗಳ ಖರೀದಿಯ ಜೊತೆಗೆ ಮತ್ತೆ 36 ಫೈಟರ್​ ಜೆಟ್​ಗಳನ್ನು ಕೊಳ್ಳುವ ಒಪ್ಪಂದವನ್ನು ಅಂತಿಮಗೊಳಿಸಿದೆ ಎಂದು ಹೇಳುತ್ತಿವೆ.

ಇತ್ತೀಚೆಗೆ ಫ್ರಾನ್ಸ್‌ ತನ್ನ ಮೊದಲ ರಫೆಲ್ ವಿಮಾನಗಳನ್ನು ಅಕ್ಟೋಬರ್ 8ರಂದು ಭಾರತೀಯ ವಾಯುಪಡೆಗೆ ಹಸ್ತಾಂತರಿಸಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಫ್ರಾನ್ಸ್‌ಗೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ನೂತನ ಒಪ್ಪಂದ ಏರ್ಪಡುವ ಸಾಧ್ಯತೆ ಇದೆ.
ಮತ್ತೊಂದು ಸುತ್ತಿನ ರಫೆಲ್ ಫೈಟರ್ ಜೆಟ್‌ಗಳನ್ನು ಖರೀದಿಸಿ ಅವುಗಳ ಸಂಖ್ಯೆಯನ್ನು 72ಕ್ಕೆ ಕೊಂಡೊಯ್ಯಲಿದ್ದು,ದೇಶದ ವಾಯುಶಕ್ತಿಯ ಬಲ ಹೆಚ್ಚಿಸಲಿದೆ. ಬಾಲಾ​ಕೋಟ್ ಮೇಲಿನ ವಾಯುದಾಳಿ ನಂತರ ಗಡಿಯಲ್ಲಿ ಭಯೋತ್ಪಾದಕ ಕೃತ್ಯಗಳು ಹೆಚ್ಚಾಗುತ್ತಿವೆ. ನೆರೆಯ ಪಾಕ್​ ಮತ್ತು ಚೀನಾಕ್ಕೆ ಪ್ರಬಲವಾದ ತೀರುಗೇಟು ನೀಡಲು ಕೂಡಾ ಈ ಯುದ್ದವಿಮಾನ ಖರೀದಿ ಸಹಾಯಕವಾಗಲಿದೆ.

2016ರ ಒಪ್ಪಂದದ ಪ್ರಕಾರ, 36 ರಫೆಲ್ ಯುದ್ಧವಿಮಾನವನ್ನು ಫ್ರಾನ್ಸ್ ಹಸ್ತಾಂತರಿಸಬೇಕಿದೆ. ಇದೀಗ ಮತ್ತೊಂದು ಒಪ್ಪಂದದಲ್ಲಿ ಅಷ್ಟೇ ಸಂಖ್ಯೆಯ ಯುದ್ಧವಿಮಾನಗಳನ್ನು ಭಾರತ, ಫ್ರಾನ್ಸ್​ನಿಂದ ಆಮದು ಮಾಡಿಕೊಳ್ಳಲಿದೆ. 2020ರಲ್ಲಿ ಒಪ್ಪಂದ ಅಧಿಕೃತಗೊಳ್ಳಲಿದೆ ಎಂದು ತಿಳಿದು ಬಂದಿದೆ. ಈ ಮೂಲಕ ಭಾರತ ಮುಂದಿನ ಕೆಲ ವರ್ಷಗಳಲ್ಲಿ 72 ಯುದ್ಧವಿಮಾನವನ್ನು ಭಾರತದ ರಕ್ಷಣಾ ಇಲಾಖೆಗೆ ಸೇರ್ಪಡೆ ಮಾಡಲಿದೆ.

