ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಚೊಚ್ಚಲ ಬಜೆಟ್ ಮಂಡನೆ ಮಾಡಿದ್ದು, ಮೊದಲ ಬಜೆಟ್ನಲ್ಲೇ ಚಿನ್ನಾಭರಣ ಪ್ರೀಯರಿಗೆ ಶಾಕ್ ನೀಡಿದ್ದಾರೆ.
ಪ್ರಧಾನಿ ಮೋದಿ ನೇತೃತ್ವದ ನೂತನ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಿರುವ ಬಜೆಟ್ನಲ್ಲಿ ಬಜೆಟ್ ನಲ್ಲಿ ಬಂಗಾರದ ಮೇಲಿನ ಆಮದು ಸುಂಕ ಶೇ. 10ರಿಂದ 12.5ಕ್ಕೆ ಏರಿಕೆ ಮಾಡಿದ್ದಾರೆ. ಹೀಗಾಗಿ ಚಿನ್ನ ಮತ್ತಷ್ಟು ದುಬಾರಿಯಾಗಲಿದೆ.
ಇದರ ಜತೆಗೆ ಬೆಲೆ ಬಾಳುವ ಲೋಹದ ವಸ್ತುಗಳ ಸಹ ದುಬಾರಿಯಾಗಲಿವೆ. ಸದ್ಯ 10 ಗ್ರಾಂ ಚಿನ್ನದ ಬೆಲೆ ₹ 34,380 ಮತ್ತು ₹ 34,210 ಇದೆ. ರಾಜ್ಯ ರಾಜ್ಯಧಾನಿ ಬೆಂಗಳೂರಿನಲ್ಲಿ 22 ಕ್ಯಾರೆಟ್ನ 10 ಗ್ರಾಂ, ಚಿನ್ನವು ₹ 32,520 ಹಾಗೂ 24 ಕ್ಯಾರೆಟ್ನ 10 ಗ್ರಾಂ. ಚಿನ್ನ ₹ 34,300 ಮಾರಾಟ ಆಗುತ್ತಿದೆ.