ಕೊಕ್ (ಬೋಡೋಲ್ಯಾಂಡ್) : ಅಳಿವಿನಂಚಿನಲ್ಲಿರುವ ಗೋಲ್ಡನ್ ಲಂಗೂರ್ ಪ್ರಬೇಧಗಳ ಸಮೀಕ್ಷೆಯನ್ನು ಆರಂಭಿಸಲಾಗಿದೆ.
ಬೋಡೋಲ್ಯಾಂಡ್ ಟೆರಿಟೋರಿಯಲ್ ಕೌನ್ಸಿಲ್(ಎನ್‌ಟಿಸಿ) ಅರಣ್ಯ ಇಲಾಖೆ ಮತ್ತು ಪ್ರೈಮೇಟ್ ರಿಸರ್ಚ್ ಸೆಂಟರ್ ಇನ್ ಇಂಡಿಯಾ ಹಾಗೂ ಎನ್‌ಜಿಒಗಳ ಸಹಯೋಗದೊಂದಿಗೆ ಇಂಡೋ-ಭೂತಾನ್ ಬೆಟ್ಟಗಳ ಪ್ರದೇಶದಲ್ಲಿ ಹಿಮಾಲಯದ ಪರ್ವತಗಳಲ್ಲಿ ಸಮೀಕ್ಷೆ ಆರಂಭಿಸಲಾಗಿದೆ. ಈ ಸಮೀಕ್ಷೆ ಕೊಕ್ರಜಾರ್ ಜಿಲ್ಲೆಯ ಜಿಮ್ದುವಾರ್ ಅರಣ್ಯದಿಂದ ಪ್ರಾರಂಭಿಸಲಾಗಿದೆ. ಆರ್ ಎನ್ ಬೊರೊ ಅವರು ಈ ಸಮೀಕ್ಷೆಗೆ ಚಾಲನೆ ನೀಡಿದ್ದಾರೆ. 24 ತಜ್ಞರ ತಂಡ ಇದರಲ್ಲಿದೆ. ಇದರ ಮುಂದಾಳತ್ವವನ್ನು ಪ್ರೈಮೇಟ್ ರಿಸರ್ಚ್ ಸೆಂಟರ್ನ ವಿಜ್ಞಾನಿ ಡಾ. ಜಿಹೋಸುವೊ ಬಿಸ್ವಾಸ್ ವಹಿಸಲಿದ್ದಾರೆ.
2009ರಲ್ಲಿ ಮನಸ್ ಟೈಗರ್ ರಿಸರ್ವ್ನಲ್ಲಿ ನಡೆಸಲಾದ ಗಣತಿಯಲ್ಲಿ 4231 ಪ್ರಾಣಿಗಳು ಕಂಡು ಬಂದಿದ್ದವು. ಹಾಗೆಯೇ 2016ರಲ್ಲಿ ಚಕ್ರಶಿಲಾ ವನ್ಯಜೀವಿ ಅಭಯಾರಣ್ಯದಲ್ಲಿ ಗಣತಿ ನಡೆಸಲಾಗಿ ಅಲ್ಲಿ 698 ಗೋಲ್ಡನ್ ಲಂಗೂರ್ ಪ್ರಾಣಿಗಳು ಕಂಡು ಬಂದಿವೆ. ಭೂತಾನ್ನಲ್ಲಿ 2003 ರಿಂದ 2019ರವರೆಗೆ ಶೇ.62 ರಷ್ಟು ಇಳಿಮುಖ ಕಂಡು ಬಂದಿದೆ. 6637 ಪ್ರಾಣಿಗಳನ್ನು ಅಂದಾಜು ಮಾಡಲಾಗಿತ್ತಾದರೂ ಪ್ರಸ್ತುತ 2516 ಪ್ರಾಣಿಗಳನ್ನು ಭೂತಾನ್ನಲ್ಲಿವೆ.
ಈ ಸಂಬಂಧ ಡಾ. ಜಿಹೋಸುವೊ ಬಿಸ್ವಾಸ್ ಪ್ರತಿಕ್ರಿಯೆ ನೀಡಿದ್ದು, ಪ್ರಾಣಿಗಳ ಸಂಖ್ಯೆ ಕುಸಿಯಲು ಅವುಗಳಿಗೆ ಸರಿಯಾದ ಅವಾಸ ಸ್ಥಾನ ಸಿಗುತ್ತಿಲ್ಲ ಎಂದಿದ್ದಾರೆ. ಈ ರೀತಿ ಭಾರತದಲ್ಲಿಯೂ ಕೂಡ ಆಗಿದೆ. ಗೋಲ್ಡನ್ ಲಂಗೂರ್ ಸಂಖ್ಯೆ ಹೆಚ್ಚಿಸಲು ಎಲ್ಲ ಜನರಿಗೆ ನಾವು ಮನವಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ಗಣತಿ ಪೂರ್ಣಗೊಂಡ ನಂತರ ಚಕ್ರಶಿಲಾ ವನ್ಯಜೀವಿ ಅಭಯಾರಣ್ಯ ಮತ್ತು ಐ ವ್ಯಾಲಿ ವಿಭಾಗ ಸೇರಿ ದಕ್ಷಿಣ ವ್ಯಾಪ್ತಿಯಲ್ಲಿ ಉಳಿದಿರುವ ಲಂಗೂರ್ಗಳ ಅವಾಸ ಸ್ಥಾನಗಳಲ್ಲಿ ಸಮೀಕ್ಷೆ ನಡೆಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.