2016ರ ಸೆಪ್ಟೆಂಬರ್​ 23ರಂದು ಭಾರತ ಸರ್ಕಾರ ಫ್ರಾನ್ಸ್ ಜೊತೆ ರಫೆಲ್ ಯುದ್ಧ ವಿಮಾನ ಆಮದು ಮಾಡಿಕೊಳ್ಳುವ ಬಗ್ಗೆ ಒಪ್ಪಂದ ಮಾಡಿಕೊಂಡಿತ್ತು. 59,000 ಕೋಟಿ ರೂ ಮೌಲ್ಯದ ಈ ಒಪ್ಪಂದ ಲೋಕಸಭಾ ಚುನಾವಣೆ ವೇಳೆ ರಾಜಕೀಯ ಸ್ವರೂಪ ಪಡೆದುಕೊಂಡು ಭಾರಿ ವಿವಾದಕ್ಕೆ ಕಾರಣವಾಗಿತ್ತು.

ರಫೆಲ್​ ಒಪ್ಪಂದದ ಮಹತ್ವ ಏನು..?

ಭಾರತೀಯ ವಾಯುಸೇನೆಯಲ್ಲಿ ಯುದ್ಧ ವಿಮಾನಗಳ ಸಂಖ್ಯೆ ತೀವ್ರವಾಗಿ ಇಳಿಮುಖವಾಗಿದ್ದನ್ನು ಪರಿಗಣಿಸಿ ಕೇಂದ್ರ ಸರ್ಕಾರ 36 ರಫೆಲ್ ಯುದ್ಧ ವಿಮಾನ ಖರೀದಿಗೆ ಫ್ರಾನ್ಸ್ ಜೊತೆಗೆ 2016ರಲ್ಲಿ ಒಪ್ಪಂದ ಮಾಡಿಕೊಂಡಿತ್ತು.

ಚೀನಾ ಹಾಗೂ ಪಾಕಿಸ್ತಾನ ಜೊತೆಗೆ ಯುದ್ಧಕ್ಕಿಳಿದರೆ 42ಕ್ಕೂ ಅಧಿಕ ಯುದ್ಧ ವಿಮಾನಗಳ ಅಗತ್ಯ ಭಾರತಕ್ಕಿದ್ದು, ಪ್ರಸ್ತುತ ಭಾರತೀಯ ವಾಯುಸೇನೆಯಲ್ಲಿರುವ ಯುದ್ಧ ವಿಮಾನಗಳ ಸಂಖ್ಯೆ 31. ಜೊತೆಗೆ ಭಾರತ ಖರೀದಿ ಮಾಡುತ್ತಿರುವ ರಫೆಲ್ ಯುದ್ಧ ವಿಮಾನ ಅತ್ಯಾಧುನಿಕವಾಗಿದ್ದು, ಸೇನೆ ಬಲ ತುಂಬಲಿದೆ.

Intro:Body:

ಭಾರತೀಯ ವಾಯುಸೇನೆ ಬಲವರ್ಧನೆಗೆ ಮೋದಿ ಆಸಕ್ತಿ... ಮತ್ತೆ 36 ರಫೇಲ್​ ಜೆಟ್​ ಒಪ್ಪಂದಕ್ಕೆ ಸಿದ್ಧತೆ

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಭಾರಿ ಸುದ್ದಿಯಾಗಿದ್ದ ರಫೇಲ್ ಯುದ್ಧವಿಮಾನ ಖರೀದಿ ಮುಂದಿನ ತಿಂಗಳ 8ರಂದು ನಡೆಯುವ ಬೆನ್ನಲ್ಲೇ ಇನ್ನು 36 ರಫೇಲ್​ ವಿಮಾನ ಖರೀದಿಗೆ ಅಂಕಿತ ಹಾಕಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಕ್ಟೋಬರ್​ ಮೊದಲ ವಾರದಲ್ಲಿ ಫ್ರಾನ್ಸ್ ಪ್ರವಾಸ ಕೈಗೊಳ್ಳಲಿದ್ದು ಇದೇ ವೇಳೆ ಮೊದಲ ಹಂತದ ರಫೇಲ್ ಯುದ್ಧವಿಮಾನವನ್ನು ಫ್ರಾನ್ಸ್ ಸರ್ಕಾರ ಭಾರತಕ್ಕೆ ಅಧಿಕೃತವಾಗಿ ಹಸ್ತಾಂತರ ಮಾಡಲಿದೆ.

