ನವದೆಹಲಿ: ಬ್ಯಾಂಕಿಂಗ್ ಆ್ಯಪ್ಗಳು ಗ್ರಾಹಕರನ್ನು ಮತ್ತಷ್ಟು ಹತ್ತಿರವಾಗಿಸಿಕೊಳ್ಳಲು ನೂತನ ವೈಶಿಷ್ಟ್ಯಗಳನ್ನು ಆಗಾಗ ಬಿಡುಗಡೆ ಮಾಡುತ್ತಲೇ ಇವೆ. ಇದೇ ಬೆನ್ನಲ್ಲೇ ಗೂಗಲ್ ಪೇ ತನ್ನ ಬಳಕೆದಾರರಿಗೆ ಇನ್ನಷ್ಟು ಸುಲಭವಾಗಿದೆ. ನಿಯರ್ ಬೈ ಸ್ಪಾಟ್ ವೈಶಿಷ್ಟ್ಯವನ್ನು ಅಭಿವೃದ್ಧಿಪಡಿಸಲಾಗಿದ್ದು, ಈ ಸೇವೆ ಈಗ ದೇಶದ 35 ನಗರಗಳಲ್ಲಿ ಲಭ್ಯವಿದೆ ಎಂದು ಸಂಸ್ಥೆ ತಿಳಿಸಿದೆ.
ಕಳೆದ ತಿಂಗಳು ಗೂಗಲ್ ಪೇ ನಿಯರ್ ಬೈ ಸ್ಪಾಟ್ ಅನ್ನು ಪ್ರಾರಂಭಿಸಿದೆ. ಈ ವೈಶಿಷ್ಟ್ಯದಿಂದ ಯಾವ ಅಂಗಡಿಗಳು ತೆರೆದಿವೆ. ಎಲ್ಲಿ ಅಗತ್ಯ ವಸ್ತುಗಳು ಲಭ್ಯವಾಗುತ್ತವೆ ಎಂಬ ಬಗ್ಗೆ ತಮ್ಮ ಸುತ್ತಮುತ್ತಲ ಪ್ರದೇಶಗಳಲ್ಲಿನ ಅಂಗಡಿಗಳ ಬಗ್ಗೆ ಬಳಕೆದಾರರು ಮಾಹಿತಿ ತಿಳಿದುಕೊಳ್ಳಬಹುದು. ಈ ನಿಯಮದಿಂದ ಸಾಮಾಜಿಕ ಅಂತರದ ವ್ಯವಸ್ಥೆಯನ್ನೂ ಕಾಪಾಡಿಕೊಳ್ಳಬಹುದಾಗಿದೆ.
ಇದಲ್ಲದೇ, ದೇಶಾದ್ಯಂತ ಬಳಕೆದಾರರು ತಮ್ಮ ಅಡುಗೆ ಸಿಲಿಂಡರ್‌ಗಳಾದ ಎಚ್‌ಪಿ ಗ್ಯಾಸ್, ಭಾರತ್ ಪೆಟ್ರೋಲಿಯಂ, ಇಂಡಿಯನ್ ಗ್ಯಾಸ್ಗೆ ಡಿಜಿಟಲ್ ರೂಪದಲ್ಲಿ ಪಾವತಿಸಬಹುದು. ಈ ಮೂರು ಸೇವಾ ಸಂಸ್ಥೆಗಳು ಗೂಗಲ್ ಪೇ ನ ಎಲ್ಲ ಬಳಕೆದಾರರಿಗೆ ಮುಕ್ತವಾಗಿದ್ದಾರೆ ಎಂದು ಕಂಪನಿ ಹೇಳಿದೆ.
ಇಷ್ಟೆ ಅಲ್ಲದೇ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಅಧಿಕೃತ ಸುರಕ್ಷತಾ ಮಾರ್ಗಸೂಚಿಗಳನ್ನು ಒದಗಿಸುವ ಕೊರೊನಾ ವೈರಸ್ ಸ್ಪಾಟ್ ಅನ್ನು ಸಹ ಪ್ರಾರಂಭಿಸಿದೆ. ಪರಿಹಾರ ಕಾರ್ಯಗಳನ್ನು ಬೆಂಬಲಿಸಲು ದೇಣಿಗೆ ಸ್ವೀಕರಿಸುವ ವಿವಿಧ ದತ್ತಿಗಳಿಗೆ ಸಂಪರ್ಕ ಕಲ್ಪಿಸುವ ಕೆಲಸ ಮಾಡುತ್ತಿದೆ. ಇದರಿಂದ ಜನರು ನೇರವಾಗಿ ದೇಣಿಗೆ ನೀಡಬಹುದಾಗಿದೆ.