ಹೈದರಾಬಾದ್ : ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ( ಜಿಹೆಚ್‌ಎಂಸಿ ) ಚುನಾವಣೆಯ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ರಾಜ್ಯ ಚುನಾವಣಾ ಆಯುಕ್ತ ಪಾರ್ಥಸಾರಥಿ ಈ ಕುರಿತು ಪ್ರಕಟಣೆ ಹೊರಡಿಸಿದ್ದಾರೆ.
ಮತದಾನ : ಮತದಾನ ಡಿಸೆಂಬರ್ 1 ರಂದು ನಡೆಯಲಿದ್ದು, ಅಗತ್ಯವಿದ್ದರೆ ಡಿಸೆಂಬರ್ 3 ರಂದು ಮರು ವೋಟಿಂಗ್ ನಡೆಯಲಿದೆ. ಡಿಸೆಂಬರ್ 4ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ನಾಳೆಯಿಂದ ನಾಮಪತ್ರಗಳನ್ನು ಸಲ್ಲಿಸಬಹುದಾಗಿದ್ದು, ನಾಮಪತ್ರ ಸಲ್ಲಿಕೆಗೆ ನವೆಂಬರ್ 20 ಕೊನೆಯ ದಿನವಾಗಿದೆ. ನಾಮಪತ್ರಗಳನ್ನು ನವೆಂಬರ್ 21ರಂದು ಪರಿಶೀಲಿಸಲಾಗುವುದು. ನವೆಂಬರ್ 24 ರಂದು ನಾಮಪತ್ರ ಹಿಂಪಡೆಯಬಹುದಾಗಿದೆ.
ಮತದಾರರು : ಒಟ್ಟು 74,04,286 ಮತದಾರರ ಪೈಕಿ, 38,56,770 ಪುರುಷ ಮತದಾರರು ಹಾಗೂ 35,46,847 ಮಹಿಳಾ ಮತದಾರರು ಇದ್ದಾರೆ. ಇತರ 669 ಮತದಾದರು ಇದ್ದಾರೆ. ಒಟ್ಟು 150 ವಾರ್ಡ್‌ಗಳಲ್ಲಿ ಮತದಾನ ನಡೆಯಲಿದ್ದು, 9,248 ಮತದಾನ ಕೇಂದ್ರಗಳಲ್ಲಿ ಮತದಾನ ನಡೆಯಲಿದೆ.