2016ರ ಒಪ್ಪಂದದ ಪ್ರಕಾರ 36 ರಫೇಲ್ ಯುದ್ಧವಿಮಾನವನ್ನು ಫ್ರಾನ್ಸ್ ಹಸ್ತಾಂತರಿಸಲಿದೆ. ಇದೀಗ ಮತ್ತೊಂದು ಒಪ್ಪಂದದಲ್ಲಿ ಅಷ್ಟೇ ಸಂಖ್ಯೆ ಯುದ್ಧವಿಮಾನವನ್ನು ಭಾರತ ಫ್ರಾನ್ಸ್​ದಿಂದ ಆಮದು ಮಾಡಿಕೊಳ್ಳಲಿದೆ. 2020ರಲ್ಲಿ ಒಪ್ಪಂದ ಅಧಿಕೃತಗೊಳ್ಳಲಿದೆ ಎಂದು ತಿಳಿದು ಬಂದಿದೆ. ಈ ಮೂಲಕ ಭಾರತ ಮುಂದಿನ ಕೆಲ ವರ್ಷಗಳಲ್ಲಿ 72 ರಫೇಲ್​ ಯುದ್ಧವಿಮಾನವನ್ನು ಭಾರತದ ರಕ್ಷಣಾ ಇಲಾಖೆಗೆ ಸೇರ್ಪಡೆ ಮಾಡಲಿದೆ.

2016ರ ಸೆಪ್ಟೆಂಬರ್​ 23ರಂದು ಭಾರತ ಸರ್ಕಾರ ಫ್ರಾನ್ಸ್ ಜೊತೆ ರಫೇಲ್ ಯುದ್ಧ ವಿಮಾನ ಆಮದು ಮಾಡಿಕೊಳ್ಳುವ ಬಗ್ಗೆ ಒಪ್ಪಂದ ಮಾಡಿಕೊಂಡಿತ್ತು. 59,000 ಕೋಟಿಯ ಈ ಒಪ್ಪಂದ ಲೋಕಸಭಾ ಚುನಾವಣೆ ವೇಳೆ ರಾಜಕೀಯ ಸ್ವರೂಪ ಪಡೆದುಕೊಂಡಿತ್ತು.

ರಫೇಲ್​ ಒಪ್ಪಂದದ ಮಹತ್ವ ಏನು..? 

ಭಾರತೀಯ ವಾಯುಸೇನೆಯಲ್ಲಿ ಯುದ್ಧ ವಿಮಾನಗಳ ಸಂಖ್ಯೆ ತೀವ್ರವಾಗಿ ಇಳಿಮುಖವಾಗಿದ್ದನ್ನು ಪರಿಗಣಿಸಿ ಕೇಂದ್ರ ಸರ್ಕಾರ 36 ರಫೇಲ್ ಯುದ್ಧ ವಿಮಾನ ಖರೀದಿಗೆ ಫ್ರಾನ್ಸ್ ಜೊತೆಗೆ 2016ರಲ್ಲಿ ಒಪ್ಪಂದ ಮಾಡಿಕೊಂಡಿತ್ತು.

ಚೀನಾ ಹಾಗೂ ಪಾಕಿಸ್ತಾನ ಜೊತೆಗೆ ಯುದ್ಧಕ್ಕಿಳಿದರೆ 42ಕ್ಕೂ ಅಧಿಕ ಯುದ್ಧ ವಿಮಾನಗಳ ಅಗತ್ಯ ಭಾರತಕ್ಕಿದ್ದು, ಪ್ರಸ್ತುತ ಭಾರತೀಯ ವಾಯುಸೇನೆಯಲ್ಲಿರುವ ಯುದ್ಧ ವಿಮಾನಗಳ ಸಂಖ್ಯೆ 31. ಜೊತೆಗೆ ಭಾರತ ಖರೀದಿ ಮಾಡುತ್ತಿರುವ ರಫೇಲ್ ಯುದ್ಧ ವಿಮಾನ ಅತ್ಯಾಧುನಿಕವಾಗಿದ್ದು, ಸೇನೆ ಬಲ ತುಂಬಲಿದೆ.

Conclusion:
Last Updated : Sep 22, 2019, 7:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.