ETV Bharat / bharat

ವಿಮಾನ ನಿಲ್ದಾಣದಲ್ಲಿ 6.62 ಕೋಟಿ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ

ಇದೇ ತಿಂಗಳ 3ರಂದು ಸರಿಯಾದ ದಾಖಲೆಗಳಿಲ್ಲದೆ ಚಿನ್ನವನ್ನು ಪಾರ್ಸಲ್​ ಮಾಡಿ ಮುಂಬೈಗೆ ಕಳುಹಿಸಲು ಮುಂದಾಗಿದ್ದರು. ಈ ಬಗ್ಗೆ ಶಂಕೆಗೊಂಡ ಪೊಲೀಸರು ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.

Gold worth Rs 6.62 crore smuggled at airport
ವಿಮಾನ ನಿಲ್ದಾಣದಲ್ಲಿ ಅಕ್ರಮ 6.62 ಕೋಟಿ ಮೌಲ್ಯದ ಚಿನ್ನ ಸಾಗಾಟ
author img

By

Published : Oct 5, 2020, 7:14 AM IST

ಹೈದರಾಬಾದ್​: ಶಂಶಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು ಎಂಟು ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿಮಾನ ನಿಲ್ದಾಣದ ಕಸ್ಟಮ್ಸ್ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದರ ಮೌಲ್ಯ ಸುಮಾರು 6.62 ಕೋಟಿ ರೂ. ಆಗಿದೆ.

ಏರ್​ಪೋರ್ಟ್​ನಲ್ಲಿ 21 ಕೆಜಿ ಚಿನ್ನ ಪತ್ತೆ...

ಇದೇ ತಿಂಗಳ 3ರಂದು ಸರಿಯಾದ ದಾಖಲೆ ಇಲ್ಲದೆ ಚಿನ್ನವನ್ನು ಪಾರ್ಸಲ್​ ಮಾಡಿ ಮುಂಬೈಗೆ ಕಳುಹಿಸಲು ಮುಂದಾಗಿದ್ದರು. ಈ ಬಗ್ಗೆ ಸಂಶಯಗೊಂಡ ಅಧಿಕಾರಿಗಳು ವಿಚಾರಣೆ ನಡೆಸಿದಾಗ, ಪಾರ್ಸಲ್ ಬ್ಯಾಗ್​​ಅನ್ನು ತೆರೆದಿದ್ದಾರೆ. ಅಲ್ಲಿ ವಿವಿಧ ಚಿನ್ನದ ಆಭರಣಗಳು, ವಿದೇಶಿ ಚಿನ್ನದ ಸರಗಳು, ವಜ್ರಗಳು, ಅಮೂಲ್ಯ ಕಲ್ಲುಗಳು, ಸ್ಟೇನ್‌ಲೆಸ್ ಸ್ಟೀಲ್ ಕೈ ಗಡಿಯಾರಗಳು, ಪ್ಲಾಟಿನಂ ಟಾಪ್ಸ್, ಪುರಾತನ ನಾಣ್ಯ ಕಂಡು ಬಂದಿವೆ.

ಕಸ್ಟಮ್ಸ್ ಆಕ್ಟ್ -1962 ಮತ್ತು ಕೇಂದ್ರ ಜಿಎಸ್​​ಟಿ ಕಾಯ್ದೆ -2017 ನಿಬಂಧನೆಗಳ ಅನ್ವಯ ಪ್ರಕರಣ ದಾಖಲು ಮಾಡಲಾಗಿದ್ದು, ಚಿನ್ನದ ಬಿಸ್ಕತ್​​​ 2.37 ಕೆಜಿ ಮತ್ತು ಆಭರಣ 5.63 ಕೆಜಿ ವಶಪಡಿಸಿಕೊಳ್ಳಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.