ನವದೆಹಲಿ: ಜಗತ್ತು ಸಾಮಾನ್ಯ ಸ್ಥಿತಿಗೆ ಬರಬೇಕಾದರೆ ಕೊರೊನಾ ಸೋಂಕು ನಿವಾರಣೆಗೆ ವಿಶ್ವದ ಯಾವುದೇ ದೇಶಗಳು ಸದ್ಯ ಬಳಸುತ್ತಿರುವ ಪರಿಣಾಮಕಾರಿ ಔಷಧಗಳ ಹಂಚಿಕೆ ಮತ್ತು ಸಹಕಾರ ಮುಖ್ಯವಾಗುತ್ತದೆ ಎಂದು ವಿಶ್ವ ಆರ್ಥಿಕ ವೇದಿಕೆ ಅಭಿಪ್ರಾಯಪಟ್ಟಿದೆ.
ಕೋವಿಡ್-19ಗೆ ಲಸಿಕೆ ಕಂಡುಹಿಡಿಯಲು ವಿಶ್ವಾದ್ಯಂತ ಪ್ರಯತ್ನ ನಡೆಯುತ್ತಿದೆ. ಆದರೆ ಪರಿಣಾಮಕಾರಿ ಲಸಿಕೆ ಅಥವಾ ಔಷಧಿ ಅಭಿವೃದ್ಧಿಪಡಿಸಲು ಮತ್ತು ಅವುಗಳನ್ನು ವಿತರಿಸಲು ಹಲವಾರು ಅಡೆತಡೆಗಳಿವೆ ಎಂದು ಹೇಳಿದೆ.
ಕೊರೊನಾ ತಡೆಗಟ್ಟಲು ಪರಿಣಾಮಕಾರಿ ಲಸಿಕೆ ಕಂಡುಹಿಡಿಯುವ ಸ್ಪರ್ಧೆ ಮುಂದುವರಿಯುತ್ತಿದೆ. ಆದರೂ ನಿಖರ ಔಷಧಿ ಇನ್ನೂ ದೊರಕಿಲ್ಲ ಎಂದಿದೆ.