ಗೊರಖ್ಪುರ್(ಉತ್ತರಪ್ರದೇಶ): ದೇಶಾದ್ಯಂತ ಬಕ್ರೀದ್ ಹಬ್ಬವನ್ನ ಸಡಗರ - ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಈ ನಡುವೆ, ಮಧ್ಯೆ ಮುಸ್ಲಿಂ ಬಾಂಧವರು ಆಡು, ಕುರಿಗಳ ಖರೀದಿಯಲ್ಲಿ ತೊಡಗಿದ್ದಾರೆ. ಇದರ ಮಧ್ಯೆ ಉತ್ತರಪ್ರದೇಶದ ಗೋರಖ್ಪುರ್ನಲ್ಲಿ ಆಡು ಬರೋಬ್ಬರಿ 8 ಲಕ್ಷ ರೂಪಾಯಿಗೆ ಬಿಕರಿಗೊಂಡಿದೆ.
ಈ ಮೇಕೆ ಹೆಸರು ಸಲ್ಮಾನ್ ಎಂದಾಗಿದ್ದು, ಅದರ ಮೈಮೇಲೆ 'ಅಲ್ಲಾ' ಎಂಬ ಹೆಸರಿರುವ ಕಾರಣ ಇಷ್ಟೊಂದು ಹಣಕ್ಕೆ ಮಾರಾಟಗೊಂಡಿದೆ. ಇನ್ನು ಇದರ ಮಾಲೀಕ ಮೊಹಮ್ಮದ್ ನಿಜಾಮುದ್ದೀನ್ ನಿತ್ಯ ಈ ಆಡಿನ ಖರ್ಚಿಗಾಗಿ 700 - 800ರೂ ಖರ್ಚು ಮಾಡಿದ್ದಾರಂತೆ. ಜತೆಗೆ ಮನೆ ಮಂದಿಯಂತೆ ಮನೆಯೊಳಗೆ ಇಟ್ಟುಕೊಂಡಿದ್ದರು.
ಸದ್ಯ ಮುಸ್ಲಿಮರ ಪವಿತ್ರ ಹಬ್ಬ ಬಕ್ರೀದ್ ಆಚರಣೆ ಮಾಡಲಾಗುತ್ತಿರುವ ಕಾರಣ, ಗೊರಖ್ಪುರ ಮಾರುಕಟ್ಟೆಯಲ್ಲಿ ಇದನ್ನ ಮಾರಾಟ ಮಾಡಲು ತೆಗೆದುಕೊಂಡು ಬಂದಾಗ ಖರೀದಿ ಮಾಡಲು ನಾ ಮುಂದು ತಾ ಮುಂದೆ ಎಂದು ಮುಗಿಬಿದ್ದಿದ್ದರು. ಈ ವೇಳೆ ಕೊನೆಯದಾಗಿ 8 ಲಕ್ಷ ರೂಗೆ ಮಾರಾಟಗೊಂಡಿದೆ.