ETV Bharat / bharat

ಗೋವಾ ಮುಖ್ಯಮಂತ್ರಿ ಪ್ರಮೋದ್​ ಸಾವಂತ್​ಗೆ ವಕ್ಕರಿಸಿದ ಕೊರೊನಾ - Goa CM Pramod Sawant tests coronavirus positive

ಗೋವಾ ಮುಖ್ಯಮಂತ್ರಿ ಪ್ರಮೋದ್​ ಸಾವಂತ್​ ಅವರಿಗೆ ಕೊರೊನಾ ಮಹಾಮಾರಿ ವಕ್ಕರಿಸಿದೆ. ಇಂದು ಟೆಸ್ಟ್​ ಮಾಡಿಸಿದಾಗ ವರದಿ ಪಾಸಿಟಿವ್​ ಬಂದಿದೆ.

Goa CM Pramod Sawant
ಗೋವಾ ಸಿಎಂ ಪ್ರಮೋದ್​ ಸಾವಂತ್​
author img

By

Published : Sep 2, 2020, 11:59 AM IST

ಪಣಜಿ(ಗೋವಾ): ಮುಖ್ಯಮಂತ್ರಿ ಪ್ರಮೋದ್​ ಸಾವಂತ್​ ಅವರಿಗೆ ಕೊರೊನಾ ತಗುಲಿದೆ. ಈ ವಿಷಯವನ್ನು ಅವರೇ ಖಚಿತಪಡಿಸಿದ್ದಾರೆ.

ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳದೆಯೇ 47 ವರ್ಷದ ಸಿಎಂ ಸಾವಂತ್​ ಅವರಿಗೆ ಸೋಂಕು ಇರುವುದು ದೃಢಪಟ್ಟಿದೆ. ಸದ್ಯ ಅವರು ಹೋಮ್ ಐಸೋಲೇಷನ್​ನಲ್ಲಿ ಇರುವುದಾಗಿ ತಿಳಿಸಿದ್ದಾರೆ.

'ಕೊರೊನಾ ಪರೀಕ್ಷೆ ಮಾಡಿಸಿಕೊಂಡಾಗ ನನಗೆ ಸೋಂಕು ಇರುವುದು ದೃಢಪಟ್ಟಿದೆ. ಹಾಗಾಗಿ ಸ್ವಇಚ್ಛೆಯಿಂದ ಹೋಮ್​ ಐಸೋಲೇಷನ್​ನಲ್ಲಿರುವೆ. ಸದ್ಯಕ್ಕೆ ಮನೆಯಿಂದಲೇ ಸರ್ಕಾರದ ಕಾರ್ಯಗಳನ್ನು ನಿರ್ವಹಿಸುವೆ. ಶೀಘ್ರದಲ್ಲೇ ಗುಣಮುಖನಾಗಿ ಹೊರಬರುವೆ. ನನ್ನ ಸಂಪರ್ಕದಲ್ಲಿದ್ದವರೆಲ್ಲರೂ ಕೊರೊನಾ ಪರೀಕ್ಷೆ ಮಾಡಿಸಿಕೊಂಡು, ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ' ಸಾವಂತ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.