ETV Bharat / bharat

ಗೋವಾದ ಮೊದಲ ಕೊರೊನಾ ಸೋಂಕಿತ ಸಾವು.. ಅಂತಿಮ ವಿಧಿವಿಧಾನ ನಡೆಸಲಿರುವ ಆರೋಗ್ಯ ಇಲಾಖೆ!!

ಮೃತಪಟ್ಟ ವ್ಯಕ್ತಿ ಅಸ್ತಮಾ, ಮಧುಮೇಹ, ದೀರ್ಘಕಾಲದ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದರು. ಮತ್ತು ಕಳೆದ ನಾಲ್ಕು ವರ್ಷಗಳಿಂದ ಹಾಸಿಗೆ ಹಿಡಿದಿದ್ದರು ಎಂದು ಸಿಎಂ ತಿಳಿಸಿದ್ದಾರೆ..

goa corons
ಗೋವಾದ ಮೊದಲ ಕೊರೊನಾ ಸೋಂಕಿತ ಸಾವು
author img

By

Published : Jun 22, 2020, 9:12 PM IST

ಪಣಜಿ(ಗೋವಾ) : ಗೋವಾದ ಮೊದಲ ಕೊವಿಡ್​ -19 ಪ್ರಕರಣ ಬೆಳಕಿಗೆ ಬಂದ ಕೆಲವೇ ಗಂಟೆಗಳಲ್ಲಿ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದಾರೆ.

85 ವರ್ಷದ ವ್ಯಕ್ತಿಗೆ ಕೊರೊನಾ ಪಾಸಿಟಿವ್​ ಬಂದ ಕೆಲವೇ ಗಂಟೆಗಳಲ್ಲಿ ಮೃತಪಟ್ಟಿದ್ದಾರೆ. ಅವರ ಶವವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸುವುದಿಲ್ಲ, ಬದಲಾಗಿ ಅಂತಿಮ ವಿಧಿ ವಿಧಾನವನ್ನು ಸರ್ಕಾರಿ ಅಧಿಕಾರಿಗಳು ನಡೆಸಲಿದ್ದಾರೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದರು.

ಮಾರ್ಗೋವಾದ ಇಎಸ್ಐ ಆಸ್ಪತ್ರೆಯಲ್ಲಿ ನಿಧನರಾದ ಈ ವ್ಯಕ್ತಿ, ಸತ್ತಾರಿ ತಾಲೂಕಿನ ಮೊರ್ಲೆಮ್ ಗ್ರಾಮದ ನಿವಾಸಿಯಾಗಿದ್ದಾರೆ. ಈ ಪ್ರದೇಶವನ್ನು ಕಂಟೇನ್​ಮೆಂಟ್​ ವಲಯವೆಂದು ಘೋಷಿಸಲಾಗಿದೆ ಎಂದು ಸಿಎಂ ತಿಳಿಸಿದರು.

ಮೃತಪಟ್ಟ ವ್ಯಕ್ತಿ ಅಸ್ತಮಾ, ಮಧುಮೇಹ, ದೀರ್ಘಕಾಲದ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದರು. ಮತ್ತು ಕಳೆದ ನಾಲ್ಕು ವರ್ಷಗಳಿಂದ ಹಾಸಿಗೆ ಹಿಡಿದಿದ್ದರು ಎಂದು ಸಿಎಂ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.