ETV Bharat / bharat

ರೈಲ್ವೆ ನಿಲ್ದಾಣಗಳಲ್ಲಿನ ಉಚಿತ ವೈಫೈ ಸೇವೆ ಸ್ಥಗಿತಕ್ಕೆ ಮುಂದಾದ ಗೂಗಲ್... ಕಾರಣ? - ಉಚಿತ ವೈಫೈ ಸೇ

ರೈಲ್ವೆ ನಿಲ್ದಾಣಗಳಲ್ಲಿ ನೀಡುತ್ತಿದ್ದ ಉಚಿತ ವೈಫೈ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ಗೂಗಲ್ ಸಂಸ್ಥೆ ಘೋಷಿಸಿದೆ. 0 ಕೈಗೆಟುಕುವ ಮೊಬೈಲ್ ಡೇಟಾ ಯೋಜನೆಗಳು ಮತ್ತು ಮೊಬೈಲ್ ಸಂಪರ್ಕವನ್ನು ಗಮನದಲ್ಲಿಟ್ಟುಕೊಂಡು ಉಚಿತ ವೈಫೈ ಸೇವೆಯನ್ನು ಕೊನೆಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಗೂಗಲ್ ಸ್ಪಷ್ಟಪಡಿಸಿದೆ.

ಉಚಿತ ವೈಫೈ ಸೇವೆ ಸ್ಥಗಿತಗೊಳಿಸಲು ಮುಂದಾದ ಗೂಗಲ್

author img

By

Published : Feb 17, 2020, 8:39 PM IST

ನವದೆಹಲಿ: ದೇಶದ 400ರಷ್ಟು ರೈಲ್ವೆ ನಿಲ್ದಾಣಗಳಲ್ಲಿ ನೀಡುತ್ತಿದ್ದ ಉಚಿತ ವೈಫೈ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ಗೂಗಲ್ ಸಂಸ್ಥೆ ಘೋಷಿಸಿದೆ. ಆದ್ರೆ ರೈಲ್ವೆ ಇಲಾಖೆಯ ಇತರೆ ಸೇವೆಗಳಿಗೆ ಸಹಕಾರ ನೀಡುವುದಾಗಿ ತಿಳಿಸಿದೆ.

2015ರಲ್ಲಿ ಗೂಗಲ್ ಈ ಸೇವೆಯನ್ನು ಪ್ರಾರಂಭಿಸಿ, ಈ ಮೂಲಕ ದೇಶದ ಅತ್ಯಂತ ಜನಿಬಿಡ 400 ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈಫೈ ಸೇವೆ ನೀಡುತ್ತಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಗೂಗಲ್ ಸಂಸ್ಥೆಯ ಪೇಮೆಂಟ್​ ಮತ್ತು ನೆಕ್ಸ್ಟ್​ ಬಿಲಿಯನ್ ಯೂಸರ್ಸ್​ ವಿಭಾಗದ ಉಪಾಧ್ಯಕ್ಷ ಸೀಸರ್ ಸೆನ್‌ಗುಪ್ತಾ, "ನಾವು ಜೂನ್ 2018 ರ ಹೊತ್ತಿಗೆ ನಮ್ಮ ಗುರಿಯನ್ನು ದಾಟಿದ್ದೇವೆ. ಅಲ್ಲದೆ ದೂರಸಂಪರ್ಕ ಕಂಪನಿಗಳು, ಐಎಸ್​ಪಿಗಳು ಮತ್ತು ಸ್ಥಳೀಯ ಅಧಿಕಾರಿಗಳ ಸಹಭಾಗಿತ್ವದಲ್ಲಿ ದೇಶದ ಇತರ ಸಾವಿರಾರು ನಿಲ್ದಾಣಗಳಲ್ಲಿ ಈ ಯೋಜನೆ ಜಾರಿಗೆ ತಂದಿದ್ದೇವೆ ಎಂದು ತಿಳಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಲಕ್ಷಾಂತರ ಬಳಕೆದಾರರಿಗೆ ಸೇವೆ ಸಲ್ಲಿಸಲು ಸಹಾಯ ಮಾಡಿದ ಭಾರತೀಯ ರೈಲ್ವೆ ಮತ್ತು ಭಾರತ ಸರ್ಕಾರದೊಂದಿಗಿನ ಈ ವಿಶೇಷ ಸಹಭಾಗಿತ್ವಕ್ಕೆ ನಾವು ಕೃತಜ್ಞರಾಗಿದ್ದೇವೆ ಎಂದು ಸೀಸರ್ ಸೆನ್‌ಗುಪ್ತಾ ಹೇಳಿದ್ದಾರೆ.

ಭಾರತವನ್ನು ಒಳಗೊಂಡಂತೆ ಜಾಗತಿಕವಾಗಿ ಸುಧಾರಿಸುತ್ತಿರುವ ಕೈಗೆಟುಕುವ ಮೊಬೈಲ್ ಡೇಟಾ ಯೋಜನೆಗಳು ಮತ್ತು ಮೊಬೈಲ್ ಸಂಪರ್ಕವನ್ನು ಗಮನದಲ್ಲಿಟ್ಟುಕೊಂಡು ಉಚಿತ ವೈಫೈ ಸೇವೆಯನ್ನು ಕೊನೆಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಗೂಗಲ್ ಸ್ಪಷ್ಟಪಡಿಸಿದೆ. ಸದ್ಯ ಭಾರತ ಅಗ್ಗದ ಮೊಬೈಲ್ ಡೇಟಾವನ್ನು ಹೊಂದಿದೆ. ಕಳೆದ 5 ವರ್ಷಗಳಲ್ಲಿ ಮೊಬೈಲ್ ಡೇಟಾ ಬೆಲೆಗಳು ಶೇಕಡಾ 95 ರಷ್ಟು ಕಡಿಮೆಯಾಗಿದೆ ಎಂದು 2019ರಲ್ಲಿ ಟ್ರಾಯ್​ (ಟಿಆರ್​ಎಐ) ಹೇಳಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.