ಮೆಲ್ಬೋರ್ನ್: ಮಾನಸಿಕ ಸಮಸ್ಯೆಯಿಂದಾಗಿ ಕ್ರಿಕೆಟ್‍ನಿಂದ ಅಲ್ಪ ವಿರಾಮ ತೆಗೆದುಕೊಂಡಿದ್ದ ಆಸ್ಟ್ರೇಲಿಯಾ ಸ್ಟಾರ್ ಆಲ್‍ರೌಂಡರ್ ಗ್ಲೇನ್ ಮ್ಯಾಕ್ಸ್‌ವೆಲ್ ಈಗ 9ನೇ ಆವೃತ್ತಿಯ ಬಿಗ್ಬ್ಯಾಷ್ ಲೀಗ್ಗೆ ತೆರಳಲು ಸಜ್ಜಾಗಿದ್ದಾರೆ.
ಅಕ್ಟೋಬರ್‌ನಲ್ಲಿ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಮಾನಸಿಕ ಆರೋಗ್ಯ ಸಮಸ್ಯೆ ಎಂದು ವಿಶ್ರಾಂತಿ ಪಡೆದುಕೊಂಡಿದ್ದರು. ಮೆಲ್ಬೋರ್ನ್ ಸ್ಟಾರ್ಸ್ ತಂಡದ ಪರ ಮ್ಯಾಕ್ಸ್‌ವೆಲ್ ಆಡಲಿದ್ದಾರೆ. ಈಗಾಗಲೇ ತಂಡದ ಪರ ಅಭ್ಯಾಸ ನಡೆಸುತ್ತಿದ್ದಾರೆ. ಮೆಲ್ಬೋರ್ನ್ ಸ್ಟಾರ್ಸ್ ತಂಡ ಮೊದಲ ಪಂದ್ಯ ಡಿ.20ರಂದು ಬ್ರಿಸ್ಬೇನ್ ವಿರುದ್ಧ ನಡೆಯಲಿದೆ.
-
Virat Kohli on Glenn Maxwell, who is on a break from cricket for mental health reasons. pic.twitter.com/0YbJEmcUKV
— ICC (@ICC) November 13, 2019 " class="align-text-top noRightClick twitterSection" data="
">Virat Kohli on Glenn Maxwell, who is on a break from cricket for mental health reasons. pic.twitter.com/0YbJEmcUKV
— ICC (@ICC) November 13, 2019Virat Kohli on Glenn Maxwell, who is on a break from cricket for mental health reasons. pic.twitter.com/0YbJEmcUKV
— ICC (@ICC) November 13, 2019
ಗ್ಲೇನ್ ಮ್ಯಾಕ್ಸ್ವೇಲ್ ತಂಡಕ್ಕೆ ಮರಳುತ್ತಿರುವುದು ಸಂತೋಷದ ವಿಷಯ. ಅವರೊಂದು ಅದ್ಭುತ ಪ್ರತಿಭೆ. ಆರೋಗ್ಯದಲ್ಲಿ ಚೇತರಿಕೆ ಕಾಣಲು ಸಮಯ ಹಿಡಿಯಿತು ಅಷ್ಟೇ ಎಂದು ಆಸ್ಟ್ರೇಲಿಯಾ ತಂಡದ ಕೋಚ್ ಡೇವಿಡ್ ಹಸ್ಸಿ ತಿಳಿಸಿದರು.
ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಸಂದರ್ಭದಲ್ಲಿ ದೂರ ಉಳಿದಿದ್ದ ಮ್ಯಾಕ್ಸ್‌ವೆಲ್ ವಿಕ್ಟೋರಿಯಾ ಶೆಫೀಲ್ಡ್ ತಂಡದೊಂದಿಗೆ ಸೇರಿ ಪುನರಾಗಮನದತ್ತ ಹೆಜ್ಜೆಯಿಟ್ಟರು. ಬಳಿಕ ವಿಕ್ಟೋರಿಯನ್ ಪ್ರೀಮಿಯರ್ ಕ್ರಿಕೆಟ್‌ನಲ್ಲಿ ಆಡಿದ್ದರು.
ಮೂರು ಟಿ20 ಶತಕಗಳನ್ನು ಬಾರಿಸಿರುವ ಮ್ಯಾಕ್ಸ್‌ವೆಲ್ ಡಿಸೆಂಬರ್ 19ರಂದು ನಡೆಯಲಿರುವ ಐಪಿಎಲ್ ಹರಾಜಿನಲ್ಲೂ ಇದ್ದಾರೆ. ಅಲ್ಲದೆ ಮೂಲ ಬೆಲೆ ₹2 ಕೋಟಿ ಹೊಂದಿದ್ದಾರೆ. ನಾನು ಸಾಕಷ್ಟು ಮಾನಸಿಕ ಮತ್ತು ದೈಹಿಕವಾಗಿ ಕುಗ್ಗಿದ್ದೆ ಎಂದು ಮ್ಯಾಕ್ಸ್‌ವೆಲ್ ಹೇಳಿದರು.