ನವದೆಹಲಿ: 2002ರ ಗೋಧ್ರಾ ಹತ್ಯಾಕಾಂಡದ ಅಪರಾಧಿಯಾಗಿರುವ ಕಿಶನ್ ಕೊರಾನಿ ಅವರು ವೈದ್ಯಕೀಯ ಆಧಾರದ ಮೇಲೆ ಜಾಮೀನು ನೀಡುವಂತೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದಾರೆ.
ಅರ್ಜಿ ಪರಿಶೀಲನೆ ನಡೆಸಿದ ಅಪೆಕ್ಸ್ ಕೋರ್ಟ್, ಸಹಾಯಕ ಎಸ್‌ಪಿ ಅಥವಾ ಈ ಹುದ್ದೆಗೆ ಕೆಳಗಿರದ ಅಧಿಕಾರಿಯೊಬ್ಬರು ಅಪರಾಧಿಯ ಆರೋಗ್ಯ ಸ್ಥಿತಿಯ ಬಗ್ಗೆ ಒಂದು ವಾರದೊಳಗೆ ಇಮೇಲ್ ಮೂಲಕ ವರದಿಯನ್ನು ಸಲ್ಲಿಸಬೇಕು ಎಂದು ನ್ಯಾಯಾಲಯವು ನಿರ್ದೇಶಿಸಿದೆ. ನಂತರ ಈ ಜಾಮೀನು ಅರ್ಜಿ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದೆ.
ಇದೇ ಜನವರಿ ತಿಂಗಳಲ್ಲಿ ಸುಪ್ರೀಂಕೋರ್ಟ್, ಗೋಧ್ರಾ ಗಲಭೆಯ ನಂತರದ ಪ್ರಕರಣವೊಂದರಲ್ಲಿ 15 ಜನರಿಗೆ ನೀಡಲಾದ ಜೀವಾವಧಿ ಶಿಕ್ಷೆಗೆ ಜಾಮೀನು ನೀಡಿತ್ತು. ಅಪರಾಧಿಗಳೆಲ್ಲರೂ ಗುಜರಾತ್‌ನಿಂದ ಹೊರಬಂದು ಮಧ್ಯಪ್ರದೇಶದಲ್ಲಿ ಸಾಮಜಿಕ ಸೇವೆಯಲ್ಲಿ ತೊಡಗಿಕೊಳ್ಳಬೇಕು ಎಂಬ ಷರತ್ತನ್ನು ನ್ಯಾಯಾಲಯ ವಿಧಿಸಿತ್ತು.